ಅಚ್ಚರಿಗಳ ಭಾರತ: ಮಿಜೊ಼ರಾಂನಲ್ಲಿ ಅಂಗಡಿಯವರಿಲ್ಲದೇ ನಡೆಯುತ್ತೆ ವ್ಯವಹಾರ
ರಾಷ್ಟ್ರೀಯ

ಅಚ್ಚರಿಗಳ ಭಾರತ: ಮಿಜೊ಼ರಾಂನಲ್ಲಿ ಅಂಗಡಿಯವರಿಲ್ಲದೇ ನಡೆಯುತ್ತೆ ವ್ಯವಹಾರ

ಜನರು ಕಳ್ಳತನ ಮಾಡುತ್ತಾರೆಂಬ ಭಯದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಕಾಲಘಟ್ಟದಲ್ಲಿ ನಾವಿರುವಾಗ, ಅಂಗಡಿಯಲ್ಲಿ ಯಾರೂ ಇಲ್ಲದಿದ್ದರೂ ಅಂಗಡಿಯ ಬಾಗಿಲನ್ನು ತೆರೆದೇ ಇಡುವಂತಹ ಪರಿಪಾಠ, ದೇಶದ ಬೇರಾವ ಮೂಲೆಯಲ್ಲಿಯೂ ಕಾಣ ಸಿಗುವುದಿಲ್ಲ.

ಪ್ರತಿಧ್ವನಿ ವರದಿ

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಭಾರತದಲ್ಲಿರುವ ಸಂಸ್ಕೃತಿಗಳು ಅಚ್ಚರಿ ಮೂಡಿಸುವಂತದ್ದು. ಅದರಲ್ಲೂ, ಈಶಾನ್ಯ ರಾಜ್ಯಗಳ ಹಲವಾರು ಸಂಸ್ಕೃತಿಗಳು ಇಲ್ಲಿನವರಿಗೆ ಅಷ್ಟೋಂದು ಪರಿಚಿತವಲ್ಲ. ಅಂತಹುದೇ ಒಂದು ʼಸಂಸ್ಕೃತಿʼ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ.

ಮಿಜೊ಼ರಾಂನ ರಾಜಧಾನಿ ಐಜ್ವಾಲ್‌ನಿಂದ ಕೆಲವೇ ಕಿಲೋಮೀಟರ್‌ಗಳಷ್ಟು ದೂರವಿರುವ ಒಂದು ಹಳ್ಳಿಯ ಅಂಗಡಿಗಳಲ್ಲಿ ನಿಮಗೆ ವ್ಯಾಪಾರಿಗಳೇ ಕಾಣಸಿಗುವುದಿಲ್ಲ. ಇದು ಅಚ್ಚರಿಯಾದರೂ ಸತ್ಯ. ಅಂಗಡಿಗಳ ಬಾಗಿಲು ತೆರೆದಿರುತ್ತದೆ. ಮಾರಾಟದ ವಸ್ತುಗಳು ಕೂಡಾ ಲಭ್ಯವಿರುತ್ತದೆ. ಆದರೆ, ಮಾರಾಟ ಮಾಡಲು ಯಾರೂ ಇರುವುದಿಲ್ಲ.

ಮಿಜೊ಼ರಾಂನ ಸಂಸ್ಕೃತಿಯ ಪ್ರಕಾರ ಇದನ್ನು ʼನಾಹ್‌ ಲೌ ಡಾವ್ರ್‌ʼ (Nghah Lou Dawr culture) ಎಂದು ಕರೆಯುತ್ತಾರೆ. ಸಮಾಜಕ್ಕೆ ಒಂದು ಒಳ್ಳೆಯ ನಿದರ್ಶನ ನೀಡುವ ಈ ಅಂಗಡಿಗಳಲ್ಲಿ, ಒಂದು ಸಣ್ಣ ಡಬ್ಬಿಯನ್ನಿಟ್ಟಿರುತ್ತಾರೆ. ನೀವು ಖರೀದಿಸಿದ ವಸ್ತುವಿನ ಹಣವನ್ನು ಆ ಡಬ್ಬಿಯಲ್ಲಿಟ್ಟು ನೀವು ಹೊರಟರೆ ಸಾಕು. ಇಲ್ಲಿ ಮೋಸ ಮಾಡುವ ಜನರೂ ಸಾಕಷ್ಟು ಕಡಿಮೆ. ಇತ್ತೀಚಿಗೆ ಮೈ ಹೋಮ್‌ ಇಂಡಿಯಾ ಎಂಬ ಸರ್ಕಾರೇತರ ಸಂಸ್ಥೆ ಇಂತಹುದೇ ಒಂದು ಅಂಗಡಿಯ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರಿಂದ ಮತ್ತೆ ಈ ವಿಚಾರ ಮುನ್ನೆಲೆಗೆ ಬಂದಿದೆ.

ಜನರು ಕಳ್ಳತನ ಮಾಡುತ್ತಾರೆಂಬ ಭಯದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಕಾಲಘಟ್ಟದಲ್ಲಿ ನಾವಿರುವಾಗ, ಅಂಗಡಿಯಲ್ಲಿ ಯಾರೂ ಇಲ್ಲದಿದ್ದರೂ ಅಂಗಡಿಯ ಬಾಗಿಲನ್ನು ತೆರೆದೇ ಇಡುವಂತಹ ಪರಿಪಾಠ, ದೇಶದ ಬೇರಾವ ಮೂಲೆಯಲ್ಲಿಯೂ ಕಾಣ ಸಿಗುವುದಿಲ್ಲ. ʼನಂಬಿಕೆʼಯ ಆಧಾರದ ಮೇಲೆ ಸಂಪೂರ್ಣ ವ್ಯವಹಾರ ನಡೆಯುತ್ತದೆ.

ಯಾವುದೇ ಚೌಕಾಸಿ ಇಲ್ಲ. ಚೌಕಾಸಿ ಮಾಡಲು ಯಾರೂ ಸಿಗುವುದೂ ಇಲ್ಲ. ನೀವು ಹಣ ಇಟ್ಟರೂ, ಇಡದಿದ್ದರೂ ಕೇಳುವವರಿಲ್ಲ. ಆದರೂ, ಮಿಜೊ಼ರಾಂನ ಜನ ಅಲ್ಲಿನ ಗ್ರಾಹಕರ ಮೇಲಿನ ನಂಬಿಕೆಯಿಂದ ಅಂಗಡಿಯನ್ನು ತೆರೆದಿಟ್ಟು ಹೊರಡುತ್ತಾರೆ. ನಂಬಿಕೆಗೆ ನಿಜವಾದ ಅರ್ಥವನ್ನು ಕಲ್ಪಿಸಿಕೊಡುವ ನಿದರ್ಶನ ಇದಾಗಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com