ತಮಿಳುನಾಡು ಪಟಾಕಿ ತಯಾರಿಕಾ ಘಟಕದಲ್ಲಿ ಸ್ಪೋಟ: ಒಂಭತ್ತು ಸಾವು
ರಾಷ್ಟ್ರೀಯ

ತಮಿಳುನಾಡು ಪಟಾಕಿ ತಯಾರಿಕಾ ಘಟಕದಲ್ಲಿ ಸ್ಪೋಟ: ಒಂಭತ್ತು ಸಾವು

ಸ್ಪೋಟದ ಸದ್ದು ಘಟನಾ ಸ್ಥಳದಿಂದ ಐದು ಕಿಮೀ. ದೂರದವೆರೆಗೆ ಕೇಳಿಸಿದೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ. ಸದ್ಯ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಸುತ್ತಮುತ್ತಲಿನ 10 ಅಗ್ನಿಶಾಮಕ ದಳದ ಘಟಕಗಳು ರಕ್ಷಣಾ ಚಟುವಟಿಕೆಯಲ್ಲಿ ತೊಡಗಿವೆ.

ಪ್ರತಿಧ್ವನಿ ವರದಿ

ಶುಕ್ರವಾರ ತಮಿಳುನಾಡಿನ ಕಡಲೂರು ಜಿಲ್ಲೆಯ ಕಟ್ಟುಮನರ್ಕೋಯಿಲ್ ಪಟ್ಟಣದ ಪಟಾಕಿ ತಯಾರಿಕಾ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಟ ಒಂಭತ್ತು ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಐವರು ಗಂಭೀರ ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ವರದಿ ತಿಳಿಸಿದೆ. ವರದಿಯ ಪ್ರಕಾರ, ಸತ್ತವರೆಲ್ಲರೂ ಮಹಿಳೆಯರು ಎಂದು ಹೇಳಲಾಗಿದೆ.

ಗಾಯಾಳುಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸಾಮಿ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಧನ ಘೋಷಿಸಿದ್ದಾರೆ.

ಶುಕ್ರವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಈ ಘಟಕವು ಕುರುಂಗುಡಿ ಗ್ರಾಮದ ಗಾಂಧಿಮತಿ ಎಂಬಾಕೆಗೆ ಸೇರಿದ್ದು, ಆಕೆಯ ಮಗಳ ಜೊತೆಗೆ ಆಕೆಯೂ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಸ್ಪೋಟದ ಸದ್ದು ಘಟನಾ ಸ್ಥಳದಿಂದ ಐದು ಕಿಮೀ. ದೂರದವೆರೆಗೆ ಕೇಳಿಸಿದೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ. ಸದ್ಯ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಸುತ್ತಮುತ್ತಲಿನ 10 ಅಗ್ನಿಶಾಮಕ ದಳದ ಘಟಕಗಳು ರಕ್ಷಣಾ ಚಟುವಟಿಕೆಯಲ್ಲಿ ತೊಡಗಿವೆ.

ಕಡಲೂರು ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಅಭಿನವ್ ಅವರು ಸ್ಥಳದಲ್ಲಿ ವಿಚಾರಣೆ ನಡೆಸಿದರು. ಪಟಾಕಿ ಘಟಕವು ಪರವಾನಗಿ ಪಡೆದಿದೆ ಎಂದು ಕಾಟುಮನಾರ್ಕೋಯಿಲ್ ಪೊಲೀಸರು ತಿಳಿಸಿದ್ದಾರೆ. ಕುರುಂಗುಡಿ ಗ್ರಾಮದಲ್ಲಿ 10 ಕ್ಕೂ ಹೆಚ್ಚು ಪಟಾಕಿ ತಯಾರಿಕಾ ಘಟಕಗಳು ಕಾರ್ಯಾಚರಿಸುತ್ತಿವೆ.

Click here to follow us on Facebook , Twitter, YouTube, Telegram

Pratidhvani
www.pratidhvani.com