ಗ್ರಾಮ ಪಂಚಾಯತಿ ಚುನಾವಣೆ: ಮಾರ್ಗಸೂಚಿ ಪ್ರಕಟಣೆ
ರಾಷ್ಟ್ರೀಯ

ಗ್ರಾಮ ಪಂಚಾಯತಿ ಚುನಾವಣೆ: ಮಾರ್ಗಸೂಚಿ ಪ್ರಕಟಣೆ

ಕೋವಿಡ್ ಹಿನ್ನಲೆಯಲ್ಲಿ ಗ್ರಾಮ ಪಂಚಾಯತಿ ಚುನಾವಣೆಗೆ ಅನುಸರಿಸಬೇಕಾದ ನಿಯಮಗಳು ಅಥವಾ ಮಾರ್ಗಸೂಚಿಯನ್ನು ಕೇಂದ್ರ ಗೃಹ ಮಂತ್ರಾಲಯ ಹಾಗೂ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಿಸಿದೆ.

ಪ್ರತಿಧ್ವನಿ ವರದಿ

ಮಾರ್ಗಸೂಚಿಯಂತೆ ಚುನಾವಣೆಯಲ್ಲಿ ನಿರತರಾದವರು ಮಾಸ್ಕ್ ಧರಿಸುವುದು ಕಡ್ಡಾಯಪಡಿಸಲಾಗಿದೆ. ಚುನಾವಣಾ ಕಾರ್ಯಕ್ಕೆ ಉಪಯೋಗಿಸುವ ಕೊಠಡಿ ಪ್ರವೇಶಕ್ಕೆ ಮುನ್ನ ಕೈ ಸ್ಯಾನಿಟೈಸ್ ಮಾಡಬೇಕು. ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ. ವಿಶಾಲವಾದ ಕೊಠಡಿಗಳಲ್ಲಿ ಚುನಾವಣೆ ಮಾಡುವುದು, ಸಾಮಾಜಿಕ ಅಂತರ ಕಡ್ಡಾಯ ಹಾಗೂ ಚುನಾವಣಾ ಸಾಮಾಗ್ರಿ ದಾಸ್ತಾನು ಮಾಡಿದ ಕೊಠಡಿ‌ ಸ್ಯಾನಿಟೈಸ್ ಮಾಡುವುದು ಮತ್ತು ಚುನಾವಣೆ ಕರ್ತವ್ಯಕ್ಕೆ ಗೊತ್ತುಪಡಿಸಿದ ಸಿಬ್ಬಂದಿಗೆ ಮಾತ್ರ ಕೊಠಡಿ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಗ್ರಾಮ ಪಂಚಾಯತಿ ಚುನಾವಣೆ: ಮಾರ್ಗಸೂಚಿ ಪ್ರಕಟಣೆ
ಗ್ರಾಮ ಪಂಚಾಯತಿ ಚುನಾವಣೆ: ಮಾರ್ಗಸೂಚಿ ಪ್ರಕಟಣೆ
ಗ್ರಾಮ ಪಂಚಾಯತಿ ಚುನಾವಣೆ: ಮಾರ್ಗಸೂಚಿ ಪ್ರಕಟಣೆ
ಗ್ರಾಮ ಪಂಚಾಯತಿ ಚುನಾವಣೆ: ಮಾರ್ಗಸೂಚಿ ಪ್ರಕಟಣೆ

Click here to follow us on Facebook , Twitter, YouTube, Telegram

Pratidhvani
www.pratidhvani.com