ತಮಿಳುನಾಡು ಬಿಜೆಪಿ ಉಪಾಧ್ಯಕ್ಷನಾಗಿ ಮಾಜಿ IPS ಅಧಿಕಾರಿ ಅಣ್ಣಾಮಲೈ
ರಾಷ್ಟ್ರೀಯ

ತಮಿಳುನಾಡು ಬಿಜೆಪಿ ಉಪಾಧ್ಯಕ್ಷನಾಗಿ ಮಾಜಿ IPS ಅಧಿಕಾರಿ ಅಣ್ಣಾಮಲೈ

ರಾಜಕೀಯ ವಿಶ್ಲೇಷಕರ ಊಹೆಯಂತೆಯೇ ಅಣ್ಣಾಮಲೈ, ಅಗಸ್ಟ್‌ 25 ರಂದು ಅಧಿಕೃತವಾಗಿ ಬಿಜೆಪಿ ಪಕ್ಷ ಸೇರಿಕೊಂಡಿದ್ದರು. ಸೇರಿಕೊಂಡ ನಾಲಕ್ಕೇ ದಿನಗಳ ಅಂತರದಲ್ಲಿ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.

ಪ್ರತಿಧ್ವನಿ ವರದಿ

ಆಗಸ್ಟ್‌ 25 ರಂದು ಭಾರತೀಯ ಜನತಾ ಪಕ್ಷ ಸೇರಿಕೊಂಡ ಮಾಜಿ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಇದೀಗ ತಮಿಳುನಾಡು ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.

ಕರ್ನಾಟಕದಲ್ಲಿ ದಕ್ಷ ಅಧಿಕಾರಿಯಾಗಿ ಹೆಸರುವಾಸಿಯಾಗಿದ್ದ ಅಣ್ಣಾಮಲೈ ರಾಜ್ಯದಲ್ಲಿ ಸಾಕಷ್ಟು ಯುವಜನಾಂಗಕ್ಕೆ ಪ್ರಭಾವಿ ಬೀರಿದ್ದರು. ಹೈನುಗಾರಿಕೆ ನಡೆಸುತ್ತೇನೆ, ಕುಟುಂಬದೊಂದಿಗೆ ಕಾಲಕಳೆಯಬೇಕೆಂದು ರಾಜಿನಾಮೆ ವೇಳೆ ಇಂಗಿತ ವ್ಯಕ್ತಪಡಿಸಿದ್ದ ಅಣ್ಣಾಮಲೈ ಬಿಜೆಪಿ ಸೇರುತ್ತಾರೆಂಬ ಪುಕಾರು ಅವರ ರಾಜಿನಾಮೆಯೊಂದಿಗೆ ಹುಟ್ಟಿಕೊಂಡಿತ್ತು.

ರಾಜಕೀಯ ವಿಶ್ಲೇಷಕರ ಊಹೆಯಂತೆಯೇ ಅಣ್ಣಾಮಲೈ, ಅಗಸ್ಟ್‌ 25 ರಂದು ಅಧಿಕೃತವಾಗಿ ಬಿಜೆಪಿ ಪಕ್ಷ ಸೇರಿಕೊಂಡಿದ್ದರು. ಸೇರಿಕೊಂಡ ನಾಲಕ್ಕೇ ದಿನಗಳ ಅಂತರದಲ್ಲಿ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.

ಕಾಡುಗಳ್ಳ ವೀರಪ್ಪನ್‌ ಪುತ್ರಿ ವಿದ್ಯಾ ವೀರಪ್ಪನ್ ‌ ಅವರು ಇತ್ತೀಚಿಗೆ ತಮಿಳುನಾಡು ಬಿಜೆಪಿಯ ಯುವ ಮೋರ್ಚಾ ನಾಯಕಿಯಾಗಿ ಆಯ್ಕೆಗೊಂಡಿದ್ದರು.

Click here to follow us on Facebook , Twitter, YouTube, Telegram

Pratidhvani
www.pratidhvani.com