ಅನಿಲ್‌ ಅಂಬಾನಿ ವಿರುದ್ದದ ಪ್ರಕರಣದ ವಿಚಾರಣೆಗೆ ತಡೆ ನೀಡಿದ ದೆಹಲಿ ಹೈಕೋರ್ಟ್‌
ರಾಷ್ಟ್ರೀಯ

ಅನಿಲ್‌ ಅಂಬಾನಿ ವಿರುದ್ದದ ಪ್ರಕರಣದ ವಿಚಾರಣೆಗೆ ತಡೆ ನೀಡಿದ ದೆಹಲಿ ಹೈಕೋರ್ಟ್‌

ಈ ಪ್ರಕರಣದ ಕುರಿತ ಮುಂದಿನ ವಿಚಾರಣೆಯನ್ನು ಅಕ್ಟೋಬರ್‌ 6ರಂದು ಮುಂದೂಡಲಾಗಿದೆ.

ಪ್ರತಿಧ್ವನಿ ವರದಿ

ರಿಲಾಯನ್ಸ್‌ ಗ್ರೂಪ್‌ ಮುಖ್ಯಸ್ಥ ಅನಿಲ್‌ ಅಂಬಾನಿ ವಿರುದ್ದ ನಡೆಯುತ್ತಿರುವ ದೀವಾಳಿತನದ ಪ್ರಕರಣದ ವಿಚಾರಣೆಗೆ ದೆಹಲಿ ಹೈಕೋರ್ಟ್‌ ತಡೆ ನೀಡಿದೆ. ಆದರೆ, ಅನಿಲ್‌ ಅಂಬಾನಿ ತನ್ನ ಯಾವುದೇ ಸೊತ್ತನ್ನು ಮಾರಲು ಅಥವಾ ಇತರರ ಹೆಸರಿಗೆ ವರ್ಗಾಯಿಸಲು ಕೂಡಾ ತಡೆ ಒಡ್ಡಿದೆ.

ವಿಚಾರಣೆಗೆ ತಡೆ ನೀಡಿರುವುದು ಅನಿಲ್‌ ಅಂಬಾನಿ ಪಾಲಿಗೆ ವರವಾಗಿ ಪರಿಣಮಿಸಿದೆ. SBI ಬ್ಯಾಂಕ್‌ ರಿಲಯನ್ಸ್‌ ಕಮ್ಯೂನಿಕೇಷನ್‌ ಲಿಮಿಟೆಡ್‌ ಮತ್ತು ರಿಲಾಯನ್ಸ್‌ ಇನ್ಫ್ರಾಟೆಲ್‌ ಲಿಮಿಟೆಡ್‌ ಕಂಪೆನಿಗೆ, ಅನಿಲ್‌ ಅಂಬಾನಿಯ ವೈಯಕ್ತಿಕ ಜಾಮೀನಿನ ಮೇಲೆ ರೂ. 1,195 ಕೋಟಿಗಳಷ್ಟು ಸಾಲವನ್ನು ನೀಡಿತ್ತು. ಎರಡೂ ಕಂಪೆನಿಗಳು ಸಾಲವನ್ನು ತೀರಿಸಲಾಗದೇ, ಇದ್ದುದರಿಂದ ಕಳೆದ ಮಾರ್ಚ್‌ ತಿಂಗಳಲ್ಲಿ SBI ಅಂಬಾನಿ ವಿರುದ್ದ ಪ್ರಕರಣವನ್ನು ದಾಖಲಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣ ದಾಖಲಾದ ಸೆಕ್ಷನ್‌ಗಳನ್ನು ಪ್ರಶ್ನಿಸಿ ಅನಿಲ್‌ ಅಂಬಾನಿ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಪ್ರಕರಣದ ಕುರಿತ ಮುಂದಿನ ವಿಚಾರಣೆಯನ್ನು ಅಕ್ಟೋಬರ್‌ 6ರಂದು ಮುಂದೂಡಲಾಗಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com