ಮೊಹರಂ ಮೆರವಣಿಗೆಗೆ ತಡೆ: ಕೋವಿಡ್ ಹರಡುವಿಕೆಗೆ ಒಂದು ಸಮುದಾಯವನ್ನು ಗುರಿಯಾಗಿಸಲಾಗುತ್ತದೆ- ಸುಪ್ರೀಂ
ರಾಷ್ಟ್ರೀಯ

ಮೊಹರಂ ಮೆರವಣಿಗೆಗೆ ತಡೆ: ಕೋವಿಡ್ ಹರಡುವಿಕೆಗೆ ಒಂದು ಸಮುದಾಯವನ್ನು ಗುರಿಯಾಗಿಸಲಾಗುತ್ತದೆ- ಸುಪ್ರೀಂ

ಇಡೀ ದೇಶಕ್ಕೆ ಏಕ ರೀತಿಯ ಮಾರ್ಗಸೂಚಿ ನೀಡುವುದರಿಂದ ಹಲವು ರೀತಿಯ ಗೊಂದಲಗಳಿಗೆ ಕಾರಣವಾಗಬಹುದು ಹಾಗೂ ನಿರ್ದಿಷ್ಟ ಸಮುದಾಯವು ಕರೋನವೈರಸ್ ಹರಡುವ ಆಪಾದನೆಯನ್ನು ಹೊರಬೇಕಾಗಿ ಬಂದೀತು ಎಂದು ನ್ಯಾಯಾಲಯ ಹೇಳಿದೆ.

ಪ್ರತಿಧ್ವನಿ ವರದಿ

ಮೊಹರಂ ಮೆರವಣಿಗೆ ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಅನುಮತಿಯನ್ನು ನಿರಾಕರಿಸಿದೆ. ಇಡೀ ದೇಶಕ್ಕೆ ಏಕ ರೀತಿಯ ಮಾರ್ಗಸೂಚಿ ನೀಡುವುದರಿಂದ ಹಲವು ರೀತಿಯ ಗೊಂದಲಗಳಿಗೆ ಕಾರಣವಾಗಬಹುದು ಹಾಗೂ ನಿರ್ದಿಷ್ಟ ಸಮುದಾಯವು ಕರೋನವೈರಸ್ ಹರಡುವ ಆಪಾದನೆಯನ್ನು ಹೊರಬೇಕಾಗಿ ಬಂದೀತು ಎಂದು ನ್ಯಾಯಾಲಯ ಹೇಳಿದೆ.

ಲಕ್ನೋ ಮೂಲದ ಶಿಯಾ ನಾಯಕ ಸೈಯದ್ ಕಲ್ಬೆ ಜವಾದ್ ಅವರ ಲಖನೌನಲ್ಲಿ ಮೊಹರಂ ಮೆರವಣಿಗೆ ನಡೆಸಲು ಮನವಿ ಸಲ್ಲಿಸಿದ ಅರ್ಜಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಹಾಗೂ ನ್ಯಾಯಮೂರ್ತಿಗಳಾದ ಎಸ್ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನೊಳಗೊಂಡ ನ್ಯಾಯಪೀಠವು ಲಖನೌನಲ್ಲಿ ಮೆರವಣಿಗೆ ನಡೆಸಲು ಅನುಮತಿಗೆ ಅಲಹಾಬಾದ್ ಹೈಕೋರ್ಟ್ ಅನ್ನು ಸಂಪರ್ಕಿಸುವಂತೆ ನಿರ್ದೇಶಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

"ನೀವು ಸಾಮಾನ್ಯ ಮಾರ್ಗಸೂಚಿಯನ್ನು ಕೇಳುತ್ತಿದ್ದೀರಿ, ನಾವು ಇದನ್ನು ಅನುಮತಿಸಿದರೆ ಗೊಂದಲ, ಅವ್ಯವಸ್ಥೆ ಉಂಟಾಗುತ್ತದೆ. COVID ಹರಡುವಿಕೆಗೆ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಲಾಗುತ್ತದೆ. ನಮಗೆ ಅದು ಬೇಡ. ನ್ಯಾಯಾಲಯವಾಗಿ ನಾವು ಎಲ್ಲ ಜನರ ಆರೋಗ್ಯಕ್ಕೆ ಅಪಾಯವನ್ನುಂಟುಮಾಡಲು ಸಾಧ್ಯವಿಲ್ಲ ”ಎಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಪೀಠ ಹೇಳಿದೆ.

ತಬ್ಲೀಘಿ ಜಮಾಅತ್‌ನ ಸದಸ್ಯರನ್ನು “ಬಲಿಪಶು” ಮಾಡಲಾಗಿದೆ ಹಾಗೂ ಪೌರತ್ವ ವಿರುದ್ಧದ ಪ್ರತಿಭಟನೆಯ ನಂತರ “ಭಾರತೀಯ ಮುಸ್ಲಿಮರಿಗೆ ಪರೋಕ್ಷ ಎಚ್ಚರಿಕೆ”ನೀಡಲು ತಬ್ಲೀಗ್‌ ಜಮಾತಿಗರ ಪ್ರಕರಣವನ್ನು ಬಳಸಲಾಗಿದೆ ಎಂದು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠದ ಹೇಳಿಕೆಯನ್ನು ಸುಪ್ರೀಂ ಕೋರ್ಟ್‌ ಉಲ್ಲೇಖಿಸಿದೆ.

ಈ ವರ್ಷ ಆಗಸ್ಟ್ 29 ರಂದು ಮೊಹರಂ ಹಬ್ಬ ಬರಲಿದೆ. ಮೊಹರಂ ದಿವಸ ಕರ್ಬಲಾ ಕದನದಲ್ಲಿ ಕೊಲ್ಲಲ್ಪಟ್ಟ ಇಮಾಮ್ ಹುಸೇನ್ ಅವರ ಹುತಾತ್ಮತೆಯ ನೆನಪಿಗಾಗಿ ಶಿಯಾ ಮುಸ್ಲಿಮರು‌ ಶೋಕಾಚರಣೆಯನ್ನು ದೊಡ್ಡಮಟ್ಟದಲ್ಲಿ ಆಚರಿಸುತ್ತಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com