2019-20ರಲ್ಲಿ ರೂ. 2000 ಮೌಲ್ಯದ ನೋಟುಗಳು ಮುದ್ರಣವಾಗಲೇ ಇಲ್ಲ
ರಾಷ್ಟ್ರೀಯ

2019-20ರಲ್ಲಿ ರೂ. 2000 ಮೌಲ್ಯದ ನೋಟುಗಳು ಮುದ್ರಣವಾಗಲೇ ಇಲ್ಲ

ರೂ. 500ರ ನೋಟುಗಳ ಸಂಖ್ಯೆ ಮತ್ತು ಮೌಲ್ಯ ಎರಡರಲ್ಲೂ ಏರಿಕೆಯಾಗಿದೆ. 2019ರಲ್ಲಿ ರೂ. 500ರ ನೋಟುಗಳ ಮೌಲ್ಯ ರೂ. 10.75 ಲಕ್ಷದಷ್ಟಿದ್ದರೆ, 2020ರಲ್ಲಿ ರೂ. 14.72ಕ್ಕೇರಿದೆ.

ಪ್ರತಿಧ್ವನಿ ವರದಿ

ಆರ್ಥಿಕ ವರ್ಷ 2019-20ರಲ್ಲಿ ರೂ. 2000 ಮೌಲ್ಯದ ಯಾವುದೇ ನೋಟುಗಳನ್ನು ಮುದ್ರಿಸಲಾಗಿಲ್ಲ ಎನ್ನುವ ವಿಚಾರ RBIನ ವಾರ್ಷಿಕ ವರದಿಯಲ್ಲಿ ಬಹಿರಂಗವಾಗಿದೆ. ದೇಶದಲ್ಲಿ ರೂ. 2000 ಮೌಲ್ಯದ ನೋಟುಗಳ ಚಲಾವಣೆಯು ಕೂಡಾ ಮಾರ್ಚ್‌ 2020ರ ವೇಳೆಗೆ ಗಣನೀಯವಾಗಿ ಕಡಿಮೆಯಾಗಿದೆ. ಇದರ ಬದಲಾಗಿ ರೂ. 500 ಮೌಲ್ಯದ ನೋಟುಗಳ ಸಂಖ್ಯೆ ಮತ್ತು ಒಟ್ಟು ಮೌಲ್ಯ ಹೆಚ್ಚಾಗಿದೆ.

2019-20ರಲ್ಲಿ 1,200 ಕೋಟಿ ರೂ. 500 ಮೌಲ್ಯದ ನೋಟುಗಳನ್ನು ಮುದ್ರಿಸಲಾಗಿದೆ. ರೂ. 2000 ಮೌಲ್ಯದ 5 ಕೋಟಿ ನೋಟುಗಳನ್ನು 2018-19ರಲ್ಲಿ ಮುದ್ರಿಸಲಾಗಿತ್ತು. ಮಾರ್ಚ್‌ 2019ರ ವೇಳೆಗೆ ರೂ. 6,58,199 ಕೋಟಿ ಮೌಲ್ಯದ 32,910 ಲಕ್ಷದಷ್ಟು ರೂ. 2000 ನೋಟುಗಳು ದೇಶದಲ್ಲಿ ಚಲಾವಣೆಯಲ್ಲಿದ್ದವು. ಈ ಸಂಖ್ಯೆ ಮಾರ್ಚ್‌ 2020ರ ವೇಳೆಗೆ, ರೂ. 5,47,952 ಕೋಟಿ ಮೌಲ್ಯದ 27,398 ನೋಟುಗಳಿಗೆ ಬಂದು ನಿಂತಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಭಾರತದಲ್ಲಿ ಚಲಾವಣೆಯಲ್ಲಿರುವ ನೋಟುಗಳ ಮೌಲ್ಯದ ಅನುಪಾತವನ್ನು ಗಮನಿಸಿದರೆ, ಒಟ್ಟು ಮೌಲ್ಯದ ಶೇ. 22.6ರಷ್ಟು ನೋಟುಗಳು ರೂ. 2000ರದ್ದಾಗಿವೆ. ಈ ಅನುಪಾತ, 2018ರಲ್ಲಿ ಶೇ. 37.3ರಷ್ಟಿದ್ದರೆ, 2019ರಲ್ಲಿ 31.2ರಷ್ಟಿತ್ತು.

ಇದೇ ಸಮಯದಲ್ಲಿ ದೇಶದಲ್ಲಿ ಚಲಾವಣೆಯಲ್ಲಿರುವ ನೋಟುಗಳು ಸಂಖ್ಯೆ ಮತ್ತು ಮೌಲ್ಯವನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ, ರೂ. 500ರ ನೋಟುಗಳ ಸಂಖ್ಯೆ ಮತ್ತು ಮೌಲ್ಯ ಎರಡರಲ್ಲೂ ಏರಿಕೆಯಾಗಿದೆ. 2019ರಲ್ಲಿ ರೂ. 500ರ ನೋಟುಗಳ ಮೌಲ್ಯ ರೂ. 10.75 ಲಕ್ಷದಷ್ಟಿದ್ದರೆ, 2020ರಲ್ಲಿ ರೂ. 14.72ಕ್ಕೇರಿದೆ. ರೂ. 500 ಮೌಲ್ಯದ ನೋಟುಗಳ ಸಂಖ್ಯೆಯಲ್ಲಿ ಕೂಡಾ ಭಾರಿ ಏರಿಕೆಯಾಗಿದೆ. 2019ರಲ್ಲಿ 2,15,176 ನೋಟುಗಳು ಚಲಾವಣೆಯಲ್ಲಿದ್ದರೆ, 2020ರಲ್ಲಿ ಅವುಗಳ ಸಂಖ್ಯೆ 2,94,475ಕ್ಕೇರಿದೆ.

ಬ್ಯಾಂಕ್ ನೋಟುಗಳ ಅನುಪಾತವನ್ನು ಗಮನಿಸಿದರೆ, 2019ರಲ್ಲಿ ರೂ. 500 ಮೌಲ್ಯದ ಶೇ. 51ರಷ್ಟು ನೋಟುಗಳು ಚಲಾವಣೆಯಲ್ಲಿದ್ದವು. 2020ರಲ್ಲಿ ಈ ಅನುಪಾತ ಶೇ. 60.8ಕ್ಕೇರಿದೆ.

ಕೃಪೆ: ಇಂಡಿಯನ್‌ ಎಕ್ಸ್‌ಪ್ರೆಸ್‌

Click here to follow us on Facebook , Twitter, YouTube, Telegram

Pratidhvani
www.pratidhvani.com