20 ಸಾವಿರ ವಲಸೆ ಕಾರ್ಮಿಕರಿಗೆ ಉದ್ಯೋಗದೊಂದಿಗೆ ವಸತಿ ನೀಡಿದ ಸೋನು ಸೂದ್
ರಾಷ್ಟ್ರೀಯ

20 ಸಾವಿರ ವಲಸೆ ಕಾರ್ಮಿಕರಿಗೆ ಉದ್ಯೋಗದೊಂದಿಗೆ ವಸತಿ ನೀಡಿದ ಸೋನು ಸೂದ್

ನೋಯ್ಡಾದಲ್ಲಿನ ಉಡುಪು ತಯಾರಿಕಾ ಘಟಕಗಳಲ್ಲಿ ಪ್ರವಾಸಿ ರೋಜ್‌ಗರ್ ಮೂಲಕ ಉದ್ಯೋಗ ಪಡೆದುಕೊಂಡು ವಲಸೆ ಬಂದ 20,000 ಕಾರ್ಮಿಕರಿಗೆ ವಸತಿಗೃಹವನ್ನು ಒದಗಿಸಲು ನಾನು ಖುಷಿಪಡುತ್ತೇನೆ

ಪ್ರತಿಧ್ವನಿ ವರದಿ

‌ಲಾಕ್‌ಡೌನ್‌ ಕಾಲದಲ್ಲಿ ಪರವೂರಿನಲ್ಲಿ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರಿಗೆ ತಮ್ಮ ಊರುಗಳಿಗೆ ಮರಳಲು ಸಹಾಯ ಮಾಡಿ ವ್ಯಾಪಕ ಜನಪ್ರೀತಿ ಪಡೆದುಕೊಂಡ ಬಹುಭಾಷಾ ನಟ ಸೋನು ಸೂದ್‌ ಸೋಮವಾರ ಮತ್ತೆ ಸಂಚಲನ ಮೂಡಿಸಿದ್ದಾರೆ. ನೋಯ್ಡಾದಲ್ಲಿ ಪ್ರವಾಸಿ ರೋಜ್‌ಗರ್‌ ಯೋಜನೆಯಡಿಯಲ್ಲಿ ಕೆಲಸ ಪಡೆದುಕೊಂಡ 20 ಸಾವಿರ ವಲಸೆ ಕಾರ್ಮಿಕರಿಗೆ ವಸತಿ ನೀಡುವುದಾಗಿ ಘೋಷಿಸಿದ್ದಾರೆ.

"ನೋಯ್ಡಾದಲ್ಲಿನ ಉಡುಪು ತಯಾರಿಕಾ ಘಟಕಗಳಲ್ಲಿ ಪ್ರವಾಸಿ ರೋಜ್‌ಗರ್ ಮೂಲಕ ಉದ್ಯೋಗ ಪಡೆದುಕೊಂಡು ವಲಸೆ ಬಂದ 20,000 ಕಾರ್ಮಿಕರಿಗೆ ವಸತಿಗೃಹವನ್ನು ಒದಗಿಸಲು ನಾನು ಖುಷಿಪಡುತ್ತೇನೆ " ಎಂದು ಸೋನು ಸೂದ್‌ ಫೇಸ್‌ಬುಕ್‌ ನಲ್ಲಿ ಬರೆದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ದೇಶಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸರಿಯಾದ ಉದ್ಯೋಗಾವಕಾಶಗಳನ್ನು ಕಂಡುಕೊಳ್ಳಲು ಸಹಾಯವಾಗಲು ವಲಸಿಗರಿಗಾಗಿ ʼಪ್ರವಾಸಿ ರೋಜ್ಗರ್ ಉದ್ಯೋಗ ಪೋರ್ಟಲ್ʼ ಅನ್ನು ಸೋನು ಸೂದ್‌ ಆರಂಭಿಸಿದ್ದಾರೆ. ಈ ಪೋರ್ಟಲ್‌ ಮುಖಾಂತರ 20 ಸಾವಿರ ಕಾರ್ಮಿಕರು ನೋಯ್ಡಾದಲ್ಲಿರುವ ವಸ್ತ್ರ ಉತ್ಪಾದನಾ ಘಟಕದಲ್ಲಿ ಉದ್ಯೋಗ ಪಡೆದಿದ್ದರು, ಅವರಿಗೆ ವಸತಿಯನ್ನು ಸೂನು ಸೂದ್‌ ಒದಗಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಈ ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಹಾಗೂ ಸಿದ್ಧತೆಗಳು ವಿನ್ಯಾಸಗೊಂಡಿವೆ. ಉನ್ನತ ಸಂಸ್ಥೆಗಳೊಂದಿಗೆ ವ್ಯಾಪಕ ಸಮಾಲೋಚನೆಗಳನ್ನು ನಡೆಸಲಾಗಿದೆ. ಬಡತನ ರೇಖೆಗಿಂತ ಕೆಳಗಿರುವ ತಳಮಟ್ಟದಲ್ಲಿರುವ ಯುವಜನಾಂಗಕ್ಕೆ ಕೌಶಲ್ಯ ತರಬೇತಿ ನೀಡಿ ಸಹಾಯ ಮಾಡಲು ಹಲವಾರು ಎನ್‌ಜಿಒಗಳು, ಲೋಕೋಪಕಾರಿ ಸಂಸ್ಥೆಗಳು, ಸರ್ಕಾರಿ ಕಾರ್ಯಕರ್ತರು, ಕಾರ್ಯತಂತ್ರ ಸಲಹೆಗಾರರು ಕೆಲಸ ಮಾಡಿದ್ದಾರೆ ಎಂದು ಸೋನು ಸೂದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾರತದಲ್ಲಿ ಉಂಟಾದ ವ್ಯಾಪಕ ಉದ್ಯೋಗ ನಷ್ಟದ ಕುರಿತಂತಹ ವ್ಯಂಗ್ಯ ಚಿತ್ರವೊಂದನ್ನು ತನ್ನ ಟ್ವಿಟರ್‌ ಹಾಗೂ ಫೇಸ್‌ಬುಕ್‌ ಖಾತೆಯಲ್ಲಿ‌ ಹಂಚಿಕೊಂಡದಕ್ಕೆ ನರೇಂದ್ರ ಮೋದಿ ಅಭಿಮಾನಿಗಳು ಸೋನು ಸೂದ್‌ ವಿರುದ್ಧ ಮುಗಿ ಬಿದ್ದಿದ್ದರು. ಅದಾಗ್ಯೂ ಕಾಲೆಳೆಯುವವರನ್ನು ತುಳಿದುಕೊಂಡು ಸೋನು ತನ್ನ ಸೇವೆಯನ್ನು ಮಾಡುತ್ತಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com