ದಾವೂದ್‌ ತನ್ನ ದೇಶದಲ್ಲಿರುವುದಾಗಿ ಒಪ್ಪಿಕೊಂಡ ಪಾಕಿಸ್ತಾನ
ರಾಷ್ಟ್ರೀಯ

ದಾವೂದ್‌ ತನ್ನ ದೇಶದಲ್ಲಿರುವುದಾಗಿ ಒಪ್ಪಿಕೊಂಡ ಪಾಕಿಸ್ತಾನ

ನಿಷೇಧಿತ 88 ಭಯೋತ್ಪಾದಕ ಗುಂಪುಗಳು ಮತ್ತು ಅವರ ನಾಯಕರಲ್ಲಿ ಪಾಕಿಸ್ತಾನವು 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಮತ್ತು ಜಮಾತ್-ಉದ್-ದವಾ ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ವಿರುದ್ಧ ನಿರ್ಬಂಧಗಳನ್ನು ವಿಧಿಸಿದೆ.

ಪ್ರತಿಧ್ವನಿ ವರದಿ

1993 ರ ಮುಂಬೈ ಬಾಂಬ್ ಸ್ಫೋಟದ ಹಿಂದಿನ ಸೂತ್ರಧಾರಿ ಎಂದು ಭಾರತ ಆರೋಪಿಸಿರುವ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿದ್ದಾನೆ ಎಂದು ದಶಕಗಳಲ್ಲಿ ಮೊದಲ ಬಾರಿಗೆ ಪಾಕಿಸ್ತಾನ ಒಪ್ಪಿಕೊಂಡಿದೆ. ವಿಶ್ವಸಂಸ್ಥೆಯ ಅನುಮೋದನೆ ನಿರ್ಣಯದಡಿ 88 ಭಯೋತ್ಪಾದಕರನ್ನು ನಿಷೇಧಿಸಿ ಪಾಕಿಸ್ತಾನ ಸರ್ಕಾರ ಆಗಸ್ಟ್ 18 ರಂದು ಹೊರಡಿಸಿದ ಅನುಮತಿ ಆದೇಶದಲ್ಲಿ ದಾವೂದ್‌ ಇಬ್ರಾಹಿಂ ಹೆಸರು ಸೇರಿಸಲಾಗಿದೆ ಎಂದು ನ್ಯೂಸ್ 18.ಕಾಮ್ ವರದಿಯಲ್ಲಿ ತಿಳಿಸಿದೆ.

1993 ರ ಮುಂಬೈ ಬಾಂಬ್ ಸ್ಫೋಟದ ನಂತರ ಇಬ್ರಾಹಿಂ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ. ಆತ ಭಾರತದಿಂದ ಪರಾರಿಯಾಗಿ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾನೆ ಎಂದು ಹೇಳಲಾಗಿತ್ತು. ಕರಾಚಿಯ ದುಬಾರಿ ಕ್ಲಿಫ್ಟನ್ ಪ್ರದೇಶದಲ್ಲಿ ದಾವೂದ್‌ ಇಬ್ರಾಹಿಂ ವಾಸಿಸುತ್ತಿದ್ದಾನೆ ಎಂದು ಭಾರತೀಯ ಅಧಿಕಾರಿಗಳು ಹಲವಾರು ಬಾರಿ ಹೇಳಿದ್ದರು. ಆದರೆ ಪಾಕಿಸ್ತಾನ ತನ್ನ ದೇಶದಲ್ಲಿ ದಾವೂದ್ ಇರುವಿಕೆಯನ್ನು ಪ್ರತಿಬಾರಿಯೂ ನಿರಾಕರಿಸಿತ್ತು.

ಕೊನೆಗೂ, ದಾವೂದ್ ಕರಾಚಿಯ ಕ್ಲಿಫ್ಟನ್ ಪ್ರದೇಶದಲ್ಲಿ ವಾಸಿಸುತ್ತಿದ್ದಾನೆ ಎಂದು ಪಾಕಿಸ್ತಾನ ತನ್ನ ಅನುಮೋದನೆ ಆದೇಶದಲ್ಲಿ ಒಪ್ಪಿಕೊಂಡಿದೆ ಎಂದು ವರದಿ ತಿಳಿಸಿದೆ.

ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಗ್ರೇ ಪಟ್ಟಿಯಿಂದ ಪಾರಾಗಲು ವಿಶ್ವಸಂಸ್ಥೆಯಲ್ಲಿ ಭಾರತ ಮಂಡಿಸಿದ ದಾವೂದ್ ವಿವರಗಳನ್ನು ಪಾಕಿಸ್ತಾನ ಒಪ್ಪಿಕೊಂಡಿದೆ ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ. ಗ್ರೇ ಪಟ್ಟಿಯಲ್ಲಿ ಸೇರಿಸಿಕೊಂಡರೆ ಪಾಕಿಸ್ತಾನವು ಅಂತರರಾಷ್ಟ್ರೀಯ ಸಾಲಗಾರರಿಂದ ಸಾಲ ಪಡೆಯುವುದು ಮತ್ತು ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುವುದು ಕಷ್ಟಕರವಾಗುತ್ತದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ನಿಷೇಧಿತ 88 ಭಯೋತ್ಪಾದಕ ಗುಂಪುಗಳು ಮತ್ತು ಅವರ ನಾಯಕರಲ್ಲಿ ಪಾಕಿಸ್ತಾನವು 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಮತ್ತು ಜಮಾತ್-ಉದ್-ದವಾ (Jamaat-ud-Dawa) ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಜೈಶ್-ಎ-ಮೊಹಮ್ಮದ್ (Jaish-e-Mohammed) ಮುಖ್ಯಸ್ಥ ಮಸೂದ್ ಅಜರ್ ವಿರುದ್ಧ ನಿರ್ಬಂಧಗಳನ್ನು ವಿಧಿಸಿದೆ. ಭಯೋತ್ಪಾದಕ ಸಂಘಟನೆಗಳ ಪ್ರಮುಖ ವ್ಯಕ್ತಿಗಳಾದ ಜಮಾತ್-ಉದ್-ದವಾ, ಜೈಶ್-ಎ-ಮೊಹಮ್ಮದ್, ತಾಲಿಬಾನ್, ದಾಶ್, ಹಕ್ಕಾನಿ ಗ್ರೂಪ್, ಅಲ್-ಖೈದಾ ಮತ್ತು ಇತರರ ಮೇಲೆ ಅಧಿಸೂಚನೆ ನಿರ್ಬಂಧಗಳನ್ನು ಪ್ರಕಟಿಸಿದೆ ಎಂದು ವರದಿ ತಿಳಿಸಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com