ಮೇಲ್ಜಾತಿ ವಠಾರದಿಂದ ಹೂ ಕಿತ್ತ ಬಾಲಕಿ: 40 ದಲಿತ ಕುಟುಂಬಗಳಿಗೆ ಬಹಿಷ್ಕಾರ

ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬದ ಹೆಣ್ಣುಮಗಳೊಬ್ಬಳು ಎರಡು ತಿಂಗಳ ಹಿಂದೆ ಮೇಲ್ಜಾತಿಯವರ ಹಿತ್ತಲಿನಲ್ಲಿದ್ದ ಹೂವನ್ನು ಕಿತ್ತಿದ್ದಾಳೆ. ಇಷ್ಟಕ್ಕೆ ಮೇಲ್ಜಾತಿಯವರು ದಲಿತ ಕುಟುಂಬಗಳೊಂದಿಗೆ ವೈಷಮ್ಯ ಸಾಧಿಸಿದ್ದಾರೆ. ಹಲವು ಬಾರಿ ಮಾತುಕತೆಯ ಮೂಕ ಇ ...
ಮೇಲ್ಜಾತಿ ವಠಾರದಿಂದ ಹೂ ಕಿತ್ತ ಬಾಲಕಿ: 40 ದಲಿತ ಕುಟುಂಬಗಳಿಗೆ ಬಹಿಷ್ಕಾರ

ನಲ್ವತ್ತು ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹೇರಿದ ಪ್ರಕರಣ ಒಡಿಸಾದಲ್ಲಿ ನಡೆದಿದೆ. ಎರಡು ತಿಂಗಳ ಹಿಂದೆ ಈ ಅಮಾನವೀಯ ಘಟನೆ ನಡೆದಿದ್ದು, ದಲಿತ ಕುಟುಂಬಕ್ಕೆ ಸೇರಿದ ಹದಿನೈದು ವರ್ಷದ ಬಾಲಕಿ ಮೇಲ್ಜಾತಿ ಕುಟುಂಬದ ಹಿತ್ತಲಿನಲ್ಲಿದ್ದ ಹೂ ಕಿತ್ತದ್ದೇ ಬಹಿಷ್ಕಾರಕ್ಕೆ ಕಾರಣ ಎನ್ನಲಾಗಿದೆ. ಆಧುನಿಕ ನಾಗರಿಕತೆಯ ಕಾಲದಲ್ಲೂ ಜಾತಿ ರೋಗಗ್ರಸ್ತ ಗ್ರಾಮಸ್ಥರ ಹೇಯ ನಡೆ ಭಾರತೀಯ ಸಮಾಜದಲ್ಲಿ ಜಾತಿ ಮೇಲರಿಮೆ ಯಾವ ಮಟ್ಟಿಗೆ ಸಜೀವವಾಗಿದೆ ಎಂಬುದಕ್ಕೆ ಜ್ವಲಂತ ಉದಾಹರಣೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಒಡಿಸ್ಸಾದ ಧೆಂಕನಾಲ್ ಜಿಲ್ಲೆಯ ಕ್ಯಾಂಟಿಯೊ ಕಟೆನಿ ಗ್ರಾಮದಲ್ಲಿ 800 ಕ್ಕೂ ಹೆಚ್ಚು ಕುಟುಂಬಗಳಿವೆ, ಅದರಲ್ಲಿ 40 ಕುಟುಂಬಗಳು ಪರಿಶಿಷ್ಟ ಜಾತಿಗೆ ಸೇರಿದವು. ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬದ ಹೆಣ್ಣುಮಗಳೊಬ್ಬಳು ಎರಡು ತಿಂಗಳ ಹಿಂದೆ ಮೇಲ್ಜಾತಿಯವರ ಹಿತ್ತಲಿನಲ್ಲಿದ್ದ ಹೂವನ್ನು ಕಿತ್ತಿದ್ದಾಳೆ. ಇಷ್ಟಕ್ಕೆ ಮೇಲ್ಜಾತಿಯವರು ದಲಿತ ಕುಟುಂಬಗಳೊಂದಿಗೆ ವೈಷಮ್ಯ ಸಾಧಿಸಿದ್ದಾರೆ. ಹಲವು ಬಾರಿ ಮಾತುಕತೆಯ ಮೂಕ ಇತ್ಯರ್ಥಕ್ಕೆ ದಲಿತ ಕುಟುಂಬದ ಮುಖ್ಯಸ್ಥರು ಪ್ರಯತ್ನಿಸಿದರೂ, ಇವರ ಸಂಧಾನ ಯತ್ನ ಫಲಿಸಲಿಲ್ಲ.

ಸಮಸ್ಯೆ ಬಗೆಹರಿಸಲು ನಾವು ಅವರೊಡನೆ ಹಲವಾರು ಬಾರಿ ನಾವು ಕ್ಷಮೆ ಕೇಳಿದರೂ ನಮ್ಮನ್ನು ಅವರು ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ. ಯಾರೊಬ್ಬರೂ ನಮ್ಮ ಜೊತೆ ಮಾತನಾಡಲು ಅವರು ಅವಕಾಶ ನೀಡುತ್ತಿಲ್ಲ. ಗ್ರಾಮದಲ್ಲಿ ನಡೆಯುವ ಯಾವುದೇ ಸಾಮಾಜಿಕ ಕಾರ್ಯಕ್ರಮದಲ್ಲಿ ನಾವು ಭಾಗವಹಿಸುವಂತಿಲ್ಲ ಎಂದು ಬಾಲಕಿಯ ತಂದೆ ನಿರಂಜನ್ ನಾಯ್ಕ್‌ ನೋವಿನಿಂದ ಹೇಳಿದ್ದಾರೆ.

ಮೇಲ್ಜಾತಿ ವಠಾರದಿಂದ ಹೂ ಕಿತ್ತ ಬಾಲಕಿ: 40 ದಲಿತ ಕುಟುಂಬಗಳಿಗೆ ಬಹಿಷ್ಕಾರ
ಮೇಲ್ಜಾತಿಗಳ ಎದುರು ತಲೆ ಬಾಗದ ದಲಿತ ʼಗ್ರಾಮ ಪ್ರಧಾನ್ʼ ಹತ್ಯೆ: ಪ್ರತಿಭಟನೆ ವೇಳೆ ಬಾಲಕ ಮೃತ್ಯು

ಸ್ಥಳೀಯ ನ್ಯಾಯಬೆಲೆಯಲ್ಲಿ ನಮಗೆ ದಿನಸಿಗಳನ್ನು ನೀಡುತ್ತಿಲ್ಲ. ನಾವು 5 ಕಿಮೀ ಪಕ್ಕದಲ್ಲಿರುವ ಹಳ್ಳಿಗೆ ಹೋಗಿ ಅಗತ್ಯ ಸಾಮಾಗ್ರಿಗಳನ್ನು ತರಬೇಕಾದ ಒತ್ತಡದಲ್ಲಿದ್ದೇವೆ, ಅಲ್ಲದೆ ಗ್ರಾಮಸ್ಥರು ನಮ್ಮೊಂದಿಗೆ ಮಾತನಾಡುತ್ತಿಲ್ಲ ಎಂದು ಬಹಿಷ್ಕಾರಕ್ಕೊಳಗಾದ ಕುಟುಂಬದ ಮಹಿಳೆ ಜ್ಯೋತಿ ನಾಯ್ಕ್‌ ಅಳಲು ತೋಡಿಕೊಂಡಿದ್ದಾರೆ.

ಗ್ರಾಮಸ್ಥರ ಈ ನಡೆ ಸಹಿಸದೆ, ಕೊನೆಗೂ ಸಂತ್ರಸ್ತ ಕುಟುಂಬಗಳು ಪೊಲೀಸ್‌ ಠಾಣೆ ಮೆಟ್ಟಿಲೇರಿವೆ. ಆಗಸ್ಟ್‌ 17 ರಂದು ದಲಿತರು ನೀಡಿದ ಮನವಿಯಲ್ಲಿ, ತಮ್ಮನ್ನು ಕೆಲಸಕ್ಕೂ ಕರೆಯುತ್ತಿಲ್ಲ. ಈ ಮೊದಲು ಗ್ರಾಮಸ್ಥರ ಹೊಲಗಳಲ್ಲಿ ನಾವು ದುಡಿಯುತ್ತಿದ್ದೆವು. ಆದರೆ ಆ ಘಟನೆಯ ಬಳಿಕ ನಮಗೆ ಯಾರೂ ಕೆಲಸ ನೀಡುತ್ತಿಲ್ಲ ಎಂದು ದೂರಿದ್ದಾರೆ.

ಮೇಲ್ಜಾತಿ ವಠಾರದಿಂದ ಹೂ ಕಿತ್ತ ಬಾಲಕಿ: 40 ದಲಿತ ಕುಟುಂಬಗಳಿಗೆ ಬಹಿಷ್ಕಾರ
ಪಂಜಾಬಿ ದಲಿತ- ಬಂತ್ ಎಂಬ ಅನಂತ!

ನಮ್ಮ ಕುಟುಂಬಗಳಲ್ಲಿ ನಡೆಯುವ ಮದುವೆ ಸೇರಿದಂತೆ ಅಂತ್ಯಕ್ರಿಯೆಗಳಿಗೂ ಮೆರವಣಿಗೆ ಹೋಗದಂತೆ ನಮಗೆ ಆಜ್ಞಾಪಿಸಲಾಗಿದೆ. ಅಲ್ಲದೆ ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ನಮ್ಮ ಮಕ್ಕಳ ವಿಧ್ಯಾಭ್ಯಾಸಕ್ಕೂ ಅವರು ತಡೆ ನೀಡುತ್ತಿದ್ದಾರೆ. ನಮ್ಮ ಸಮುದಾಯದ ಓರ್ವ ಶಿಕ್ಷಕನಿದ್ದು, ಅವರನ್ನು ಆ ಶಾಲೆಯಿಂದ ವರ್ಗಾವಣೆ ಪಡೆದು ಹೋಗುವಂತೆ ಬೆದರಿಸುತ್ತಿದ್ದಾರೆ ಎಂದೂ ಸಂತ್ರಸ್ತರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಅವರು ಮಾಡಿರುವ ತಪ್ಪುಗಳಿಗಾಗಿ ಅವರೊಂದಿಗೆ ಉಳಿದ ಗ್ರಾಮಸ್ಥರು ಯಾರೂ ಮಾತನಾಡಬಾರೆಂದು ಆದೇಶ ನೀಡಿದ್ದರು ಹೌದು ಎಂದು ಗ್ರಾಮ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಹರ್ಮೋಹನ್ ಮಲ್ಲಿಕ್ ಒಪ್ಪಿಕೊಂಡಿರುವುದಾಗಿ ಇಂಡಿಯನ್‌ ಎಕ್ಸ್‌ಪ್ರೆಸ್‌ ಮಾಡಿದೆ. ಗ್ರಾಮ ಸರ್‌ಪಂಚ್‌ ಪ್ರಣಬಂಧು ದಾಸ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು ಎಂದೂ ವರದಿ ತಿಳಿಸಿದೆ.

ಈವರೆಗೆ ಪ್ರಕರಣ ಸಂಬಂದಿಸಿದಂತೆ ಎರಡು ಬಾರಿ ಶಾಂತಿ ಸಂಧಾನಗಳು ನಡೆದಿವೆ, ಅದಾಗ್ಯೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಮೇಲ್ಜಾತಿ ವಠಾರದಿಂದ ಹೂ ಕಿತ್ತ ಬಾಲಕಿ: 40 ದಲಿತ ಕುಟುಂಬಗಳಿಗೆ ಬಹಿಷ್ಕಾರ
ಮಧ್ಯಪ್ರದೇಶ ದಲಿತ ದಂಪತಿ ಮೇಲೆ ‘ಜಂಗಲ್ ರಾಜ್’ ಆಡಳಿತದ ಅಟ್ಟಹಾಸ!

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com