ಜಾಗತಿಕ ಮಟ್ಟದಲ್ಲಿ Gmail ಸೇರಿದಂತೆ ಹಲವು ಗೂಗಲ್‌ ಸೇವೆಗಳ ಸರ್ವರ್‌ ಡೌನ್
ರಾಷ್ಟ್ರೀಯ

ಜಾಗತಿಕ ಮಟ್ಟದಲ್ಲಿ Gmail ಸೇರಿದಂತೆ ಹಲವು ಗೂಗಲ್‌ ಸೇವೆಗಳ ಸರ್ವರ್‌ ಡೌನ್

ಜಾಗತಿಕವಾಗಿ ಜಿಮೇಲ್, ಗೂಗಲ್ ಡ್ರೈವ್, ಗೂಗಲ್ ಡಾಕ್ಸ್ ಮತ್ತು ಇತರ ಗೂಗಲ್ ಸೇವೆಗಳ ಸರ್ವರ್‌ಗಳು ಡೌನ್‌ ಆಗಿವೆ. ಹಾಗಾಗಿ ಅನೇಕ ಬಳಕೆದಾರರಿಗೆ ಸಮರ್ಪಕವಾಗಿ ಗೂಗಲ್‌ ಸೇವೆಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯು ಜಾಗತಿಕವಾಗಿ ಅನೇಕ ಬಳಕೆದಾರರ ಮೇಲೆ ಪರಿಣಾಮ ಬೀರಿದೆ.

ಪ್ರತಿಧ್ವನಿ ವರದಿ

ಜಾಗತಿಕವಾಗಿ ಜಿಮೇಲ್, ಗೂಗಲ್ ಡ್ರೈವ್, ಗೂಗಲ್ ಡಾಕ್ಸ್ ಮತ್ತು ಇತರ ಗೂಗಲ್ ಸೇವೆಗಳ (Gmail, Google Drive, Google Docs, Google services) ಸರ್ವರ್‌ಗಳು ಡೌನ್‌ ಆಗಿವೆ. ಹಾಗಾಗಿ ಅನೇಕ ಬಳಕೆದಾರರಿಗೆ ಸಮರ್ಪಕವಾಗಿ ಗೂಗಲ್‌ ಸೇವೆಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯು ಜಾಗತಿಕವಾಗಿ ಅನೇಕ ಬಳಕೆದಾರರ ಮೇಲೆ ಪರಿಣಾಮ ಬೀರಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಬಳಕೆದಾರರು Gmail ಮೂಲಕ ಇಮೇಲ್‌ಗಳನ್ನು ಕಳುಹಿಸುವಾಗ ಹಾಗೂ Google ಡ್ರೈವ್‌ನಲ್ಲಿ ಫೈಲ್‌ಗಳನ್ನು ಅಪ್‌ಲೋಡ್ ಮಾಡುವಾಗ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ದೂರಿದ್ದಾರೆ.

ಮುಖ್ಯವಾಗಿ, ಗೂಗಲ್ ಡಾಕ್ಸ್ ಮತ್ತು ಗೂಗಲ್ ಮೀಟ್‌ ಸೇವೆ ಪಡೆಯುವಾಗ ಕೆಲವು ಬಳಕೆದಾರರು ಸಂಪರ್ಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂದು ಬೆಳಿಗ್ಗೆಯಿಂದ ಈ ಸಮಸ್ಯೆಗಳು ಕಾಣಿಸಲು ತೊಡಗಿದೆ. ಗೂಗಲ್ ಇನ್ನೂ ತನ್ನ ಸರ್ವರ್‌ ಸ್ಥಗಿತದ ಬಗ್ಗೆ ತನಿಖೆ ನಡೆಸುತ್ತಿದೆ ಹಾಗೂ ಇದುವರೆಗೂ ಯಾವುದೇ ಹೆಚ್ಚಿನ ವಿವರಗಳನ್ನು ನೀಡಿಲ್ಲ.

ಟ್ವಿಟ್ಟರ್ ಬಳಕೆದಾರರ ದೂರಿನ ಪ್ರಕಾರ, ಪ್ರಪಂಚದಾದ್ಯಂತ ಹಲವಾರು ಬಳಕೆದಾರರು ತಮ್ಮ ಇಮೇಲ್‌ಗಳನ್ನು Gmail ಮೂಲಕ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಕೆಲವು ಬಳಕೆದಾರರು ತಮ್ಮ ಇಮೇಲ್‌ಗಳಿಗೆ ಫೈಲ್‌ ಅಪ್‌ಲೋಡ್ ಮಾಡುವಾಗ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ. ಗೂಗಲ್‌ ಸಮಸ್ಯೆಗಳು ಹೇಳಲು ಹಲವಾರು ಬಳಕೆದಾರರು #Gmail ಎಂಬ ಹ್ಯಾಶ್‌ಟ್ಯಾಗ್ ಅನ್ನು ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಮಾಡಿದ್ದಾರೆ.

ಡೌನ್‌ಟೈಮ್ ಟ್ರ್ಯಾಕಿಂಗ್ ವೆಬ್‌ಸೈಟ್ ಡೌನ್‌ಡೆಟೆಕ್ಟರ್‌ (DownDetector) ನಲ್ಲಿನ ವಿವರಗಳ ಪ್ರಕಾರ, ಇಂದು ಬೆಳಿಗ್ಗೆ 9: 30 ರ ಸುಮಾರಿಗೆ ಜಿಮೇಲ್ ಅಸಮರ್ಪಕತೆಯ ಬಗ್ಗೆ ಸಾಮೂಹಿಕವಾಗಿ ದೂರುಗಳು ಬರಲು ತೊಡಗಿವೆ. ಡೌನ್‌ಡೆಟೆಕ್ಟರ್ ಸೈಟ್‌ನಲ್ಲಿ ಲಭ್ಯವಿರುವ ನಕ್ಷೆಯು, ಗೂಗಲ್‌ ಸರ್ವರ್‌ನಲ್ಲಿರುವ ಸಮಸ್ಯೆಗಳು ಭಾರತ ಸೇರಿದಂತೆ ವಿಶ್ವದ ಅನೇಕ ಭಾಗಗಳಲ್ಲಿ ಬಳಕೆದಾರರ ಮೇಲೆ ಪರಿಣಾಮ ಬೀರುತ್ತಿದೆ ಎಂಬುದನ್ನು ತೋರಿಸುತ್ತಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com