ವಿಶ್ವಾಸ ಉಳಿಸಿಕೊಳ್ಳಲು ಫೇಸ್ಬುಕ್ ಚಟುವಟಿಕೆಗಳನ್ನು ತನಿಖೆ ಮಾಡಿ: ಶ್ರೀನಿವಾಸ್ ಬಿ.ವಿ.
ರಾಷ್ಟ್ರೀಯ

ವಿಶ್ವಾಸ ಉಳಿಸಿಕೊಳ್ಳಲು ಫೇಸ್ಬುಕ್ ಚಟುವಟಿಕೆಗಳನ್ನು ತನಿಖೆ ಮಾಡಿ: ಶ್ರೀನಿವಾಸ್ ಬಿ.ವಿ.

ದ್ವೇಷವನ್ನು ಉತ್ತೇಜಿಸಲು ಫೇಸ್‌ಬುಕ್ ಮತ್ತು ಬಿಜೆಪಿ ನಡುವೆ ಒಪ್ಪಂದ ಆಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಕೃತಕವಾಗಿ ಸಾರ್ವಜನಿಕ ಅಭಿಪ್ರಾಯ ರೂಪಿಸುತ್ತಿರುವುದು ಭಾರತದ ಜನರಿಗೆ ತೋರಿದ ಅಗೌರವವಾಗಿದೆ. ಆದುದರಿಂದ ಫೇಸ್‌ಬುಕ್, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್ ಬಳಕೆದಾರರ ವಿಶ್ವಾಸವನ್ನು ಪುನಃಸ್ಥಾಪಿಸಲು ಇಡೀ ವಿಷಯವನ್ನು ವಸ್ತುನಿಷ್ಠವಾಗಿ ತನಿಖೆ ಮಾಡಬೇಕು.

ಪ್ರತಿಧ್ವನಿ ವರದಿ

ಭಾರತೀಯ ಯುವ ಕಾಂಗ್ರೆಸ್ (IYC) ರಾಷ್ಟ್ರೀಯ ಅಧ್ಯಕ್ಷ ಶ್ರೀ ಶ್ರೀನಿವಾಸ್ ಬಿ.ವಿ. ಅವರ ಸೂಚನೆಯ ಮೇರೆಗೆ ತೆಲಂಗಾಣ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್ ಯಾದವ್ ನೇತೃತ್ವದಲ್ಲಿ ಹೈದರಾಬಾದಿನ ಫೇಸ್‌ಬುಕ್ ಇಂಡಿಯಾ ಪ್ರಧಾನ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು‌.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ, "ದ್ವೇಷವನ್ನು ಉತ್ತೇಜಿಸಲು ಫೇಸ್‌ಬುಕ್ ಮತ್ತು ಬಿಜೆಪಿ ನಡುವೆ ಒಪ್ಪಂದ ಆಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಕೃತಕವಾಗಿ ಸಾರ್ವಜನಿಕ ಅಭಿಪ್ರಾಯ ರೂಪಿಸುತ್ತಿರುವುದು ಭಾರತದ ಜನರಿಗೆ ತೋರಿದ ಅಗೌರವವಾಗಿದೆ. ಆದುದರಿಂದ ಫೇಸ್‌ಬುಕ್, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್ ಬಳಕೆದಾರರ ವಿಶ್ವಾಸವನ್ನು ಪುನಃಸ್ಥಾಪಿಸಲು ಇಡೀ ವಿಷಯವನ್ನು ವಸ್ತುನಿಷ್ಠವಾಗಿ ತನಿಖೆ ಮಾಡಬೇಕು. ಮುಕ್ತ ಮತ್ತು ಸ್ವತಂತ್ರ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿಯನ್ನೂ ರಚಿಸಬೇಕು ಎಂದು ಒತ್ತಾಯಿಸಿದರು.

ಅಮೇರಿಕಾ ಮೂಲದ ವಾಲ್ ಸ್ಟ್ರೀಟ್ ಜರ್ನಲ್(Wall street journal) ತಮ್ಮ ವಾಣಿಜ್ಯ ಹಿತಾಸಕ್ತಿಗಳಿಂದಾಗಿ ಬಿಜೆಪಿ(bjp) ಮತ್ತು ಆರ್‌ಎಸ್‌ಎಸ್ (RSS)‌ ಕಾರ್ಯಸೂಚಿಗಳ ಆಧಾರದ ಮೇಲೆ ದ್ವೇಷ ಮತ್ತು ಕೋಮುವಾದಿ ಪೋಸ್ಟ್‌ಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದೆ ಎಂದು ವರದಿ ಮಾಡಿದೆ. ಬಿಜೆಪಿ ಮುಖಂಡರಾದ ಟಿ. ರಾಜ ಸಿಂಗ್, ಕಪಿಲ್ ಮಿಶ್ರಾ ಮತ್ತು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ದ್ವೇಷದ ಪೋಸ್ಟ್‌ಗಳನ್ನು ತೆಗೆದುಹಾಕುವ ವಿಷಯಕ್ಕೆ ಸಂಬಂಧಿಸಿದಂತೆ ಮಧ್ಯಪ್ರವೇಶಿಸಿದ ಭಾರತದ ಫೇಸ್ ಬುಕ್ ನೀತಿ ಮುಖ್ಯಸ್ಥೆ ಅಂಕಿ ದಾಸ್ ದ್ವೇಷದ ಪೋಸ್ಟ್‌ಗಳ ಮೇಲೆ ಆಗಬೇಕಿದ್ದ ಕ್ರಮಗಳನ್ನು ಪಡೆದಿದ್ದಾರೆ. ಈ ಕೃತ್ಯಕ್ಕಾಗಿ ಅಂಕಿ ದಾಸ್ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ದ್ವೇಷ ಭಾಷಣ ಮಾಡುವ ಬಿಜೆಪಿ ನಾಯಕರನ್ನು ಫೇಸ್‌ಬುಕ್ ನಿಂದ ನಿಷೇಧಿಸಲು ಅಂಕಿ ದಾಸ್ ಕ್ರಮ ಕೈಗೊಂಡಿಲ್ಲ. "ಫೇಸ್‌ಬುಕ್ ಇಂಡಿಯಾ 'ನಿಷ್ಪಕ್ಷಪಾತದ ನಿಯಮಗಳನ್ನು' ಉಲ್ಲಂಘಿಸಿದೆ. ಆದ್ದರಿಂದ ಈ ಅಪವಿತ್ರ ಮೈತ್ರಿಯಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾರ್ಪೊರೇಟ್ ಮತ್ತು ರಾಜಕೀಯ ಪಕ್ಷಗಳ ನಡುವಿನ ಇಂತಹ ಮೈತ್ರಿಗಳು ಆರೋಗ್ಯಕರ ಪ್ರಜಾಪ್ರಭುತ್ವ ಸಂಪ್ರದಾಯಗಳಿಗೆ ವಿರುದ್ಧವಾಗಿವೆ ಎಂದು ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.

ಫೇಸ್‌ಬುಕ್ ಮತ್ತು ಬಿಜೆಪಿ ನಡುವಿನ ಈ ಅಪವಿತ್ರ ಸಂಬಂಧವನ್ನು ಬಹಿರಂಗಪಡಿಸಬೇಕೆಂದು ಕಾಂಗ್ರೆಸ್ ಪಕ್ಷವು ಧ್ವನಿ ಎತ್ತಿದೆ. ಈ ಘಟನೆಯಿಂದ ಆಘಾತಕ್ಕೊಳಗಾದ ಲಕ್ಷಾಂತರ ಫೇಸ್‌ಬುಕ್ ಮತ್ತು ವಾಟ್ಸಾಪ್ ಬಳಕೆದಾರರು ಭಾರತದಲ್ಲಿದ್ದಾರೆ. ಸಾಮಾಜಿಕ ಮಾಧ್ಯಮವು ಸಾರ್ವಜನಿಕರಿಗೆ ಅಭಿವ್ಯಕ್ತಿ ಮಾಧ್ಯಮವಾಗಿದೆ ಮತ್ತು ಈ ಮಾಧ್ಯಮಗಳು ಮುಕ್ತ ಮತ್ತು ನ್ಯಾಯಸಮ್ಮತವಾಗಿರುವುದು ಅತ್ಯಗತ್ಯ. ಆದ್ದರಿಂದ ಫೇಸ್‌ಬುಕ್‌ನಲ್ಲಿ ಸಾರ್ವಜನಿಕರ ನಂಬಿಕೆಯನ್ನು ಪುನಃಸ್ಥಾಪಿಸುವಂತೆ ಕಾಂಗ್ರೆಸ್ ಒತ್ತಾಯಿಸುತ್ತದೆ. ಅದಕ್ಕಾಗಿ ಈ ಕೆಳಕಂಡ ಬೇಡಿಕೆ ಇಡುತ್ತಿದೆ ಎಂದು ತಿಳಿಸಿದರು.

  1. ಫೇಸ್‌ಬುಕ್ ಪ್ರಧಾನ ಕಚೇರಿ ಭಾರತದಲ್ಲಿ ನಡೆದ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಬೇಕು ಮತ್ತು ತನಿಖೆಗೆ ಸಂಬಂಧಿಸಿದ ವರದಿಯನ್ನು ಸರಿಯಾದ ಸಮಯದಲ್ಲಿ ಸಾರ್ವಜನಿಕವಾಗಿ ಪ್ರಕಟಿಸಬೇಕು.

  2. 2014ರಿಂದ ಈವರೆಗೆ ದ್ವೇಷವನ್ನು ಉತ್ತೇಜಿಸುವ ಪೋಸ್ಟ್‌ಗಳನ್ನು ಪಾರದರ್ಶಕ ರೀತಿಯಲ್ಲಿ ಪರಿಶೀಲಿಸಬೇಕು. ವಾಲ್ ಸ್ಟ್ರೀಟ್ ಜರ್ನಲ್ ವರದಿಯು ಕೇವಲ 3 ಬಿಜೆಪಿ ಮುಖಂಡರ ಬಗ್ಗೆ ಬೆಳಕುಚೆಲ್ಲಿದೆ. ವಾಸ್ತವವಾಗಿ ಇಂತಹ ಅನೇಕ ದ್ವೇಷದ ಪೋಸ್ಟ್‌ಗಳು ನಿಯಮಿತವಾಗಿ ಕಾಣಿಸಿಕೊಳ್ಳುತ್ತಿವೆ. ಭಾವನಾತ್ಮಕ ವಿಷಯಗಳ ಮೂಲಕ ಸಾರ್ವಜನಿಕ ಅಭಿಪ್ರಾಯವನ್ನು ಕುಶಲತೆಯಿಂದ ನಿರ್ವಹಿಸಲಾಗುತ್ತಿದೆ. ಇದನ್ನು ಗಮನ ಹರಿಸಬೇಕು.

  3. ಆಂತರಿಕ ತನಿಖಾ ಪ್ರಕ್ರಿಯೆಯು ಪೂರ್ಣಗೊಳ್ಳುವವರೆಗೆ, ಹಳೆಯ ತಂಡಗಳು ತನಿಖೆಯ ಮೇಲೆ ಪ್ರಭಾವ ಬೀರದಂತೆ ಫೇಸ್‌ಬುಕ್ ಇಂಡಿಯಾವನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಸ ತಂಡಕ್ಕೆ ನೀಡಬೇಕು.

ಈ ಪ್ರದರ್ಶನದಲ್ಲಿ ತೆಲಂಗಾಣ ಯುವ ಕಾಂಗ್ರೆಸ್ ಘಟಕದ ನೂರಾರು ಪದಾಧಿಕಾರಿಗಳು ಮತ್ತು ಸ್ವಯಂಸೇವಕರು ಭಾಗವಹಿಸಿದ್ದರು.

Click here to follow us on Facebook , Twitter, YouTube, Telegram

Pratidhvani
www.pratidhvani.com