ಪಾಠ ಕಲಿಯದ ದಲಿತರು
ರಾಷ್ಟ್ರೀಯ

ಪಾಠ ಕಲಿಯದ ದಲಿತರು

ಅಂಬೇಡ್ಕರ್ ಕಾಂಗ್ರೇಸ್ ಸದಸ್ಯರಲ್ಲ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಹೇಗೆ ಎಂದು ಕೆಲವು ಕಾಂಗ್ರೆಸ್ಸಿಗರು ಪ್ರಶ್ನಿಸಿದಾಗ ಗಾಂಧಿಯವರು "ಸ್ವಾತಂತ್ರ್ಯ ಬರುತ್ತಿರುವುದು ಕಾಂಗ್ರೆಸ್ ಪಕ್ಷಕ್ಕಲ್ಲˌ" ಭಾರತಕ್ಕೆ ಪ್ರತಿಕ್ರಿಯಿಸಿದ್ದರು. ಕಾಂಗ್ರೆಸ್ ಮತ್ತು ಗಾಂಧಿ ದ್ವೇಷಿ ದಲಿತ ಇದನ್ನು ಅರ್ಥಮಾಡಿಕೊಳ್ಳಬೇಕು.

ಡಾ. ಜೆ ಎಸ್ ಪಾಟೀಲ

ಸ್ವಾತಂತ್ರಾ ನಂತರ ಭಾರತದ ಆಡಳಿತ ಚುಕ್ಕಾಣಿ ಬಲಪಂಥಿಯರ ಕೈಗೆ ಸಿಕ್ಕಿದ್ದರೆ ಭಾರತ ಎಂದೋ ಪಾಕಿಸ್ತಾನದಂತಾಗುತ್ತಿತ್ತು. ನಮ್ಮ ಅಪರಿಮಿತ ನಿರೀಕ್ಷೆಗೆ ತಕ್ಕಂತೆ ಕಾಂಗ್ರೆಸ್ ನಡೆದುಕೊಂಡಿಲ್ಲವೆಂದರೂ ಕೂಡ ಭಾರತ ಜಾತ್ಯಾತೀತವಾಗಿ ಉಳಿದದ್ದೇ ಕಾಂಗ್ರೆಸ್ ಆಡಳಿತದಿಂದ ಎನ್ನುವುದನ್ನು ನಾವು ಅಲ್ಲಗಳೆಯುವಂತಿಲ್ಲ. ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷ ಬ್ರಾಹ್ಮಣವಾದಿಗಳ ಹಿಡಿತದಲ್ಲಿದ್ದದ್ದು ನಿಜ. ಆ ಕಾರಣದಿಂದಲೇ ಪೇರಿಯಾರ್ ಅಂಥವರು ಕಾಂಗ್ರೆಸ್ ಪಕ್ಷ ಬಿಡಬೇಕಾಯಿತು. ಸಮಾಜವಾದಿಗಳು ಕಾಂಗ್ರೆಸ್ ಪಕ್ಷದ ದೂರ ಉಳಿದಿದ್ದರು. ಆದರೆ ಬದಲಾದ ಕಾಲಘಟ್ಟದಲ್ಲಿ ಬ್ರಾಹ್ಮಣವಾದಿಗಳು ತಮ್ಮದೆ ಸ್ವಂತ ಪಕ್ಷ ಜನಸಂಘ ಸ್ಥಾಪಿಸಿಕೊಂಡು ಅದನ್ನು ಮುಂದೆ ಬಿಜೆಪಿ ಎಂದು ಹೆಸರು ಬದಲಾಯಿಸಿಕೊಂಡರು. ಅಷ್ಟಾದರೂ ಕಾಂಗ್ರೆಸ್ ಪಕ್ಷ ಇನ್ನೂ ಬ್ರಾಹ್ಮಣ್ಯಮುಕ್ತ ಆಗಿಲ್ಲ.

ಉದಾಹರಣೆಗೆ 2019 ರ ಸಂಸತ್ ಚುನಾವಣೆಯಲ್ಲಿ ಅಂದಿನ ಪ್ರದೇಶ ಕಾಂಗ್ರೆಸ್ ಅದ್ಯಕ್ಷ ದಿನೇಶ್ ಗುಂಡೂರಾವ್ ಅವರು ಧಾರವಾಡ ಕ್ಷೇತ್ರದಿಂದ ಪ್ರಲ್ಹಾದ್ ಜೋಷಿ ಎದುರುಗೆ ಪ್ರಬಲ ಅಭ್ಯರ್ಥಿ ವಿನಯ್ ಕುಲಕರ್ಣಿಯವರಿಗೆ ಟಿಕೇಟ್ ತಪ್ಪಿಸಲು ಪ್ರಯತ್ನಿಸಿದರು ಎನ್ನುವ ಆರೋಪ ಅಂದು ಬಲವಾಗಿ ಕೇಳಿಬಂದಿತ್ತು. ಕೊನೆಗೆ ಘಳಿಗೆಯಲ್ಲಿ ವಿನಯ್ ಕುಲಕರ್ಣಿ ಟಿಕೇಟ್ ಗಿಟ್ಟಿಸಿಕೊಂಡು ಅಭ್ಯರ್ಥಿಯಾದರು. ಅದಕ್ಕೆ ಪುಷ್ಟಿಯೊದಗಿಸುವಂತೆ ಪ್ರಲ್ಹಾದ ಜೋಷಿಯವರು ಕೆಲಸಗಾರರುˌ ಅವರು ಧಾರವಾಡ ಅಭಿವ್ರದ್ಧಿಗಾಗಿ ಅಪಾರ ಕೆಲಸ ಮಾಡಿದ್ದಾರೆ ಎಂದು ಚುನಾವಣಾ ಸಂದರ್ಭದಲ್ಲಿ ಬಹಿರಂಗ ಹೇಳಿಕೆ ನೀಡಿದ್ದರು.

ಇನ್ನು ಮುಖ್ಯ ವಿಷಯಕ್ಕೆ ಬರುವ ಮೊದಲು ಮಹಾತ್ಮ ಗಾಂಧಿಯವರ ಕೆಳಗಿನ ಮಾತನ್ನು ಗಮನಿಸೋಣ....

" ಸ್ವಾತಂತ್ರ್ಯ ಬರುತ್ತಿರುವುದು ಕಾಂಗ್ರೆಸ್ ಪಕ್ಷಕ್ಕಲ್ಲ ˌ ಭಾರತಕ್ಕೆ."

~ಮಹಾತ್ಮ ಗಾಂಧಿ

(ಅಂಬೇಡ್ಕರ್ ಕಾಂಗ್ರೇಸ್ ಸದಸ್ಯರಲ್ಲ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಹೇಗೆ ಎಂದು ಕೆಲವು ಕಾಂಗ್ರೆಸ್ಸಿಗರು ಪ್ರಶ್ನಿಸಿದಾಗ ಗಾಂಧಿಯವರು ಮೇಲಿನಂತೆ ಪ್ರತಿಕ್ರಿಯಿಸಿದ್ದರು)

ಕಾಂಗ್ರೆಸ್ ಮತ್ತು ಗಾಂಧಿ ದ್ವೇಷಿ ದಲಿತ ಇದನ್ನು ಅರ್ಥಮಾಡಿಕೊಳ್ಳಬೇಕು.

ಎಪ್ಪತ್ತರ ಎಂಬತ್ತರ ದಶಕದಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬರುತ್ತಿದ್ದಂತೆ ಮೊದಲು ಮಾಡಲಾರಂಭಿಸಿದ ಕೆಲಸವೆಂದರೆ ಕಾಂಗ್ರೆಸ್ ಪಕ್ಷದ ಮತ ಬ್ಯಾಂಕನ್ನು ಛಿದ್ರಗೊಳಿಸುವುದು. ಅದರ ಮೊದಲ ಹೆಜ್ಜೆಯಾಗಿ ಆಯಾ ರಾಜ್ಯಗಳಲ್ಲಿ ಬ್ರಾಹ್ಮಣೇತರ ಮೇಲ್ವರ್ಗಗಳನ್ನು ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ಎತ್ತಿಕಟ್ಟುವ ಕೆಲಸ ಮಾಡಿತು. ಆನಂತರ ದಲಿತ ಮತಬ್ಯಾಂಕನ್ನು ಕ್ರಮೇಣ ಒಡೆಯುವ ಕೆಲಸ ಆರಂಭಿಸಿತು. ದಲಿತರೊಳಗಿನ ಸ್ಪೃಶ್ಯ ಮತ್ತು ಅಸ್ಪೃಶ್ಯ ಪಂಡಗಗಳ್ಳು ವಿಭಜಿಸಿತು. ಸ್ಪೃಶ್ಯ ದಲಿತರಾದ ಲಂಬಾಣಿˌ ಭೋವಿಗಳನ್ನು ಹಾಗೂ ಅಸ್ಪೃಶ್ಯರಲ್ಲಿನ ಎಡಗೈ ದಲಿತರನ್ನು ಮೀಸಲು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅವಕಾಶ ನೀಡುವ ಮೂಲಕ ಬಲಗೈ ದಲಿತರನ್ನು ಅಕ್ಷರಶಃ ಏಕಾಂಗಿ ಮಾಡಿದ್ದು ಬಿಜೆಪಿ ಪಕ್ಷ. ಆದಾಗ್ಯೂ ಈ ಶ್ರೀನಿವಾಸಪ್ರಸಾದ್ ಮತ್ತು ಸಿನೆಮಾ ನಟ ಶಿವರಾಮ್ ಅಂಥವರಿಗೆ ಬಿಜೆಪಿಯ ಒಡೆದಾಳುವ ನೀತಿ ಅರ್ಥವಾಗಲೇ ಇಲ್ಲ ˌ ಅಥವ ತಮ್ಮ ಸ್ವಾರ್ಥತನಕ್ಕಾಗಿ ಬಲಗೈ ದಲಿತ ಸಮುದಾಯದ ಹಿತಾಸಕ್ತಿಯನ್ನು ಬಲಿಕೊಟ್ಟರು.

ಈಗ ಕಾಂಗ್ರೆಸ್ ಪಕ್ಷದೊಂದಿಗೆ ಉಳಿದ ಏಕೈಕ ಸಮುದಾಯವೆಂದರೆ ಅಲ್ಪಸಂಖ್ಯಾತ ಸಮುದಾಯ ಮಾತ್ರ. ಅದು ಅವರಿಗೆ ಅನಿವಾರ್ಯ ಕೂಡ. ಈಗಿನ ಸಂದರ್ಭದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಯ ಸಮುದಾಯ ಪ್ರಬಲವಾಗಿದ್ದರೆ ಆ ಸಮುದಾಯ ಮತ್ತು ಅದರೊಂದಿಗೆ ಅಲ್ಪಸಂಖ್ಯಾತರ ಸಮುದಾಯ ಹಾಗೂ ಇನ್ನಷ್ಟು ಸಣ್ಣ ಪುಟ್ಟ ಸಮುದಾಯಗಳು ಬೆಂಬಲಿಸಿದರೆ ಮಾತ್ರ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ಅವಕಾಶ ನಿಚ್ಛಳˌ ಇಲ್ಲದಿದ್ದರೆ ಇಲ್ಲ. ಹೀಗಾಗಿಗಯೇ ದೇಶಾದ್ಯಂತ ಕಾಂಗ್ರೆಸ್ ಪಕ್ಷದ ಬಲ ಕ್ಷೀಣಿಸಿದೆ. ಅಷ್ಟಾದರೂ ಕೂಡ ಭಾರತದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಒಂದಷ್ಟು ಬಿಜೆಪಿಗೆ ಪೈಪೋಟಿ ನೀಡಬಲ್ಲ ಏಕೈಕ ಪಕ್ಷವೆಂದರೆ ಅದು ಕಾಂಗ್ರೆಸ್ ಮಾತ್ರ. ದೇಶದಲ್ಲಿ ಕಾಂಗ್ರೆಸ್ ಪಕ್ಷದ ಬಲ ಕ್ಷೀಣಿಸುವುದೆಂದರೆ ಜನತಂತ್ರದ ಮತ್ತು ಸಂವಿಧಾನದ ಬಲ ಕ್ಷೀಣಿಸಿದಂತೆಯೆ. ಇದನ್ನು ದೇಶದ ಜಾತ್ಯಾತೀತ ಮನಸ್ಸುಗಳುˌ ಸಂವಿಧಾನವನ್ನು ಗೌರವಿಸುವವರುˌ ಬಹುತ್ವ ಸಂಸ್ಕ್ರತಿಯಲ್ಲಿ ನಂಬಿಕೆ ಇಟ್ಟವರು ಅರ್ಥಮಾಡಿಕೊಳ್ಳಬೇಕಿದೆ.

ಬಿಜೆಪಿ ಈಗ ಸಂವಿಧಾನವನ್ನು ಬದಲಾಯಿಸುವˌ ದೇಶವನ್ನು ಏಕ ಸಂಸ್ಕ್ರತಿ ˌ ಒಕ ಭಾಷೆˌ ಏಕ ಧರ್ಮದ ಚೌಕಟ್ಟಿಗೆ ಸಿಲುಕಿಸುವ ಹಂತ ತಲುಪಿ ನಿಂತಿದೆ. ಮುಂದೆಯೂ ಬಿಜೆಪಿ ಅಧಿಕಾರಕ್ಕೇರಿದರೆ ಇಲ್ಲಿ ಈ ಮೊದಲಿನಂತೆ ಪ್ರಜೆಗಳಾಗೆ ಅಭಿವ್ಯಕ್ತಿ ಸ್ವಾತಂತ್ರವಾಗಲಿˌ ಧಾರ್ಮಿಕ ಸ್ವಾತಂತ್ರವಾಗಲಿ ಇರುವುದಿಲ್ಲ ಎನ್ನುವ ಲಕ್ಷಣಗಳು ದಟ್ಟವಾಗಿ ಕಾಣಲಾರಂಭಿಸಿವೆ. ದಲಿತ ದಮನಿತ ಮೀಸಲಾತಿ ಸೌಲಭ್ಯ ಹೋಗಲಿ ಈಗ ಮುಂಬರುವ ದಿನಗಳಲ್ಲಿ ಬರಲಿರುವ ರಾಷ್ಟ್ರೀಯ ಪೌರತ್ವ ನೋಂದಣಿ ಕಾನೂನಿನನ್ವಯ ಈ ದೇಶದ ಶೋಷಿತರುˌ ದಲಿತ ದಮನಿತರು ಇಲ್ಲಿನ ಪೌರತ್ವ ಪಡೆಯುವುದೇ ಅನುಮಾನದ ಸಂಗತಿಯಾಗಿದೆ. ಅಲ್ಪಸಂಖ್ಯಾತರುˌ ದಲಿತ ದಮನಿತರು ಎರಡನೇ ದರ್ಜೆಯ ನಾಗರಿಕರಾಗಿˌ ಮತದಾನದ ಹಕ್ಕು ಮತ್ತು ಇತರ ಸಂವಿಧಾನಬದ್ಧ ಮೂಲಭೂತ ಹಕ್ಕುಗಳನ್ನು ಕಳೆದುಕೊಂಡು ಬದುಕಬೇಕಾದ ಪ್ರಸಂಗ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ.

ಇಂದು ಬಿಜೆಪಿಯನ್ನು ಬೆಂಬಲಿಸುತ್ತಿರುವ ದಲಿತ ನಾಯಕರು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡೊ ಅಥವ ತಮ್ಮ ಅಪಾರ ಸಂಪತ್ತಿನೊಡನೆ ವಿದೇಶಕ್ಕೆ ಪಲಾಯನ ಮಾಡಿಯೊ ಬಚಾವ್ ಆಗಬಹುದು. ಆದರೆ ಇಲ್ಲಿನ ಬಡ ದಲಿತರು ಮತ್ತು ಶೋಷಿತ ವರ್ಗದ ಜನರನ್ನು ಯಾರೂ ಕಾಪಾಡಲಾರರು. ಇದು ಒಂದು ಕಲ್ಪನಾತ್ಮಕ ಸಂಗತಿಯಂತೆ ನಿಮ್ಮಲ್ಲಿ ಕೆಲವರಿಗೆ ಅನ್ನಿಸಲೂಬಹುದು. ಆದರೆ ಇದೊಂದು ವಾಸ್ತವ ಸತ್ಯ. ಆ ಕಾಲ ಬಹಳ ದೂರವೂ ಇಲ್ಲ ಎನ್ನುವುದು ನನ್ನ ಬಲವಾದ ಅನಿಸಿಕೆ.

Click here to follow us on Facebook , Twitter, YouTube, Telegram

Pratidhvani
www.pratidhvani.com