ಅಧಿಕಾರದಲ್ಲಿರುವವರಿಗೆ ಚೀನಾದ ಹೆಸರು ಹೇಳಲು ಭಯವೇಕೆ? ಕಾಂಗ್ರೆಸ್‌ ಪ್ರಶ್ನೆ
ರಾಷ್ಟ್ರೀಯ

ಅಧಿಕಾರದಲ್ಲಿರುವವರಿಗೆ ಚೀನಾದ ಹೆಸರು ಹೇಳಲು ಭಯವೇಕೆ? ಕಾಂಗ್ರೆಸ್‌ ಪ್ರಶ್ನೆ

ದಾಳಿ ನಡೆದಾಗಲೆಲ್ಲಾ ಚೀನಾಕ್ಕೆ ಸೂಕ್ತ ಉತ್ತರವನ್ನು ನೀಡಿದ್ದಕ್ಕಾಗಿ ನಾವು ಸಶಸ್ತ್ರ ಪಡೆಗಳಿಗೆ ನಮಸ್ಕರಿಸುತ್ತೇವೆ. ಆದರೆ ಅಧಿಕಾರದಲ್ಲಿ ಕುಳಿತವರು ಏನು ಮಾಡುತ್ತಿದ್ದಾರೆ? ಚೀನಾದ ಹೆಸರನ್ನು ಉಲ್ಲೇಖಿಸಲು ಅವರು ಏಕೆ ಹೆದರುತ್ತಾರೆ?

ಪ್ರತಿಧ್ವನಿ ವರದಿ

ದೇಶದ ಅಧಿಕಾರದಲ್ಲಿರುವವರಿಗೆ ನಮ್ಮ ಗುಡಿಯೊಳಗೆ ನುಸುಳಿದ ಚೀನಾದ ಹೆಸರು ಹೇಳಲು ಭಯವೇಕೆ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ. ಅಲ್ಲದೆ, ದೇಶದ ಗಡಿಯನ್ನು ರಕ್ಷಿಸಲು ಹಾಗೂ ಚೀನಾವನ್ನು ಹಿಮ್ಮಟ್ಟಿಸಲು ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂಬುದನ್ನು ಎಲ್ಲರೂ ಪ್ರಶ್ನಿಸಬೇಕಿದೆ ಎಂದು ಕಾಂಗ್ರೆಸ್‌ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲ ಹೇಳಿದ್ದಾರೆ.

ಕೆಂಪು ಕೋಟೆಯಲ್ಲಿ ಸ್ವತಂತ್ರೋತ್ಸವದ ಭಾಷಣ ಮಾಡಿದ ಮೋದಿ ಭಾರತೀಯ ಯೋಧರು LoC to LAC ತನಕ, ಭಾರತದ ಸೌರ್ವಭೌಮತ್ವವನ್ನು ಪ್ರಶ್ನಿಸಿದವರಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದಿದ್ದಾರೆ. ತನ್ನ ಭಾಷಣದಲ್ಲೆಲ್ಲೂ ಭಾರತದ ಗಡಿಯಲ್ಲಿ ತಂಟೆ ತೆಗೆದು ಭಾರತೀಯ 24 ಯೋಧರ ಸಾವಿಗೆ ಕಾರಣವಾದ ಚೀನಾದ ಹೆಸರನ್ನು ಮೋದಿ ಎಲ್ಲೂ ಉಲ್ಲೇಖಿಸದ ಮೋದಿ, ದೇಶದ ರಕ್ಷಣೆಗೆ ಎಲ್ಲರೂ ಕಟಿಬದ್ಧರಾಗಿದ್ದಾರೆ ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತ ಮತ್ತು ಎಲ್ಲಾ 130 ಕೋಟಿ ಭಾರತೀಯರು ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆ ಪಡುತ್ತಾರೆ ಮತ್ತು ಅವರ ಮೇಲೆ ಸಂಪೂರ್ಣ ನಂಬಿಕೆಯನ್ನು ಹೊಂದಿದ್ದಾರೆ. ದಾಳಿ ನಡೆದಾಗಲೆಲ್ಲಾ ಚೀನಾಕ್ಕೆ ಸೂಕ್ತ ಉತ್ತರವನ್ನು ನೀಡಿದ್ದಕ್ಕಾಗಿ ನಾವು ಸಶಸ್ತ್ರ ಪಡೆಗಳಿಗೆ ನಮಸ್ಕರಿಸುತ್ತೇವೆ. ಆದರೆ ಅಧಿಕಾರದಲ್ಲಿ ಕುಳಿತವರು ಏನು ಮಾಡುತ್ತಿದ್ದಾರೆ? ಚೀನಾದ ಹೆಸರನ್ನು ಉಲ್ಲೇಖಿಸಲು ಅವರು ಏಕೆ ಹೆದರುತ್ತಾರೆ? ಎಂದು ಶ್ರೀ ಸುರ್ಜೆವಾಲಾ ಕೇಳಿದ್ದಾರೆ.

"ಚೀನಾ ಭಾರತೀಯ ಭೂಪ್ರದೇಶವನ್ನು ಪ್ರವೇಶಿಸಿದ ಸಮಯದಲ್ಲಿ, ಪ್ರತಿಯೊಬ್ಬ ಭಾರತೀಯರು, ಚೀನಾವನ್ನು ಹಿಮ್ಮಟ್ಟಿಸಲು ಮತ್ತು ದೇಶವನ್ನು ರಕ್ಷಿಸಲು ಸರ್ಕಾರ ಏನು ಮಾಡುತ್ತಿದೆ ಎಂಬುದನ್ನು ಕೇಳಬೇಕಾಗಿದೆ. ಈ ಸ್ವಾತಂತ್ರ್ಯ ದಿನದಂದು ಇದನ್ನು ಕೇಳಬೇಕು. ಅದು ಪ್ರಜಾಪ್ರಭುತ್ವದ ನಿಜವಾದ ಅರ್ಥ" ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ಅಲ್ಲದೆ, ಜನರ ಆದೇಶವನ್ನು ಸರ್ಕಾರ ನಂಬುತ್ತದೆಯೇ ಮತ್ತು ದೇಶದಲ್ಲಿ ಮುಕ್ತವಾಗಿ ಮಾತನಾಡುವ ಸ್ವಾತಂತ್ರ್ಯವಿದೆಯೇ ಎಂದು ಪ್ರಶ್ನಿಸುವುದು ಮುಖ್ಯವಾಗಿದೆ ಎಂದು ಅವರು ಹೇಳಿದ್ದಾರೆ.

“ನಮ್ಮ ಸರ್ಕಾರವು ಪ್ರಜಾಪ್ರಭುತ್ವವನ್ನು ನಂಬುತ್ತದೆಯೇ? ನಮ್ಮ ಸರ್ಕಾರವು ಸಾರ್ವಜನಿಕ ಅಭಿಪ್ರಾಯವನ್ನು ನಂಬುತ್ತದೆಯೇ? ಮಾತನಾಡಲು, ಯೋಚಿಸಲು, ಪ್ರಯಾಣಿಸಲು, ನಾವು ಇಷ್ಟಪಡುವದನ್ನು ಧರಿಸಲು, ನಮ್ಮ ಜೀವನೋಪಾಯವನ್ನು ಗಳಿಸಲು ನಮಗೆ ಸ್ವಾತಂತ್ರ್ಯವಿದೆಯೇ" ಎಂದು ಸುರ್ಜೆವಾಲಾ ಕೇಳಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com