ತೆಲಂಗಾಣ: ಕಂದಾಯ ಅಧಿಕಾರಿಯ ನಿವಾಸದಿಂದ 1.1 ಕೋಟಿ ಮೌಲ್ಯದ ನಗದು ವಶ
ರಾಷ್ಟ್ರೀಯ

ತೆಲಂಗಾಣ: ಕಂದಾಯ ಅಧಿಕಾರಿಯ ನಿವಾಸದಿಂದ 1.1 ಕೋಟಿ ಮೌಲ್ಯದ ನಗದು ವಶ

ಮೆಡ್‌ಚಲ್‌-ಮಲ್ಕಾಜ್‌ಗಿರಿ ಜಿಲ್ಲೆಯ ಕಿಸರಾ ಪ್ರದೇಶದ ಉಸ್ತುವಾರಿ ಮಂಡಲ್ ಅಧಿಕಾರಿ ಎರ್ವಾ ಬಲರಾಜು ನಾಗರಾಜು ಅವರು ತಮ್ಮ ಬಾಡಿಗೆ ನಿವಾಸದಲ್ಲಿ ಲಂಚ ಸ್ವೀಕರಿಸಿ ಸಿಕ್ಕಿಬಿದ್ದಿದ್ದಾರೆ

ಪ್ರತಿಧ್ವನಿ ವರದಿ

ತೆಲಂಗಾಣದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ರಾಜ್ಯದ ಮೆಡ್‌ಚಲ್‌-ಮಲ್ಕಾಜ್‌ಗಿರಿ (Medchal-Malkajgiri) ಜಿಲ್ಲೆಯ ಸ್ಥಳೀಯ ಕಂದಾಯ ಅಧಿಕಾರಿಯ ನಿವಾಸದಿಂದ 1.1 ಕೋಟಿ ಮೌಲ್ಯದ ನಗದನ್ನು ವಶಪಡಿಸಿಕೊಂಡಿದ್ದಾರೆ.

ಜಿಲ್ಲೆಯ ಕಿಸರಾ ಪ್ರದೇಶದ ಉಸ್ತುವಾರಿ ಮಂಡಲ್ ಅಧಿಕಾರಿ ಎರ್ವಾ ಬಲರಾಜು ನಾಗರಾಜು ಅವರು ತಮ್ಮ ಬಾಡಿಗೆ ನಿವಾಸದಲ್ಲಿ ಲಂಚ ಸ್ವೀಕರಿಸಿ ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ.

ಗ್ರಾಮದ ಅಧಿಕಾರಿ ಮತ್ತು ಇಬ್ಬರು ರಿಯಲ್ ಎಸ್ಟೇಟ್ ಏಜೆಂಟರು ಸೇರಿದಂತೆ ಇತರ ಮೂವರನ್ನು ಸಹ ಬಂಧಿಸಲಾಗಿದೆ. ಅವರ ನಿವಾಸ ಮತ್ತು ತಹಶೀಲ್ದಾರ್ ಕಚೇರಿಯ ಹೆಚ್ಚಿನ ಶೋಧಗಳು ನಡೆಯುತ್ತಿವೆ.

ಅಧಿಕಾರಿಗಳ ಪ್ರಕಾರ, ತಮ್ಮ ವ್ಯಾಪ್ತಿಯಲ್ಲಿರುವ 28 ಎಕರೆ ಜಮೀನಿನ ವಿವಾದವನ್ನು ಬಗೆಹರಿಸಲು ನಾಗರಾಜು ₹ 2 ಕೋಟಿ ಲಂಚ ನೀಡುವಂತೆ ಒತ್ತಾಯಿಸಿದ್ದಾರೆ.

ಕಂದಾಯ ಅಧಿಕಾರಿಯ ಮನೆಯಲ್ಲಿ ₹ 1.1 ಕೋಟಿಗಳಲ್ಲದೆ ಇನ್ನೂ ₹ 28 ಲಕ್ಷ ನಗದು ಮತ್ತು ಚಿನ್ನವೂ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಹಲವು ಜಮೀನಿನ ದಾಖಲೆಗಳನ್ನು ಕೂಡಾ ವಶಪಡಿಸಿಕೊಳ್ಳಲಾಗಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com