ಪ್ರಣಬ್ ಮುಖರ್ಜಿ ನಿಧನ ವಾರ್ತೆ ಸುಳ್ಳು: ಪುತ್ರ ಅಭಿಜಿತ್ ಸ್ಪಷ್ಟನೆ
ರಾಷ್ಟ್ರೀಯ

ಪ್ರಣಬ್ ಮುಖರ್ಜಿ ನಿಧನ ವಾರ್ತೆ ಸುಳ್ಳು: ಪುತ್ರ ಅಭಿಜಿತ್ ಸ್ಪಷ್ಟನೆ

ಆಸ್ಪತ್ರೆಯಲ್ಲಿ ದಾಖಲಾಗಿರುವ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರು ಮೃತಪಟ್ಟಿಲ್ಲ ಎಂದ ಪ್ರಣಬ್‌ ಪುತ್ರ ಅಭಿಜಿತ್‌ ಮುಖರ್ಜಿ ಸ್ಪಷ್ಟಪಡಿಸಿದ್ದಾರೆ.

ಪ್ರತಿಧ್ವನಿ ವರದಿ

ಆಸ್ಪತ್ರೆಯಲ್ಲಿ ದಾಖಲಾಗಿರುವ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರು ಮೃತಪಟ್ಟಿಲ್ಲ ಎಂದ ಪ್ರಣಬ್‌ ಪುತ್ರ ಅಭಿಜಿತ್‌ ಮುಖರ್ಜಿ ಸ್ಪಷ್ಟಪಡಿಸಿದ್ದಾರೆ.

84 ವರ್ಷದ ಮಾಜಿ ರಾಷ್ಟ್ರಪತಿಗೆ ಕಳೆದ ಕೆಲವು ದಿನಗಳ ಹಿಂದೆ ಕೋವಿಡ್‌ ಪಾಸಿಟಿವ್‌ ವರದಿ ಬಂದಿತ್ತು. ಮೆದುಳು ಶಸ್ತ್ರಚಿಕಿತ್ಸೆಯೂ ಆಗಿದ್ದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವರದಿ ಬಂದಿತ್ತು. ಇದರ ಬೆನ್ನಲ್ಲಿ ಪ್ರಣಬ್‌ ಮುಖರ್ಜಿ ಮೃತಪಟ್ಟಿದ್ದಾರೆಂಬ ಮಾಹಿತಿಗಳು ಹರಿದಾಡತೊಡಗಿದ್ದವು. ಹಲವರು ಅವರಿಗೆ ಅಂತಿಮ ವಿದಾಯ ಅರ್ಪಿಸಿದ್ದರು.

ಖ್ಯಾತ ಪತ್ರಕರ್ತ ರಾಜ್‌ದೀಪ್‌ ಸರ್ದೇಸಾಯಿ ಕೂಡಾ ಪ್ರಣಬ್‌ ಮುಖರ್ಜಿ ನಿಧನ ವಾರ್ತೆ ಹಂಚಿಕೊಂಡಿದ್ದಾರೆ. ಬಳಿಕ ಸುಳ್ಳು ಸುದ್ದಿ ಹಂಚಿರುವುದಾಗಿ ವಿಷಾದ ವ್ಯಕ್ತಪಡಿಸಿ ಕ್ಷಮೆ ಕೇಳಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com