EIA2020 ಭಯಾನಕ ಕಾನೂನು: ಕೇಂದ್ರಕ್ಕೆ ಪತ್ರ ಬರೆದ ಪಾರ್ವತಿ ತಿರುವೊತು
ರಾಷ್ಟ್ರೀಯ

EIA2020 ಭಯಾನಕ ಕಾನೂನು: ಕೇಂದ್ರಕ್ಕೆ ಪತ್ರ ಬರೆದ ಪಾರ್ವತಿ ತಿರುವೊತು

ಸಾರ್ವಜನಿಕ ಅಭಿಪ್ರಾಯಕ್ಕಾಗಿ ಅಧಿಸೂಚನೆಯನ್ನು ಹೊರಡಿಸುವಾಗ ಹಿಂದಿ ಹಾಗೂ ಇಂಗ್ಲಿಷ್‌ ಎರಡು ಭಾಷೆಯಲ್ಲಿ ಮಾತ್ರ ಪ್ರಕಟಿಸಿದ್ದೀರಿ, ಈ ಎರಡು ಭಾಷೆಗಳು ಬಾರದ ಅಸಂಖ್ಯಾತ ಭಾರತೀಯರಿದ್ದಾರೆ. ಅವರು ಇದನ್ನು ಓದಿ ಅರ್ಥ ಮಾಡಿಕೊಳ್ಳುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಪ್ರತಿಧ್ವನಿ ವರದಿ

ಕೇಂದ್ರ ಸರ್ಕಾರ ತರಲು ಹೊರಟಿರುವ ಇಐಎ ತಿದ್ದುಪಡಿ ಕಾಯ್ದೆಗೆ ದೇಶದಾದ್ಯಂತ ಪರಿಸರ ಪ್ರೇಮಿಗಳಿಂದ, ಸಾಮಾಜಿಕ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿದೆ. ಇಐಎ ತಿದ್ದುಪಡಿ ಕರಡಿನಲ್ಲಿ ಪರಿಸರಕ್ಕೆ ಮಾರಕವಾಗುವ ಅಂಶಗಳಿವೆ. ರಕ್ಷಿತಾರಣ್ಯ ಸೇರಿದಂತೆ ಅರಣ್ಯ ಪ್ರದೇಶಗಳನ್ನು ಖಾಸಗಿ ಕಾರ್ಖಾನೆಗೆ ಕೊಡುವ ತರಾತುರಿಯ ಉತ್ಸುಕತೆಯನ್ನು ಕೇಂದ್ರ ಸರ್ಕಾರ ತೋರುತ್ತಿದೆ. ʼಪ್ರತಿಧ್ವನಿʼಯು ಈ ಕಾನೂನಿನ ಬಾಧಕಗಳ ಕುರಿತು ಸಮಗ್ರ ವರದಿಯನ್ನು ಪ್ರಕಟಿಸಿತ್ತು.

ಪರಿಸರ ಪ್ರೇಮಿಗಳು, ಸಾಮಾಜಿಕ ಕಾರ್ಯಕರ್ತರಲ್ಲದೆ ಸಾಮಾಜಿಕ ಕಳಕಳಿಯುಳ್ಳ ಸಿನಿ ತಾರೆಯರೂ ಇದರ ವಿರುದ್ಧ ದನಿಯೆತ್ತಲು ಶುರುಮಾಡಿದ್ದಾರೆ. ತಮಿಳಿನ ಖ್ಯಾತ ನಟ ಸೂರ್ಯ ಹಾಗೂ ಅವರ ಸಹೋದರ ಕಾರ್ತಿ ಕೂಡ ಕಳೆದ ತಿಂಗಳು ಇಐಎ ವಿರುದ್ಧ ದನಿಯೆತ್ತಿದ್ದರು. ಅವರ ಸಾಲಿಗೆ ಬಹುಬಾಷಾ ನಟಿ ಪಾರ್ವತಿ ತಿರುವೊತ್ತು ಕೂಡಾ ಸೇರಿಕೊಂಡಿದ್ದಾರೆ.

ಇಐಎ ತಿದ್ದುಪಡಿ ಒಂದು ಭಯಾನಕ ಕಾನೂನು ಎಂದು ಆತಂಕ ವ್ಯಕ್ತಪಡಿಸಿರುವ ಪಾರ್ವತಿ, ಇಐಎ 2020ಯನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ. ಸಾರ್ವಜನಿಕ ಅಭಿಪ್ರಾಯಕ್ಕಾಗಿ ಅಧಿಸೂಚನೆಯನ್ನು ಹೊರಡಿಸುವಾಗ ಹಿಂದಿ ಹಾಗೂ ಇಂಗ್ಲಿಷ್‌ ಎರಡು ಭಾಷೆಯಲ್ಲಿ ಮಾತ್ರ ಪ್ರಕಟಿಸಿದ್ದೀರಿ, ಈ ಎರಡು ಭಾಷೆಗಳು ಬಾರದ ಅಸಂಖ್ಯಾತ ಭಾರತೀಯರಿದ್ದಾರೆ. ಅವರು ಇದನ್ನು ಓದಿ ಅರ್ಥ ಮಾಡಿಕೊಳ್ಳುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಇಐಎ ಕರಡಿನಲ್ಲಿ ಏನಾದರೂ ಬದಲಾವಣೆಯನ್ನು ಬಯಸುವುದಾದರೆ ಸಾರ್ವಜನಿಕರು eia2020-moefcc@gov.in ಮೇಲ್‌ ಮಾಡಿ ತಮ್ಮ ಅಭಿಪ್ರಾಯ ತಿಳಿಸಬಹುದು ಎಂದು ಸರ್ಕಾರ ಹೇಳಿತ್ತು.

“ನಮ್ಮ ಪರಿಸರ, ಕಾಡುಗಳು, ನೈಸರ್ಗಿಕ ಸಂಪನ್ಮೂಲಗಳನ್ನು ನಿಜವಾಗಿಯೂ ರಕ್ಷಿಸುವ ಕಾನೂನುಗಳ ಬಗ್ಗೆ ಸಚಿವಾಲಯವು ಕಾಳಜಿಯನ್ನು ಹೊಂದಿಲ್ಲವೇ? ಶಾಸನ ರಚನೆ ಎಂಬುದು ಕೇವಲ ಸಂಪ್ರದಾಯವಾಗಿ ಉಳಿದಿದೆಯೇ? ಎಂದು ನಟಿ ಪ್ರಶ್ನಿಸಿದ್ದಾರೆ.

“ಇಐಎ 2020 ಕರಡು ಸಾಮಾನ್ಯ ಜನರ ಮತ್ತು ತಜ್ಞರ ಮನಸ್ಸಿನಲ್ಲಿ ಹೊಸ ಭಯವನ್ನು ಹುಟ್ಟುಹಾಕಿದೆ. ಈ ಪ್ರಯತ್ನವು ನಮ್ಮ ಪೀಳಿಗೆಯ ಭವಿಷ್ಯವನ್ನು ವ್ಯವಸ್ಥಿತವಾಗಿ ಕೆಡವಲು ಒಂದು ಪ್ರಯೋಗವಾಗಿ ಕಾಣುತ್ತದೆ ಮತ್ತು ಇದನ್ನು ನಮ್ಮ ರಾಷ್ಟ್ರದ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರವು ಘೋಷಿಸಬಾರದು ಎಂದು ಸೂರ್ಯ, ಕಾರ್ತಿ ಕುಟುಂಬ ನಡೆಸುವ ಸಂಸ್ಥೆ ʼಉಳುವನ್‌ʼ ಹೇಳಿತ್ತು.

Click here to follow us on Facebook , Twitter, YouTube, Telegram

Pratidhvani
www.pratidhvani.com