ದೆಹಲಿ ಬಸ್‌ಗಳಲ್ಲಿ ಇನ್ನು ಮುಂದೆ ಇ-ಟಿಕೆಟ್
ರಾಷ್ಟ್ರೀಯ

ದೆಹಲಿ ಬಸ್‌ಗಳಲ್ಲಿ ಇನ್ನು ಮುಂದೆ ಇ-ಟಿಕೆಟ್

ಮೊಬೈಲ್‌ ಅಪ್ಲಿಕೇಶನ್‌ಗೆ ಸಾರ್ವಜನಿಕರ ಪ್ರತಿಕ್ರಿಯೆ ಸಕರಾತ್ಮಕವಾಗಿದೆ. ಪರಿಶೀಲನೆ ನಡೆಸಿ ತಂಡವು ಸಿದ್ಧಪಡಿಸಿದ ವರದಿಯನ್ನು ಇನ್ನು ಕಾರ್ಯಪಡೆಗೆ ಸಲ್ಲಿಸಲಾಗುವುದು

ಪ್ರತಿಧ್ವನಿ ವರದಿ

ದೆಹಲಿಯ ಬಸ್‌ ಯಾತ್ರಿಕರು ಶೀಘ್ರದಲ್ಲೇ ಮೊಬೈಲ್ ಅಪ್ಲಿಕೇಶನ್, ಚಾರ್ಟರ್ ಬಳಸಿ ಬಸ್ ಶುಲ್ಕವನ್ನು ಪಾವತಿಸಿ ʼಇ-ಟಿಕೆಟ್’ ಪಡೆಯಬಹುದು. ದೆಹಲಿ ಸರ್ಕಾರ ಪರಿಚಯಿಸಿರುವ ಹೊಸ ಅಪ್ಲಿಕೇಶನ್ ಮೂಲಕ ಬಸ್ ಯಾವ ಮಾರ್ಗದಲ್ಲಿದೆ, ಬಸ್‌ ಬರುವ ನಿಖರತೆಯನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ದೆಹಲಿ ಸರ್ಕಾರಿ ಸಾರಿಗೆ ಇಲಾಖೆ ಬುಧವಾರ ಎಲ್ಲಾ ದೆಹಲಿ ಸಾರಿಗೆ ನಿಗಮ (ಡಿಟಿಸಿ) ಮತ್ತು ಕ್ಲಸ್ಟರ್ ಬಸ್‌ಗಳಲ್ಲಿ ಮೂರು ದಿನಗಳ ಇ-ಟಿಕೆಟಿಂಗ್ ವ್ಯವಸ್ಥೆಯ ಸಾರ್ವಜನಿಕ ಪ್ರಯೋಗವನ್ನು ಪ್ರಾರಂಭಿಸಿದೆ. ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಆ್ಯಪ್ ಡೌನ್‌ಲೋಡ್ ಮಾಡುವುದು ಮತ್ತು ಇ-ಟಿಕೆಟ್ ಖರೀದಿಸುವುದು ಹೇಗೆ ಎಂದು ತಿಳಿಸಲಾಯಿತು. ಪ್ರಯಾಣಿಕರು ಮತ್ತು ಕಂಡಕ್ಟರ್‌ಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬಸ್‌ಗಳ ಒಳಗೆ ಕೈಗಳು ಸ್ಪರ್ಷಿಸದೆ, ಮೊಬೈಲ್ ಟಿಕೆಟಿಂಗ್ ಆಯ್ಕೆಗಳನ್ನು ರಾಜ್ಯ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ಕಾರ್ಯಪಡೆ ರಚಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ದೆಹಲಿಯ ಇಂದ್ರಪ್ರಸ್ಥ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ(ಐಐಐಟಿ) ಯ ರಾಜನ್ ಗಿರ್ಸಾ, ಅತುಲ್ ಜೈನ್ ಮತ್ತು ಕ್ಷಿತಿಜ್ ಶ್ರೀವಾಸ್ತವ ಅವರು ಅಭಿವೃದ್ಧಿಪಡಿಸಿದ್ದಾರೆ.

ಮೊಬೈಲ್‌ ಅಪ್ಲಿಕೇಶನ್‌ಗೆ ಸಾರ್ವಜನಿಕರ ಪ್ರತಿಕ್ರಿಯೆ ಸಕರಾತ್ಮಕವಾಗಿದೆ. ಪರಿಶೀಲನೆ ನಡೆಸಿ ತಂಡವು ಸಿದ್ಧಪಡಿಸಿದ ವರದಿಯನ್ನು ಇನ್ನು ಕಾರ್ಯಪಡೆಗೆ ಸಲ್ಲಿಸಲಾಗುವುದು, ಅದರ ನಂತರ ಅಪ್ಲಿಕೇಶನ್‌ನ ಪ್ರಯೋಜನವನ್ನು ಅಳೆಯುವ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಐಐಐಟಿ-ದೆಹಲಿಯ ಸಹಾಯಕ ಪ್ರಾಧ್ಯಾಪಕ ಪ್ರವೀಶ್ ಬಿಯಾನಿ ಹೇಳಿದ್ದಾರೆ.

ನಿರ್ವಾಹಕರ ಆಸನದ ಬಳಿ ಲಭ್ಯವಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಪ್ರಯಾಣಿಕರಿಗೆ ಟಿಕೆಟ್ ಖರೀದಿಸಲು ಅಪ್ಲಿಕೇಶನ್ ಸಹಾಯ ಮಾಡುತ್ತದೆ. ಅಪ್ಲಿಕೇಶನ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ.

ಕೋವಿಡ್‌ ವಿರುದ್ಧದ ಹೋರಾಟದಲ್ಲಿ ದೆಹಲಿ ಸರ್ಕಾರ ಕೈಗೊಂಡಿರುವ ಈ ನವೀನ ಯೋಜನೆ ಉಳಿದ ರಾಜ್ಯಗಳಿಗೂ ಮಾದರಿಯಾಗಬಲ್ಲದು. ಬೆಂಗಳೂರಿನಲ್ಲೂ ಬಿಎಮ್‌ಟಿಸಿ ಇಂತಹ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರಲು ಪ್ರಯತ್ನಿಸಬೇಕು.

Click here to follow us on Facebook , Twitter, YouTube, Telegram

Pratidhvani
www.pratidhvani.com