ಭಾರತದಲ್ಲಿ 2 ಮಿಲಿಯನ್ ಕರೋನಾ ಪ್ರಕರಣ: ಅಸಲಿ ಅಂಶಗಳನ್ನು ಮುಚ್ಚಿಡಲಾಗುತ್ತಿದೆಯೇ?
ರಾಷ್ಟ್ರೀಯ

ಭಾರತದಲ್ಲಿ 2 ಮಿಲಿಯನ್ ಕರೋನಾ ಪ್ರಕರಣ: ಅಸಲಿ ಅಂಶಗಳನ್ನು ಮುಚ್ಚಿಡಲಾಗುತ್ತಿದೆಯೇ?

ಭಾರತದಲ್ಲಿ COVID-19 ಸಾಂಕ್ರಾಮಿಕ ರೋಗವು ಯಾವಾಗ ಹೆಚ್ಚಾಗುತ್ತದೆ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ವಿವಿಧ ಸಂಸ್ಥೆಗಳು ವಿವಿಧ ರೀತಿಯಲ್ಲಿ ಅಧ್ಯಯನ ಮಾಡಿ ವರದಿಗಳನ್ನು ನೀಡುತ್ತಿದ್ದಾರೆ.

ಕೃಷ್ಣಮಣಿ

ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೊಸ ಮಾಹಿತಿಯಂತೆ ದೇಶದ ಒಟ್ಟು COVID-19 ಪ್ರಕರಣಗಳ ಸಂಖ್ಯೆ ಎರಡು ಮಿಲಿಯನ್ ಮೀರಿದೆ. ಕೇಂದ್ರ ಆರೋಗ್ಯ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಆಗಸ್ಟ್‌ 08ಕ್ಕೆ ಒಟ್ಟು ಪ್ರಕರಣಗಳ ಸಂಖ್ಯೆ 20,88,611 ಆಗಿದೆ ಎಂದು ತಿಳಿಸಿದೆ. ಇದರಲ್ಲಿ, 6,19,088 ಅಂದರೆ ಸರಿ ಸುಮಾರು ಶೇಕಡ 30 ರಷ್ಟು ಸಕ್ರಿಯ ಪ್ರಕರಣವಾಗಿದ್ದರೆ, 14,27,005 ಜನರು ಕೋವಿಡ್‌ 19 ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇನ್ನೂ ದೇಶಾದ್ಯಂತ 42,518 ಮಂದಿ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಲ್ಲಿ ಸುಮಾರು 5,98,778 ಪರೀಕ್ಷೆಗಳನ್ನು ನಡೆಸಲಾಗಿದ್ದು, ಬರೋಬ್ಬರಿ 61,537 ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿತ್ತು.

ದೇಶದಲ್ಲಿ ಜುಲೈ 17 ರಂದು ಒಟ್ಟು ಕರೋನಾ ಪ್ರಕರಣಗಳ ಸಂಖ್ಯೆ ಒಂದು ಮಿಲಿಯನ್ ಅಂದರೆ 10 ಲಕ್ಷ ತಲುಪಿತ್ತು. ಪ್ರಕರಣಗಳು ದ್ವಿಗುಣಗೊಳ್ಳುವ ಸಮಯ ಸರಿ ಸುಮಾರು ಮೂರು ವಾರಗಳು ಆಗಿದ್ದವು. ಜುಲೈ 27 ರಂದು ಕಂಟೇನ್‌ಮೆಂಟ್ ಝೋನ್‌ಗಳಲ್ಲೂ ಲಾಕ್‌ಡೌನ್ ಅಂತ್ಯವಾಗಿ ಮೂರು ವಾರಗಳು ಹಾಗೂ ಕಂಟೇನ್ಮೆಂಟ್‌ ಝೋನ್‌ ಅಲ್ಲದ ವಲಯಗಳಲ್ಲಿ ನಿರ್ಬಂಧಗಳು ಸಡಿಲಗೊಂಡು ಏಳು ವಾರಗಳು ಕಳೆದ ನಂತರ ಕರೋನಾ ಸೋಂಕಿತರ ಸಂಖ್ಯೆಯ ಏರಿಕೆ ಪ್ರಮಾಣ ವಿಶ್ವದಲ್ಲೇ ಅತಿ ಹೆಚ್ಚು ಎಂದು ಅಂಕಿ ಅಂಶಗಳು ತೋರಿಸುತ್ತಿವೆ. 3 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ಹೊಂದಿರುವ ದೇಶಗಳಲ್ಲಿ ಹೋಲಿಕೆ ಮಾಡಿ ನೋಡಿದಾಗ ಸೋಂಕು ದ್ವಿಗುಣವಾಗುವ ಸಮಯವು ದಕ್ಷಿಣ ಆಫ್ರಿಕಾಕ್ಕಿಂತ ಹೆಚ್ಚಾಗಿದೆ.

ಭಾರತದಲ್ಲಿ COVID-19 ಸಾಂಕ್ರಾಮಿಕ ರೋಗವು ಯಾವಾಗ ಹೆಚ್ಚಾಗುತ್ತದೆ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ವಿವಿಧ ಸಂಸ್ಥೆಗಳು ಬೇರೆ ಬೇರೆ ರೀತಿಯಲ್ಲಿ ಅಧ್ಯಯನ ಮಾಡಿ ವರದಿಗಳನ್ನು ನೀಡುತ್ತಿದೆ. ಆದರೆ ಜುಲೈ 12 ರಂದು "ನ್ಯಾಷನಲ್ ಕೋವಿಡ್‌ - 19 ಟಾಸ್ಕ್‌ಫೋರ್ಸ್‌ ಆಪರೇಷನ್ಸ್ ರಿಸರ್ಚ್ ಗ್ರೂಪ್" ಕೊಟ್ಟಿರುವ ಮಾಹಿತಿ ಪ್ರಕಾರ ಭಾರತದಲ್ಲಿ ಈ ವರ್ಷದ ನವೆಂಬರ್‌ ವೇಳೆಗೆ ಸಾಂಕ್ರಾಮಿಕ ರೋಗವು ಹೆಚ್ಚಾಗುತ್ತದೆ ಎಂದು ಹೇಳಿದೆ. ಇದರ ಜೊತೆಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್), ಆರ್ಥಿಕ ಬೆಂಬಲ ಕೊಟ್ಟಿದ್ದರೂ ಫಲಿತಾಂಶಗಳಿಂದ ದೂರ ಉಳಿದಿದೆ.

ಕೆಲವು ಸಮೀಕ್ಷೆಗಳು ಭಾರತದಲ್ಲಿ ಕರೋನಾ ಕೇಸ್ ಇನ್ನೂ ಹೆಚ್ಚಾಗಬಹುದು ಎಂದು ಸೂಚಿಸಿವೆ. ಜೊತೆಗೆ ಹಲವಾರು ಫಲಿತಾಂಶಗಳು ಇನ್ನೂ ಕೂಡ ಸಾರ್ವಜನಿಕವಾಗಿ ಪ್ರಕಟವಾಗಿಲ್ಲ. ದಿ ವೈರ್ ಸೈನ್ಸ್ ನಡೆಸಿರುವ ತನಿಖೆಯ ಪ್ರಕಾರ ದೇಶಾದ್ಯಂತ ಸಾವಿನ ಪ್ರಮಾಣ ಹೆಚ್ಚಾಗಿರುವುದಕ್ಕೆ ಸಾಕ್ಷಿಗಳು ಪತ್ತೆಯಾಗಿವೆ. ಜಾಗತಿಕ ಮಟ್ಟದಲ್ಲಿ ಕೇಂದ್ರ ಸರ್ಕಾರವು ವರದಿ ಕೊಡುತ್ತಿರುವ ಮಟ್ಟದಲ್ಲಿ ಸಾವಿನ ಪ್ರಮಾಣದ ಸರಾಸರಿ ಹೊಂದಿಕೆಯಾಗುವುದಿಲ್ಲ ಎಂದು ಸ್ವತಃ ವೈದ್ಯರೇ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದ್ದಾರೆ ಎಂದಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಭಾರತದಲ್ಲಿ COVID-19 ಕಾರಣದಿಂದಾಗಿ ಸುಮಾರು 1.5 ರಷ್ಟಿರುವ ಸಾವುಗಳ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂಬ ಬಗ್ಗೆ ತಜ್ಞರಲ್ಲಿ ಅನುಮಾನವಿದೆ. ಹಾಗೆಯೇ ಸಾರ್ವಜನಿಕ ಆರೋಗ್ಯ ರಕ್ಷಣೆಯಲ್ಲಿ ಪರೀಕ್ಷೆ ಹಾಗೂ ಕ್ವಾರೈಂಟೈನ್‌ ವ್ಯವಸ್ಥೆಯಲ್ಲಿನ ಅವ್ಯವಸ್ಥೆ ಬಗ್ಗೆ ಆರೋಗ್ಯ ತಜ್ಞರು ಮತ್ತು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಸಹ ಒಪ್ಪಿಕೊಂಡಿದ್ದು, ಕರೋನಾ ವೈರಸ್ ಹೊಂದಿದ್ದ ಪ್ರತಿಯೊಬ್ಬರನ್ನು ಕ್ಯಾರಂಟೈನ್‌ ಮಾಡಲು ಸಾಧ್ಯವಾಗ್ತಿಲ್ಲ ಎಂದಿದ್ದಾರೆ. ಭಾರತದಲ್ಲಿ ನಿಜವಾದ ಕೇಸ್‌ಗಳ ಸಂಖ್ಯೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಸಾಂಕ್ರಾಮಿಕ ರೋಗ ಅಂತ್ಯವಾಗುವ ಹೊತ್ತಿಗೆ ಸುಮಾರು 400 ಮಿಲಿಯನ್ ಅಂದರೆ, ಬರೋಬ್ಬರಿ 40 ಕೋಟಿ ಜನರಿಗೆ ಸೋಂಕು ಬರಬಹುದು ಎಂದು ಡಾ. ಟಿ. ಜಾಕೋಬ್ ಜಾನ್ ಮೇನಲ್ಲಿ ದಿ ವೈರ್‌ಗೆ ತಿಳಿಸಿದ್ದರು.

ಆಗಸ್ಟ್ 5 ರಂದು, ದಿ ಹಿಂದೂ ಪತ್ರಿಕೆ ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಮಾಹಿತಿ ಉಲ್ಲೇಖಿಸಿ ಈ ರೀತಿ ವರದಿ ಮಾಡಿತ್ತು. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಅತಿ ಹೆಚ್ಚು 51,706 ಜನರು ಗುಣಮುಖ ಆಗಿದ್ದಾರೆ ಎಂದಿತ್ತು. ಅದಾದ ಬಳಿಕ ಆಗಸ್ಟ್ 7ರ ಬೆಳಗ್ಗೆಯ ಮಾಹಿತಿಯಂತೆ ಕಳೆದ 24 ಗಂಟೆಗಳಲ್ಲಿ 62,538 ಹೊಸ ಕರೋನಾ ಪ್ರಕರಣಗಳು ಪತ್ತೆಯಾಗಿವೆ ಹಾಗೂ 49,769 ಜನರು ಸೋಂಕಿನಿಂದ ಗುಣಮುಖ ಆಗಿದ್ದಾರೆ ಎನ್ನುವ ಮಾಹಿತಿ ನೀಡಿತ್ತು. ಆದರೂ ಕೇಂದ್ರ ಸರ್ಕಾರ ಇಲ್ಲೀವರೆಗೂ ಕರೋನಾ ಸೋಂಕು ಸಮುದಾಯಕ್ಕೆ ಹಬ್ಬಿದೆ ಎನ್ನುವ ಮಾತನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿದೆ. ಆರೋಗ್ಯ ತಜ್ಞ ಹಾಗೂ ಮಾಜಿ ಐಸಿಎಂಆರ್ ಮುಖ್ಯ ವಿಜ್ಞಾನಿ ರಾಮನ್ ಆರ್. ಗಂಗಖೇಡ್ಕರ್, ಮುಂಬೈ ಮತ್ತು ದೆಹಲಿ ಸೇರಿದಂತೆ ದೇಶದ ಕೆಲವು ರಾಜ್ಯಗಳಲ್ಲಿ ಸಮುದಾಯಕ್ಕೆ ಕರೋನಾ ಸೋಂಕು ಹರಡಿದೆ ಎಂದು ಒಪ್ಪಿಕೊಳ್ಳುತ್ತಾರೆ.

ಸಾಂಕ್ರಾಮಿಕ ರೋಗವು ಇಳಿಕೆಯಾಗಲು ಪ್ರಾರಂಭಿಸಿದಾಗ ಸೋಂಕು ಉಲ್ಬಣಗೊಳ್ಳುವ ನಿರೀಕ್ಷೆಯಿದೆ. ಈ ಮಧ್ಯೆ, ವಿಜ್ಞಾನಿಗಳು ಮತ್ತು ಔಷಧಿ ತಯಾರಕರು COVID-19 ಕಾರಣದಿಂದಾಗಿ ಹೆಚ್ಚಿನ ಸಾವಿನ ಅಪಾಯದಲ್ಲಿರುವ ರೋಗಿಗಳಲ್ಲಿ ಮರಣ ಪ್ರಮಾಣವನ್ನು ಕಡಿತಗೊಳಿಸುವ ಔಷಧಿಯನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ ಮತ್ತು ಸೋಂಕಿಗೆ ಒಳಗಾಗದ ಜನರನ್ನು ಮೊದಲಿಗೆ ಸೋಂಕಿನಿಂದ ರಕ್ಷಿಸುವಂತಹ ಲಸಿಕೆಯನ್ನು ಪತ್ತೆ ಮಾಡಲು ಹರಸಾಹಸ ಮಾಡುತ್ತಿದ್ದಾರೆ.

ಅನೇಕ ಪ್ರಯತ್ನಗಳ ಮೇಲೆ ಅನುಮಾನ ಮೂಡುವಂತೆ ಮಾಡಿದೆ. ಐಸಿಎಂಆರ್‌ ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಲಸಿಕೆಗಳನ್ನು ಆದಷ್ಟು ಶೀಘ್ರವಾಗಿ ಪ್ರಯೋಗ ಮುಗಿಸವಂತೆ ಒತ್ತಡ ಹೇರುತ್ತಿದೆ. ಬಯೋಕಾನ್‌ನ ಔಷಧಿಗಾಗಿ ಮೂರನೇ ಹಂತದ ಪ್ರಯೋಗಗಳನ್ನೇ ಬಿಟ್ಟುಬಿಡುವಂತೆ ಭಾರರತೀಯ ಔಷಧಿ ನಿಯಂತ್ರಣ ಮಂಡಳಿ ನಿರ್ಧಾರ ಮಾಡಿದೆ.

ಭಾರತದಲ್ಲಿ 20 ಲಕ್ಷ ಜನರಿಗೆ ಸೋಂಕಿನ ತುತ್ತಾಗಿರುವ ಬಗ್ಗೆ ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿವೆ. ಆದರೂ, ಸರ್ಕಾರ ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವ ಕಾರಣ ಭಾರತದಲ್ಲಿ COVID-19 ಪರಿಸ್ಥಿತಿಯನ್ನು ನಿಯಂತ್ರಿಸಲು ಸಹಾಯ ಮಾಡಿದೆ ಎಂದು ಹೇಳಿಕೊಳ್ಳುತ್ತಿದೆ.

ಕಳೆದ ವಾರ, ಪ್ರಧಾನಿ ನರೇಂದ್ರ ಮೋದಿ, ತಮ್ಮ ನಿರ್ಧಾರಗಳು ಭಾರತವನ್ನು ಸಾಂಕ್ರಾಮಿಕ ರೋಗದಿಂದ ಉಳಿಸಿದವು ಮತ್ತು ಅನೇಕ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಭಾರತ ಉತ್ತಮವಾಗಿದೆ ಎಂದು ಮತ್ತೊಮ್ಮೆ ಹೇಳಿದ್ದರು. ಆದರೂ ತಜ್ಞರು ಈ ಹಕ್ಕನ್ನು ಕೇವಲ ವೈಜ್ಞಾನಿಕ ಪುರಾವೆಗಳಿಂದ ಬೆಂಬಲಿಸುವುದಿಲ್ಲ ಎಂದು ಸಾಬೀತುಪಡಿಸಿದ್ದಾರೆ .

ಕಳೆದ ಕೆಲವು ವಾರಗಳಲ್ಲಿ, ಕೇಂದ್ರ ಸರ್ಕಾರದ ಗಮನವು ರಾಜಕೀಯವಾಗಿ ಧ್ರುವೀಕರಿಸುವ ವಿಷಯಗಳ ಮೇಲೆ ಹರಿದಿದೆ. ಉದಾಹರಣೆಗೆ ರಾಮ್ ಜನ್ಮಭೂಮಿ ಭೂಮಿ ಪೂಜಾ ಸಮಾರಂಭ. ಸಾಮಾನ್ಯ ಸ್ಥಿತಿಯನ್ನು ಯಾವಾಗ ತಲುಪುತ್ತೇವೆ ಎಂಬ ಭಯ ಭಾರತೀಯ ಜನರ ಮನಸ್ಸಿನಲ್ಲಿ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭಾರತ 20 ಲಕ್ಷ ಕರೊನಾ ಸೋಂಕಿತ ಪ್ರಕರಣಗಳನ್ನು ದಾಟಿದ ಕೆಲವೇ ಗಂಟೆಗಳಲ್ಲಿ ತಮ್ಮ ಟೈಮ್‌ಲೈನ್‌ನಲ್ಲಿ ಹಳೆಯ ಟ್ವೀಟ್ ಹಂಚಿಕೊಂಡಿದ್ದಾರೆ.

"ಬೀಸ್ ಲಾಕ್‌ ಕಾ ಆಂಕ್ರಾ ಪಾರ್... ಗಯಾಬ್ ಹೈ ಮೋದಿ ಸರ್ಕಾರ್ ( ಸೋಂಕು 20 ಲಕ್ಷ ದಾಟಿದೆ, ಮೋದಿ ಸರ್ಕಾರ ಕಾಣೆಯಾಗಿದೆ)" ಎಂದು ಹಿಂದಿನ ದಿನಗಳಲ್ಲಿ ಟೀಕಿಸಿದ್ದ ಟ್ವೀಟ್‌ ಅನ್ನೇ ರಿಟ್ವೀಟ್ ಮಾಡುವಾಗ ಆಗಸ್ಟ್ 10 ರೊಳಗೆ ಭಾರತವು ಇನ್ನೂ ಹತ್ತು ಲಕ್ಷ ಪ್ರಕರಣಗಳನ್ನು ದಾಖಲಿಸಲಿದೆ ಎಂದು ಹೇಳಿದರು.

ಕರೋನಾ ಸೋಂಕು ಇದೇ ವೇಗದಲ್ಲಿ ಹರಡುತ್ತಿದ್ದರೆ, ಆಗಸ್ಟ್ 10 ರೊಳಗೆ ನಾವು ಶೀಘ್ರದಲ್ಲೇ 20,00,000 ಲಕ್ಷ ಗಡಿ ದಾಟುತ್ತೇವೆ. ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಸರ್ಕಾರ ವಿವೇಕಯುತವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ”ಎಂದು ಜುಲೈ 17 ರಂದು ಹಾಕಿದ್ದ ಟ್ವೀಟ್ ಪೋಸ್ಟ್‌ನಲ್ಲಿ ಆಗ್ರಹಿಸಿದ್ದಾರೆ. ಈ ಮೂಲಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಪರೋಕ್ಷವಾಗಿ ದಾಳಿ ಮಾಡಿದ್ದಾರೆ

COVID-19 ಪ್ರಕರಣಗಳ ದೈನಂದಿನ ಏರಿಕೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯನ್ನು ಗುರಿಯಾಗಿಸುವಲ್ಲಿ ರಾಹುಲ್‌ ಗಾಂಧಿ ಕಾತುರರಾಗಿದ್ದಾರೆ. ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಮತ್ತು ರಾಷ್ಟ್ರೀಯ ಆರ್ಥಿಕತೆಯ ಎಂಜಿನ್‌ಗಳನ್ನು ಪುನರಾರಂಭಿಸಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುವ ಬದಲು ಇತರ ವಿಷಯಗಳ ಬಗ್ಗೆ ರಾಜಕೀಯ ಮಾಡಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.

ದಿ ವೈರ್‌ನೊಂದಿಗೆ ಮಾತನಾಡಿದ ರಾಜ್ಯಸಭಾ ಸಂಸದ ಮತ್ತು ರಾಷ್ಟ್ರೀಯ ಜನತಾದಳದ ಮುಖಂಡ ಮನೋಜ್ ಕುಮಾರ್ ಝಾ, ಸಾಂಕ್ರಾಮಿಕ ರೋಗದ ಬಗ್ಗೆ ಕೇಂದ್ರ ಸರ್ಕಾರ ಮೌನವಾಗಿರುವ ರೀತಿ ಆತಂಕಕಾರಿ ಎಂದು ಹೇಳಿದರು. ಕರೋನಾ ವೈರಸ್ ಮುಂದೆ ನಮಗೆ ಅಪ್ರಸ್ತುತವಾಗುತ್ತದೆ. ಹೆಚ್ಚುತ್ತಿರುವ ಪ್ರಕರಣಗಳನ್ನು ಹೇಗೆ ನಿಭಾಯಿಸುವುದು ಎಂಬುದನ್ನು ಹೊರತುಪಡಿಸಿ ಸರ್ಕಾರ ಎಲ್ಲದರ ಬಗ್ಗೆ ಮಾತನಾಡುತ್ತಿದೆ. ಮೌನ ಎದ್ದು ಕಾಣುತ್ತದೆ. ಇದು ದುಃಖದ ವಿಚಾರ. ನಮ್ಮ ದ್ವಿಗುಣಗೊಳಿಸುವ ದರವು ವಿಶ್ವದಲ್ಲೇ ಅತಿ ಹೆಚ್ಚು, ಆದರೆ ಈ ವಿಷಯದ ಬಗ್ಗೆ ಸರ್ಕಾರಕ್ಕೆ ಯಾವುದೇ ಸ್ಪಷ್ಟತೆ ಇಲ್ಲ ಎನ್ನುವುದು ಗೊತ್ತಾಗಿದೆ ಎಂದು ಟೀಕಿಸಿದ್ದಾರೆ.

ಬಿಹಾರದಲ್ಲಿ ಕರೋನಾದಿಂದ ಹದಗೆಡುತ್ತಿರುವ ಪರಿಸ್ಥಿತಿಯನ್ನು ಗಮನಸೆಳೆದಿದ್ದು, ಕರೋನಾ ಕೆಟ್ಟ ಸ್ಥಿತಿಗೆ ಒಂದು ನಿದರ್ಶನವೆಂದರೆ ಬಿಹಾರ ಎಂದಿದ್ದಾರೆ. ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ಸಾಮರ್ಥ್ಯ ರಾಜ್ಯಕ್ಕೆ ಇನ್ನೂ ಬಂದಿಲ್ಲ. ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಪ್ರಧಾನಿ ಮೋದಿ ಇಬ್ಬರೂ ಇದನ್ನು ಹೊರತುಪಡಿಸಿ ಉಳಿದ ಎಲ್ಲ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ನೀವು ಸೋಂಕಿಗೆ ಒಳಗಾಗಿದ್ದರೆ ಅದು ನಿಮಗೆ ಬಿಟ್ಟ ವಿಚಾರ ಎನ್ನುವುದನ್ನು ಸರ್ಕಾರ ಪರೋಕ್ಷವಾಗಿ ಹೇಳುತ್ತಿದೆ ಎಂದು ಟೀಕಿಸಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com