EIA2020 ಕಾನೂನು ಭಾರತಕ್ಕೆ ಹೇಗೆ ಹಾನಿಯಾಗಬಲ್ಲದು?
ರಾಷ್ಟ್ರೀಯ

EIA2020 ಕಾನೂನು ಭಾರತಕ್ಕೆ ಹೇಗೆ ಹಾನಿಯಾಗಬಲ್ಲದು?

ಸರ್ಕಾರಕ್ಕೆ ಯಾವುದಾದರೂ ಒಂದು ಯೋಜನೆಯನ್ನು ಗುಪ್ತವಾಗಿಡಬೇಕು ಎಂದನಿಸಿದರೆ ಅದರ ವಿವರಗಳನ್ನು ಸರ್ಕಾರ ಸಾರ್ವಜನಿಕರಿಗೆ ನೀಡುವುದಿಲ್ಲ. ಅದರಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ತೆಗೆದುಕೊಳ್ಳುವುದಿಲ್ಲ. ಸರ್ಕಾರ ತನ್ನ ಕಡೆಯಿಂದ ಯಾವುದೇ ಒಂದು ಯೋಜನೆಯನ್ನು ʼಗುಪ್ತʼ ಎಂದು ಮೊಹರು ಲಗತ್ತಿಸಿ ಜನರಿಂದ ದೂರವಿಡಬಹುದು.

ಪ್ರತಿಧ್ವನಿ ವರದಿ

ಭೋಪಾಲ್' ಯೂನಿಯನ್ ಕಾರ್ಬೈಡ್ ಕಂಪೆನಿ' ಕೀಟನಾಶಕ ಘಟಕದಲ್ಲಿ ಅನಿಲ ಸೋರಿಕೆ. ಅಸ್ಸಾಂನ 'ತೈಲ' ಬಾವಿ ಯಲ್ಲಿ ಬೆಂಕಿ. 'ವಿಶಾಖಪಟ್ಟಣದ' ಕೆಮಿಕಲ್ ಪ್ಯಾಕ್ಟರಿಯಲ್ಲಿ ಗ್ಯಾಸ್ ಲೀಕ್. ಇಂತಹ ಅವಘಡಗಳಿಂದ ಎಷ್ಟು ಜನರ ಪ್ರಾಣ ಹಾನಿಯಾಯಿತು.! ಪ್ರತ್ಯಕ್ಷ, ಪರೋಕ್ಷವಾಗಿ ಇದರ ದುಷ್ಪರಿಣಾಮಕ್ಕೆ ಎಷ್ಟು ಜನ ಒಳಗಾದರು ಎಷ್ಟು ಜನ ಬಲಿಯಾದರು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ?

ನಾಳೆ ನಿಮ್ಮ ಮನೆಯ ಬಳಿ ಇಂತಹ ದುರ್ಘಟನೆ ನಡೆಯುವುದನ್ನು ನೀವು ಊಹಿಸುತ್ತಿರಾ?. ನಿಮ್ಮ ಗ್ರಾಮದಲ್ಲಿ ಇಂತಹ ಘಟನೆ ಅಗಲಿ ಎಂದು ಬಯಸುತ್ತೀರಾ? ಖಂಡಿತಾ ಬಯಸುವುದಿಲ್ಲ.

1984ರ ಭೋಪಾಲ್ ಅನಿಲ ದುರಂತದ ನಂತರ ಭಾರತ ಸರ್ಕಾರಕ್ಕೆ ಒಂದು ವಿಷಯ ಮನವರಿಕೆಯಾಯಿತು. ಪರಿಸರದ ಬಗ್ಗೆ ಏನು ಕಾನೂನು ಇದೆಯೋ ಅದು ಸರಿಯಾಗಿಲ್ಲ ಎಂದು‌!. ಭವಿಷ್ಯದಲ್ಲಿ ಇಂತಹ ದುರಂತಗಳನ್ನು ತಡೆಯ ಬೇಕಾದರೆ, ನಮಗೆ ಇನ್ನೂ ಶಕ್ತಿಯುತವಾದ ಕಾನೂನು ಅನುಷ್ಠಾನದ ಅವಶ್ಯಕತೆ ಇದೆ ಎಂದು.

ಇದಕ್ಕಾಗಿ 1986ರಲ್ಲಿ ಭಾರತ ಸರ್ಕಾರವೂ ಪರಿಸರ ರಕ್ಷಣಾ ಕಾನೂನು ಅನ್ನು ತೆಗೆದುಕೊಂಡು ಬಂತು. ಈ ಕಾನೂನಿನ ಒಳಗೆ ಒಂದು ಹೊಸ ಪ್ರಕ್ರಿಯೆ ಇತ್ತು ಅದು Environment Impact Assessment (ಪರಿಸರ ದುಷ್ಪರಿಣಾಮದ ಮೌಲ್ಯ ಮಾಪನ) ಈ ಪ್ರಕ್ರಿಯೆಯು ಭಾರತದಲ್ಲಿನ ಎಲ್ಲಾ ಯೋಜನೆಗಳಿಗೆ ಅನ್ವಯಿಸುತ್ತದೆ. ರಿಯಲ್ ಎಸ್ಟೇಟ್, ಮೂಲ ಸೌಕರ್ಯ ಯೋಜನೆ, ಅಣೆಕಟ್ಟು ಕಟ್ಟುವುದು, ಹೆದ್ದಾರಿಗಳ ನಿರ್ಮಾಣ, ಕಲ್ಲಿದ್ದಲು ಗಣಿಗಾರಿಕೆ, ರಾಸಾಯನಿಕ ಘಟಕಗಳ ನಿರ್ಮಾಣ, ಇವೆಲ್ಲದಕ್ಕೂ ಅನ್ವಯಿಸುತ್ತದೆ.

ಈ ಪ್ರಕ್ರಿಯೆ, ಒಂದು ಯೋಜನೆಯನ್ನು ಮಾಡುವಾಗ ಅದರಿಂದ ಪರಿಸರದ ಮೇಲೆ ಏನು ಪರಿಣಾಮ ಬೀರುತ್ತದೆ ಎಂದು ನೋಡುತ್ತದೆ.

ಉದಾಹರಣೆಗೆ ನಾವು ಕಲ್ಲಿದ್ದಲು ಗಣಿಗಾರಿಕೆ ಮಾಡಲು ಹೊರಟರೆ, ಎಷ್ಟು ಕಾಡು ಕಡಿಯಲಾಗುತ್ತದೆ. ಅಲ್ಲಿ ನೆಲೆಸಿರುವ ಸುತ್ತಮುತ್ತಲಿನ ಜನರ ಮೇಲೆ ಏನು ಪರಿಣಾಮ ಬೀರಬಹುದು.!? ಅದರಿಂದ ಎಷ್ಟು ಜನರ ಉದ್ಯೋಗ ನಷ್ಟವಾಗಬಹುದು, ನಮಗೆ ಇದರ ಧನಾತ್ಮಕ ಪರಿಣಾಮ ಎಷ್ಟಾಗುತ್ತದೆ. ಮತ್ತು ಋಣಾತ್ಮಕ ಪರಿಣಾಮ ಎಷ್ಟಾಗುತ್ತದೆ ಎಂದು ನೋಡಬೇಕು. ಋಣಾತ್ಮಕ ಪರಿಣಾಮವನ್ನು ಅತ್ಯಂತ ಕಡಿಮೆ ಮಾಡಲು ಪ್ರಯತ್ನ ಮಾಡಬೇಕು. ಪರಿಸರ ಸಚಿವಾಲಯಕ್ಕೆ ಈ ಯೋಜನೆಯಿಂದ ಋಣಾತ್ಮಕ ಪರಿಣಾಮ ಹೆಚ್ಚಾಗುತ್ತಿದೆ ಎಂದು ಅನಿಸಿದರೆ ಅಂತಹ ಯೋಜನೆಗಳಿಗೆ 'ಕ್ಲಿಯರೆನ್ಸ್' ಕೊಡಬಾರದು.

ಇದಕ್ಕಾಗಿ ಪರಿಸರ ಸುರಕ್ಷತಾ ಅನುಮತಿ ನಿರಾಕರಿಸಬೇಕು. ಹಾಗಾಗಿ ಇಂತಹ ಯೋಜನೆಗಳಿಗೆ EIA ಆಧಾರದಲ್ಲಿ ಅನುಮತಿ ನೀಡಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳ ಒಂದು ಪಕ್ಷಿನೋಟವನ್ನು ವಿವರಿಸುತ್ತೇವೆ.

ಇಂತಹ ಜಾಗದಲ್ಲಿ ಒಂದು ಕಲ್ಲಿದ್ದಲು ಗಣಿ ಮಾಡಬೇಕು ಎಂದು ಮೊದಲು ಸ್ಥಳದ ಅಯ್ಕೆ ಮಾಡಲಾಗುತ್ತದೆ. ಅದರ ನಂತರ environment impact assessment ಮಾಡಲಾಗುತ್ತದೆ. ನಂತರ ಸುತ್ತಮುತ್ತಲಿನ ಜನರ ಅಭಿಪ್ರಾಯ ಕೇಳಲಾಗುತ್ತದೆ. ನಂತರ ಪರಿಸರ ಮೌಲ್ಯಮಾಪನ ಸಮಿತಿಗೆ ಕೊಡಲಾಗುತ್ತದೆ. ಇದು ಒಂದು ತಜ್ಞರು ಮತ್ತು ವಿಜ್ಞಾನಿಗಳ ಸಮಿತಿಯಾಗಿರುತ್ತದೆ. ಅವರು ತೀರ್ಮಾನ ಮಾಡುತ್ತಾರೆ. ಇಲ್ಲಿ ಗಣಿ ನಿರ್ಮಾಣ ಮಾಡುವುದು ಸರಿಯೋ? ತಪ್ಪೋ! ಎಂದು. ಇದರಿಂದ ಪರಿಸರದ ಮೇಲೆ ತುಂಬಾ ಋಣಾತ್ಮಕ ಪರಿಣಾಮ ಬೀರುತ್ತಿದೆ ಎಂದರೆ. ಅದಕ್ಕೆ ಪರಿಹಾರವಾಗಿ ಏನು? ಮಾಡಬಹುದು.ಇದನ್ನು ಸರಿದೂಗಿಸಲು ಅಲ್ಲಿನ ಸ್ಥಳೀಯ ಜನರಿಗೆ ನೌಕರಿ ಕೊಡುವುದು. ಅರಣ್ಯನಾಶವನ್ನು ಸರಿದೂಗಿಸಲು ಬೇರೊಂದು ಕಡೆ ಗಿಡನೆಟ್ಟು ಕಾಡು ಬೆಳೆಸುವುದು.ಇದನ್ನೆಲ್ಲಾ ಸಮಿತಿ ನಿರ್ಧಾರ ಮಾಡುತ್ತದೆ. ಮತ್ತು ಅದರ ನಂತರ ಇದನ್ನು ಒಪ್ಪಿಕೊಳ್ಳಲಾಗುತ್ತದೆ. ಮತ್ತು ಇದರ ನಂತರ ಪರಿಸರ ಸಚಿವಾಲಯದಿಂದ ಅನುಮತಿ ನೀಡಲಾಗುತ್ತದೆ.

ಹೇಳುವುದಕ್ಕೆ ಇದು ತುಂಬಾ ಒಳ್ಳೆಯದು, ಚೆನ್ನಾಗಿದೆ ಅನಿಸುತ್ತದೆ ಅದರೆ ನೈಜವಾಗಿ ಇದರ ಅನುಷ್ಠಾನ ಅಷ್ಟೊಂದು ಪರಿಣಾಮಕಾರಿಯಾಗಿಲ್ಲಾ!. ಮತ್ತು ಈ ಕಾನೂನಿನಲ್ಲಿ ತುಂಬಾ ಕೊರತೆಗಳು ಇವೆ.? ಮತ್ತು ಇದರ ದುರುಪಯೋಗ ಕೂಡ ಮಾಡಲಾಗಿದೆ!.

ಅಂತಹ ಹಲವಾರು ಪ್ರಕರಣಗಳು ನಮಗೆ ನೋಡಲು ಸಿಗುತ್ತವೆ!. ಯಾರೋ ಒಬ್ಬ ಕಲ್ಲಿದ್ದಲು ಗಣಿ ಮಾಡುತ್ತಾನೆ, ವಿದ್ಯುತ್ ಘಟಕ ಮಾಡತ್ತಾನೆ, ಸ್ಥಳೀಯ ಜನರ ಅನುಮತಿ ಇಲ್ಲದೆಯೇ!!. ಉದಾಹರಣೆಗೆ 'ಛತ್ತೀಸ್ಗಢದ' ಪ್ರಕರಣ! ಸ್ಥಳೀಯರ ಅನುಮತಿ ಇಲ್ಲದೆಯೇ "ಇಂಡಿಯನ್ ಸ್ಟಿಲ್ ಎಂಡ್ ಪವರ್ ಲಿಮಿಟೆಡ್" ಘಟಕವನ್ನು ಸ್ಥಾಪನೆ ಮಾಡಲಾಯಿತು. ಇಂತಹ ಹಲವಾರು ಪ್ರಕರಣಗಳು ಕಾಣಲು ಸಿಗುತ್ತವೆ. ಕೆಲವು ಕಡೆ ಕಂಪನಿಯ ತನ್ನದೆ ಆಳುಗಳ ಮೂಲಕ ಸ್ಥಳೀಯ ಜನರನ್ನು ಹೆದರಿಸಿ ಭಯಪಡಿಸಿ ಎಷ್ಟೋ ಕಡೆ environment impact assessment ದಾಖಲೆಗಳನ್ನು ನಕಲಿ ಸೃಷ್ಟಿಸಲಾಗುತ್ತದೆ.

ಇಂತಹ ಕಾರಣಗಳಿಂದಲೇ ಗೆಳೆಯರೆ ವಿಶಾಖಪಟ್ಟಣಂನಲ್ಲಿ ಅದಂತಹ ಅನಿಲ ದುರಂತಗಳು ಆಗುತ್ತಿದೆ.! ಈ ವಿಶಾಖಪಟ್ಟಣದ ಕಾರ್ಖಾನೆಗೆ ಪರಿಸರ ಸುರಕ್ಷತಾ ಮೌಲ್ಯಮಾಪನದ ಅನುಮತಿಯೇ ದೊರಕಿರಲಿಲ್ಲ!. ಆದರೂ ಕಾರ್ಖಾನೆ ಕಾರ್ಯ ನಿರ್ವಹಿಸುತ್ತಿತ್ತು.

ಅಸ್ಸಾಂನ ತೈಲಬಾವಿಯಲ್ಲಿ ಬೆಂಕಿದುರಂತ ಕಾಣಿಸಿಕೊಂಡಿತು. ಅಲ್ಲಿ ಸ್ಥಳೀಯ ಜನತೆಯ ಅಭಿಪ್ರಾಯ ಅನುಮತಿಗಳನ್ನೇ ಪಡೆದಿರಲಿಲ್ಲ. ಮತ್ತು ಪರಿಸರ ಸುರಕ್ಷತೆಯ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿತ್ತು. ಆದರೂ ಕಾರ್ಯನಿರ್ವಹಿಸುತ್ತಿತ್ತು. ಇಲ್ಲಿ ಒಂದು ಸ್ಪಷ್ಟವಾಗಿದೆ. ಕಾನೂನು ಅನ್ನು ಸರಿಯಾಗಿ ಅನುಷ್ಠಾನ ಮಾಡಲಾಗುತ್ತಿಲ್ಲ. ಈ ಕಾರಣದಿಂದ ದುರಂತಗಳು ಪದೇ ಪದೇ ನಡೆಯುತ್ತಿವೆ.

ಕಾನೂನನ್ನು ಇನ್ನೂ ಬಲಿಷ್ಠಗೊಳಿಸಬೇಕು. ಇದರಲ್ಲಿ ಎರಡು ಮಾತಿಲ್ಲ, ಮತ್ತು ಅದರ ಜೊತೆಗೆ ಕಾನೂನಿನ ಅನುಷ್ಠಾನವನ್ನು ಕೂಡ ಇನ್ನೂ ಹೆಚ್ಚು ಪರಿಣಾಮ ಮಾಡಬೇಕು. ಅದರೆ ಇಲ್ಲಿ ಏನಾಗುತ್ತಿದೆಯೆಂದರೆ ಸರ್ಕಾರವು EIA ಯ ಒಂದು ಹೊಸ ಮಸೂದೆಯನ್ನು ಮಾಡ ಹೊರಟಿದೆ. ಅದು EIA2020.

ಈ ವರ್ಷ ಸರ್ಕಾರವು EIA ವಿಧಾನದಲ್ಲಿ ಕೆಲವೊಂದು ಬದಲಾವಣೆ ತರುತ್ತಿದ್ದೇವೆ ಎಂದು ಹೇಳಿತು. ಮಾರ್ಚ್ ತಿಂಗಳಿನಲ್ಲಿ ಸರ್ಕಾರವು 'ಎಂಬತ್ತು ಪುಟಗಳ' ಇದರ ಒಂದು ಕರಡನ್ನು ಬಿಡುಗಡೆಗೊಳಿಸುತ್ತದೆ. (ಇದು ಸರ್ಕಾರಿ ವೆಬ್‌ಸೈಟ್‌ ನಲ್ಲಿ ಲಭ್ಯವಿದೆ) ಸರ್ಕಾರವು ಏನೇನು ಬದಲಾವಣೆ ತರುತ್ತಿದೆ ಎಂದು ಇದರಲ್ಲಿ ಬರೆಯಲಾಗಿದೆ. ಪರಿಸರ ಸುರಕ್ಷತೆ ಮೌಲ್ಯಮಾಪನ ಬದಲಾವಣೆ ತಂದು ಉಪಾಯವಾಗಿ ಒಂದು ಕಾನೂನು ಮಾಡಲು ಹೊರಟಿದೆ.!

ನಮಗೆ ಅಂದರೆ ಜನತೆಗೆ ಹನ್ನೊಂದು ಅಗಸ್ಟ್ ವರೆಗೆ ಸಮಯ ನೀಡಲಾಗಿದೆ. ಇದರಲ್ಲಿ ಏನಾದರೂ ಬದಲಾವಣೆಯನ್ನು ನಾವು ಬಯಸುವುದಾದರೆ ಅಂತಹವರು eia2020-moefcc@gov.in ಇ-ಮೇಲ್ ವಿಳಾಸಕ್ಕೆ ತಮ್ಮ ಸಲಹೆಯನ್ನು ಮೇಲ್ ಮಾಡಬಹುದು.

ಇಲ್ಲಿ ಸಮಸ್ಯೆ ಏನೆಂದರೆ, ಈ ಹೊಸ ಕರಡಿನಲ್ಲಿ ಹಲವಾರು ಹೊಸ ಸಮಸ್ಯೆಗಳು ಇವೆ. ಇದು ಪರಿಸರ ರಕ್ಷಣೆಯ ಕಾನೂನು ಅನ್ನು ಹೆಚ್ಚು ಬಲಿಷ್ಠ ಗೊಳಿಸುವ ಬದಲು ಮೊದಲಿಗಿಂತ ಇನ್ನೂ ಹೆಚ್ಚು ದುರ್ಬಲ ಗೊಳಿಸುತ್ತಿದೆ.! ಏಕೆಂದರೆ ಎಷ್ಟೆಲ್ಲಾ ಕಾರ್ಖಾನೆಗಳು ಇದ್ದಾವೆಯೋ ಅವು ಇದನ್ನು ಸುಲಭವಾಗಿ ದಾಟುವಂತೆ ಮತ್ತು ಇವತ್ತು ಏನು ನಾವು ಅವಘಡಗಳನ್ನು ನೋಡುತ್ತಿದ್ದೆವೋ, ಭವಿಷ್ಯದಲ್ಲಿ ಇದು ಇನ್ನೂ ಹೆಚ್ಚಾಗಬಹುದು.! ಹೇಗೆ ಎಂದು ಒಂದೊಂದಾಗಿ ನೋಡೋಣ.

ಮೊದಲನೆಯ ಸಮಸ್ಯೆ ಏನೆಂದರೆ, post facto clearance ಎಂದರೆ ಯಾವುದಾದರೂ ಕಂಪೆನಿಯು ತನ್ನ ಕಾಮಗಾರಿ ಕೆಲಸ ಶುರುಮಾಡಿದೆ. ಆದರೆ ಅದಕ್ಕೆ ಪರಿಸರ ಸುರಕ್ಷತೆಯ ಪ್ರಮಾಣ ಪ್ರತಿ ಇದ್ದರೂ ಕೂಡ ಇಲ್ಲಿ ಕಂಪೆನಿಗೆ ಯಾವುದೇ ಸಮಸ್ಯೆ ಇಲ್ಲ.? ಯಾವುದೇ ಒಂದು ಯೋಜನೆ ಶುರುವಾಗಲೂ ಹೊರಡುತ್ತಿದೆ. ಯಾವುದೇ ಪರಿಸರದ ಸುರಕ್ಷತಾ ಪ್ರಮಾಣಪತ್ರ ಇಲ್ಲದೆಯೇ!?.. ಇದು ತುಂಬಾ ಭಯಾನಕ ಗೆಳೆಯರೆ, ಏಕೆಂದರೆ ನೀವು ವಿಶಾಖಪಟ್ಟಣದ ದುರಂತ ನೋಡಿದ್ದಿರಿ ಅಲ್ಲಿ ಕಂಪೆನಿಯು ಯಾವುದೇ ರೀತಿಯ ಪರಿಸರ ಸುರಕ್ಷತಾ ಪ್ರಮಾಣ ಪತ್ರ ಇಲ್ಲದೆಯೇ ಕೆಲಸ ಮಾಡುತ್ತಿತ್ತು.! ಆದರೆ ಅದು ಕಾನೂನು ಪ್ರಕಾರ ತಪ್ಪಾಗಿತ್ತು. ಅದರೆ ಸರ್ಕಾರದ ಈ ಹೊಸ ಕಾನೂನಿನ ಪ್ರಕಾರ ಅದು ಪೂರ್ಣ ಪ್ರಮಾಣದಲ್ಲಿ ಅಧಿಕೃತ ಎಂದಾಗುತ್ತದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಯೋಚಿಸಿ ನೋಡಿ, ಇಲ್ಲಿ ಕಾಡನ್ನು ಕಡಿದು ಕಲ್ಲಿದ್ದಲು ಗಣಿ ಮಾಡಲಾಗುತ್ತಿದೆ. ಆದರೆ ಸರ್ಕಾರ ಹೇಳುತ್ತಿದೆ ಇದರಿಂದ ಏನು ಸಮಸ್ಯೆ ಇಲ್ಲ ಗಣಿಗಾರಿಕೆ ನಡೆಯುತ್ತಿರಲಿ, ಪರಿಸರ ಸುರಕ್ಷತೆಯನ್ನು ಮತ್ತೆ ಯಾವಾಗಲಾದರು ಅರಾಮವಾಗಿ ಮಾಡಿಸಬಹುದು ಎಂದು. ಇದರ ಬಗ್ಗೆ ಸುಪ್ರೀಂ ಕೋರ್ಟ್ ಎಪ್ರಿಲ್ ತಿಂಗಳಿನಲ್ಲಿಯೆ ತನ್ನ ತೀರ್ಪು ಹೇಳಿತ್ತು . post facto clearance ಎಂಬುವುದು ತಪ್ಪು ಇಂತಹ ಕಾನೂನು ಮಾಡಬಾರದು ಎಂದು.

ಎರಡನೇ ಸಮಸ್ಯೆ ಏನೆಂದರೆ, ಮೊದಲು ಸಾರ್ವಜನಿಕರ ಅಭಿಪ್ರಾಯಕ್ಕೆ ಮೂವತ್ತು ದಿನ ಕೊಡಲಾಗುತ್ತಿತ್ತು. ಈಗ ಕೇವಲ ಇಪ್ಪತ್ತು ದಿನ ಕೊಡಲಾಗುತ್ತಿದೆ! ಇದನ್ನು ಸ್ಪಷ್ಟವಾಗಿ ಬರೆಯಲಾಗಿದೆ. ಪುಟ ಸಂಖ್ಯೆ 47ರಲ್ಲಿ ಪಾಯಿಂಟ್ 3.1 ಕೊನೆ ಸಾಲಿನಲ್ಲಿ "A minimum notice period of 20 days shall be provided to the public for furnishing their responses." ಮೂವತ್ತು ದಿನ ಕೂಡ ಈ ಇಪ್ಪತ್ತು ದಿನದಷ್ಟು ಕಡಿಮೆಯಾಗಿತ್ತು. ಅಂತಹದರಲ್ಲಿ, ಯೋಚಿಸಿನೋಡಿ ಒಂದು ಅಣೆಕಟ್ಟು ನಿರ್ಮಿಸಲು ಕನಿಷ್ಠ 7ರಿಂದ 8ವರ್ಷ ತಗುಲುತ್ತದೆ. ಇಂತಹ ವಿಷಯವನ್ನು ಸ್ಥಳೀಯ ಊರಿನ ಜನ ಕೇವಲ 20-30 ದಿನಗಳ ಸಮಯ ಕೊಡುತ್ತಾ ಇದ್ದಾರೆ? ಇಷ್ಟು ಕಡಿಮೆ ಸಮಯದಲ್ಲಿ ಜನರು ತಮ್ಮ ತೀರ್ಮಾನ ಗಳನ್ನು ತೆಗೆದುಕೊಳ್ಳಬಲ್ಲರೆ.? ತಮ್ಮ ಕರೆಯನ್ನು ಸರ್ಕಾರಕ್ಕೆ ಅಧಿಕಾರಿಗಳಿಗೆ ತಲುಪಿಸಲು ಸಾಧ್ಯವಿದೆಯಾ?. ಅದೂ ಇಷ್ಟು ಕಡಿಮೆ ಸಮಯದಲ್ಲಿ.

ಮೂರನೇ ಪ್ರಶ್ನೆ, ಒಂದು ವೇಳೆ ಯಾವುದಾದರೊಂದು ಯೋಜನೆ ಪರಿಸರ ಸುರಕ್ಷತೆಯ ಕಾನೂನು ಅನ್ನು ಉಲ್ಲಂಘಿಸುತ್ತಿದೆ ಎಂದಾದರೆ ಜನರ ಬಳಿ ಅದರ ವಿರುದ್ದ ಧ್ವನಿ ಎತ್ತಲು ಅಧಿಕಾರವಿಲ್ಲ. ಒಂದು, ಸ್ವತಃ ಉಲ್ಲಂಘಿಸಿದವರೆ ಹೌದು ತಾನು ಉಲ್ಲಂಘನೆ ಮಾಡಿರುವೆನೆಂದು ಘೋಷಣೆ ಮಾಡಬೇಕು. ಅಥವಾ ಸರ್ಕಾರ ಹೇಳಬೇಕು. ಉದಾಹರಣೆಗೆ ಕಾಡಿನ ಮಧ್ಯೆ ಎಲ್ಲಾ ಕಡಿದು ಅಥವಾ ನ್ಯಾಷನಲ್ ಪಾರ್ಕಿನ ಮಧ್ಯದಲ್ಲಿ ಒಂದು ಕಲ್ಲಿದ್ದಲಿನ ಗಣಿ ಮಾಡಲು ಹೊರಟಿದ್ದಾರೆ ಎಂದರೆ ಅದು ಸ್ಪಷ್ಟವಾಗಿ ಪರಿಸರ ಸುರಕ್ಷತೆಯ ಕಾನೂನಿನ ಸ್ಪಷ್ಟವಾದ ಉಲ್ಲಂಘನೆ. ಇದನ್ನು ಎಲ್ಲಾ ಜನರು ನೋಡುತ್ತಿದ್ದಾರೆ. ಆದರೆ ಜನರು ಇಲ್ಲಿ ನೋಡಬೇಕೆ ಹೊರತು ಏನು ಮಾಡುವಂತಿಲ್ಲ.! ಜನರಿಗೆ ಇದರ ವಿರುದ್ಧ ಧ್ವನಿ ಎತ್ತುವ ಹಕ್ಕು ಇರುವುದಿಲ್ಲ!. ಇಲ್ಲಿ ಕಾನೂನು ಉಲ್ಲಂಘನೆ ಮಾಡಿದವರು ಸ್ವತಃ ಹೇಳಬೇಕಷ್ಟೆ. ಪುಟ ಸಂಖ್ಯೆ 29 ಪಾಯಿಂಟ್ ನಂಬರ್ 22 ರಲ್ಲಿ ಹೇಳಲಾಗಿದೆ "The cognizance of the violation shall be made on the suo moto application of the project proponent". suo moto application ಎಂದರೆ ಯಾರು ಯೋಜನೆಯನ್ನು ಮಾಡುತ್ತಾ ಇದ್ದಾರೋ ಸ್ವತಃ ಅವರೇ ಇಲ್ಲಿ ತಾವು ಕಾನೂನಿನ ಉಲ್ಲಂಘನೆ ಮಾಡುತ್ತಿದ್ದೇವೆ ಎಂದು ಹೇಳಬೇಕು. ಅಥವಾ ಸರ್ಕಾರ ಹೇಳಬೇಕು. ಇದು ಒಂದು ಶುದ್ಧಕಾಲಹರಣ ಮಾತ್ರ ಎಂದು ಅನಿಸುತ್ತದೆ. ಏಕೆಂದರೆ ಕಳ್ಳತನ ಮಾಡುತ್ತೇನೆ ಎಂದು ಸ್ವತಃ ಕಳ್ಳನೇ ಹೇಳಬೇಕಾಗುತ್ತದೆ. ತಾನು ಇಲ್ಲಿ ಕಳ್ಳತನ ಮಾಡಿದ್ದೆನೆ ಎಂದು ಯಾರಾದರೂ ಹೇಳುತ್ತಾರೆಯೇ?.

ನಾಲ್ಕನೇ ಅಂಶ ಇಲ್ಲಿವರೆಗೆ ಏನಾಗುತ್ತಿತ್ತು ಎಂದರೆ, ಯಾವುದಾದರೂ ಒಂದು ಯೋಜನೆ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣೆಗೆ ಸಂಬಂಧಿಸಿದ್ದಾದರೆ ಅದನ್ನು ಗುಪ್ತವಾಗಿಡಲಾಗುತ್ತದೆ. ಇದು ಸರಿಯಾಗಿದೆಯೇ?. ಆದರೆ ಹೊಸ ಕಾಯಿದೆಯಲ್ಲಿ ಸರ್ಕಾರವು ಈ ಒಂದು ಹೊಸ ಅಂಶವನ್ನು ಸೇರಿಸಿದೆ.

ಪುಟ ಸಂಖ್ಯೆ 9 ಪಾಯಿಂಟ್ 7 "All projects concerning national defence and security or involving other strategic considerations as determined by the central government. ಇಲ್ಲಿ ಮೂರನೆಯ ಅಂಶ ಇದೆಯಲ್ಲ ಅದರಲ್ಲಿ ಸಮಸ್ಯೆ ಇರುವುದು. ಇಲ್ಲಿ ಸರ್ಕಾರ ಏನು ಹೇಳುತ್ತದೆ ಎಂದರೆ, ಸರ್ಕಾರಕ್ಕೆ ಯಾವುದಾದರೂ ಒಂದು ಯೋಜನೆಯನ್ನು ಗುಪ್ತವಾಗಿಡಬೇಕು ಅನಿಸಿದರೆ ಅದರ ವಿವರಗಳನ್ನು ಸರ್ಕಾರ ಸಾರ್ವಜನಿಕರಿಗೆ ನೀಡುವುದಿಲ್ಲ. ಅದರಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ತೆಗೆದುಕೊಳ್ಳುವುದಿಲ್ಲ.

ಅಂದರೇ ಸರ್ಕಾರ ತನ್ನ ಕಡೆಯಿಂದ ಯಾವುದೇ ಒಂದು ಯೋಜನೆಯನ್ನು ಗುಪ್ತ ಎಂದು ಮೊಹರು ಲಗತ್ತಿಸಿ ಜನರಿಂದ ದೂರವಿಡಬಹುದು. ನಾಳೆ ಸರ್ಕಾರ ಇಲ್ಲಿ ಲಾಲ್‌ಬಾಗ್ ಪಾರ್ಕ್ ನಲ್ಲಿ ಕಲ್ಲಿದ್ದಲು ಗಣಿ ಆರಂಭಿಸಿದರೆ ಜನರು ಏಕೆ ಎಂದು ಪ್ರಶ್ನೆ ಕೇಳಿದರೆ, ಸರ್ಕಾರ ಅದರ ಮೇಲೆ ಗುಪ್ತ ಯೋಜನೆ ಎಂಬ ಮೊಹರು ಹೊಡೆದು ಜನರಿಗೆ ಯಾವುದೇ ಮಾಹಿತಿ ನೀಡುವುದಿಲ್ಲಾ ಎನ್ನಬಹುದು. ಇಲ್ಲಿ ಪೂರ್ತಿ ನಿಯಂತ್ರಣ ಸರ್ಕಾರದ ಬಳಿ ಮಾತ್ರ ಇರುತ್ತದೆ. ಸರ್ಕಾರ ಬಯಸಿದರೆ ಏನು ಬೇಕಾದರೂ ಮಾಡಬಹುದು.

ಐದನೇ ಸಮಸ್ಯೆ ಸರ್ಕಾರ ಹಲವಾರು ಇಂತಹ ಯೋಜನೆಗಳನ್ನು ಗುರುತಿಸಿದೆ. ಅದನ್ನು ಸಾರ್ವಜನಿಕರು ಮೊದಲೇ ಪ್ರಶ್ನೆ ಮಾಡುವಂತಿಲ್ಲ!. ಉದಾಹರಣೆಗೆ ಪುಟ ಸಂಖ್ಯೆ 19 ಪಾಯಿಂಟ್ ನಂಬರ್ ಎರಡು, ಇಲ್ಲಿ A,B,C,D ಎಂದು ಪಾಯಿಂಟ್ ಬರೆಯಲಾಗಿದೆ. ಇದರಲ್ಲಿ ಯಾವ- ಯಾವುದರಲ್ಲಿ ಸಾರ್ವಜನಿಕರಿಗೆ ಪ್ರಶ್ನಿಸುವ ಹಕ್ಕು ಇರುವುದಿಲ್ಲ ಎಂದು ಬರೆಯಲಾಗಿದೆ ಅದರಲ್ಲಿ ಒಂದು ಪಾಯಿಂಟ್, F, in that includes all linear projects in border areas ಎಂದರೆ ಗಡಿ ಪ್ರದೇಶದಲ್ಲಿ ಯಾವುದೇ ಯೋಜನೆಗೆ ಜನರು ಧ್ವನಿ ಎತ್ತುವಂತೆ ಇಲ್ಲ.!

ಗಡಿ ಪ್ರದೇಶ ಎಂದರೇನು? ಎಂದು ಹುಡುಕ ಹೊರಟರೆ, ಪುಟ ಸಂಖ್ಯೆ 3 ರಲ್ಲಿ ಪಾಯಿಂಟ್‌ ನಂಬರ್ 6ರಲ್ಲಿ ಬರೆದಿದೆ.

ಗಡಿ ಪ್ರದೇಶ ಎಂದರೆ LOC ಯಿಂದ ನೂರು ಕಿಲೋಮೀಟರ್ ವೈಮಾನಿಕ ದೂರ ಎಂದು. ಅಂದರೆ ಈಶಾನ್ಯ ಭಾರತದ ಬಹುತೇಕ ಪೂರ್ತಿ ರಾಜ್ಯಗಳು ಈ ವ್ಯಾಪ್ತಿಗೆ ಬರುತ್ತವೆ. ಅಂದರೆ ಈಶಾನ್ಯ ಭಾರತದ ಯಾವುದೇ ರಾಜ್ಯದ ಜನರು ಯಾವುದೇ ಯೋಜನೆಯ ವಿರುದ್ಧ ಧ್ವನಿ ಎತ್ತುವಂತಿಲ್ಲ. ಇಲ್ಲಿ ನೀವು ಗಮನಿಸಬಹುದು. ಈಶಾನ್ಯ ಭಾರತ ಎಂಬುವುದು ಪ್ರಾಕೃತಿಕವಾಗಿ ಎಷ್ಟು ಸೂಕ್ಷ್ಮ ಪರಿಸರವನ್ನು ಹೊಂದಿದೆ ಎಂದು. ಬಹುತೇಕ ಭಾಗಗಳು ಕಾಡಿನಿಂದ ಕೂಡಿದೆ. ಇಂತಹ ಕಾಡುಗಳು ಈಗಿನ ಹೊಸ ಕಾನೂನಿನಿಂದ ನಾಶದ ಭಯವನ್ನು ಎದುರಿಸುವಂತಾಗಿದೆ. ಜನಗಳು ಈ ಕಾನೂನು ಬಂದರೆ, ಕಾಡುಗಳು ಕಡಿಯಲ್ಪಡುತ್ತದೆ. ಗಣಿಗಾರಿಕೆ ನಡೆಸಲಾಗುತ್ತದೆ. ರಾಸಾಯನಿಕ ಘಟಕಗಳನ್ನು ತೆರೆಯಲಾಗುತ್ತದೆ. ಜನರ ಅಭಿಪ್ರಾಯಗಳನ್ನು ಕೇಳದೆ ನಡೆಸುತ್ತದೆ.

ಅದರೆ ಕಾಲ ಮಿಂಚಿಲ್ಲ, ಇನ್ನೂ ಸಮಯವಿದೆ. ಸರ್ಕಾರ ಇನ್ನೂ ಇದನ್ನು ಅನುಷ್ಠಾನಕ್ಕೆ ತಂದಿಲ್ಲ. ತರುವ ಪ್ರಯತ್ನದಲ್ಲಿ ಇದೆ ಅಷ್ಟೇ. ನಮ್ಮ ಬಳಿ ಅಗಸ್ಟ್ 11 ವರೆಗೆ ಸಮಯವಿದೆ. ಸರ್ಕಾರದ ಮೇಲೆ ಒತ್ತಡ ತಂದು ಅಂತಿಮ ದಿನವನ್ನು ಮುಂದಕ್ಕೆ ಹಾಕಿರುವುದಕ್ಕೆ ಹೈಕೋರ್ಟ್ ಗೆ ಧನ್ಯವಾದ ಹೇಳಬೇಕು. ನಾವು ಈ ಸಮಯದಲ್ಲಿ ನಮ್ಮ ಅಭಿಪ್ರಾಯವನ್ನು ಸರ್ಕಾರಕ್ಕೆ ಕಳುಹಿಸಬಹುದು. ನಾವು ಏನು ಬದಲಾವಣೆ ಬಯಸುತ್ತೇವೆ ಎಂದು ಈ ಮೇಲ್ ವಿಳಾಸಕ್ಕೆ ಈ-ಮೇಲ್ ಮಾಡಬಹುದು. eia2020-moefcc@gov.in

ಕೊನೆಯಲ್ಲಿ ಒಂದು ಮಾತು, ಇದು ಒಂದು ಎರಡು ಜನರನ್ನು ಬಾಧಿಸುವಂತಹದಲ್ಲ ಅಥವಾ ಒಂದು ಪಕ್ಷಕ್ಕೆ ಮಾತ್ರ ಬರುವಂತಹದಲ್ಲ ಇದು ದೇಶದ ಪ್ರತಿಯೊಬ್ಬ ಪ್ರಜೆಗೂ ಕೂಡ ಬರುವಂತಹದು. ಇದರಿಂದ ಅವಘಡಗಳು ನಡೆಯುತ್ತದೆ. ನಾಳೆ ನಮ್ಮ ನಿಮ್ಮ ಮನೆ ಅಂಗಳದಲ್ಲಿ ಕೂಡ ದುರಂತ ನಡೆಯಬಹುದು. ಕಾಡು ಕಡಿಯಲ್ಪಟ್ಟರೆ ವಾಯು ಮಾಲಿನ್ಯ ಹೆಚ್ಚಾಗುತ್ತದೆ ಇದು ಪ್ರತಿಯೊಬ್ಬನ ಮೇಲೂ ಪರಿಣಾಮ ಬೀರಿಯೆ ಬೀರುತ್ತದೆ. ಇದಕ್ಕಾಗಿ ಪ್ರತಿಯೊಬ್ಬ ಪ್ರಜೆಯು ಇದರ ವಿರುದ್ಧ ಧ್ವನಿ ಎತ್ತುವುದು ಅವಶ್ಯಕವಾಗಿದೆ.

(Withdraw EIA Notification 2020 sign petition)

(LET INDIA BREATH)

ಹಿಂದಿ ಮೂಲ- ಧ್ರುವ್‌ ರಾಠಿ

ಕನ್ನಡಕ್ಕೆ- ಭರತ್‌ ಕುಕ್ಕುಜಡ್ಕ

Click here to follow us on Facebook , Twitter, YouTube, Telegram

Pratidhvani
www.pratidhvani.com