ಕೇರಳ: ಕರಿಪುರ್ ನಿಲ್ದಾಣದಲ್ಲಿ ರನ್‌ವೇಯಿಂದ ಜಾರಿದ ವಿಮಾನ
ರಾಷ್ಟ್ರೀಯ

ಕೇರಳ: ಕರಿಪುರ್ ನಿಲ್ದಾಣದಲ್ಲಿ ರನ್‌ವೇಯಿಂದ ಜಾರಿದ ವಿಮಾನ

ಶುಕ್ರವಾರ ರಾತ್ರಿ ಸುಮಾರು 7.40 ರ ವೇಳೆಗೆ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

ಪ್ರತಿಧ್ವನಿ ವರದಿ

ದುಬೈಯಿಂದ ಕ್ಯಾಲಿಕಟ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಏರ್‌ ಇಂಡಿಯಾ ವಿಮಾನ ಲ್ಯಾಂಡಿಂಗ್‌ ವೇಳೆ ಅಪಘಾತಕ್ಕೀಡಾಗಿದೆ. ಸುಮಾರು 190 ಕ್ಕೂ ಹೆಚ್ಚು ಪ್ರಯಾಣಿಕರಿದ್ದ ವಿಮಾನ ರನ್‌ವೇಯಿಂದ ಪಕ್ಕಕ್ಕೆ ಜಾರಿದೆ.

ಶುಕ್ರವಾರ ರಾತ್ರಿ ಸುಮಾರು 7.40 ರ ವೇಳೆಗೆ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ವಿಮಾನ ನಿಲ್ದಾಣದ ಸಮೀಪದ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ.

ಕ್ಯಾಲಿಕಟ್‌ ಜಿಲ್ಲೆಯಲ್ಲಿ ಭಾರೀ ಮಳೆಯ ಕಾರಣ ಈ ಅಪಘಾತ ಸಂಭವಿಸಿದೆಯೆಂದು ಅಧಿಕಾರಿಗಳು ಹೇಳಿದ್ದಾರೆ. ಸಾಮಾನ್ಯವಾಗಿ ಹವಾಮಾನ ವೈಪರೀತ್ಯ ಉಂಟಾದ ಸಂಧರ್ಭದಲ್ಲಿ ಕ್ಯಾಲಿಕಟ್‌ನ ಕರಿಪುರ್‌ ವಿಮಾನ ನಿಲ್ದಾಕ್ಕೆ ಬರುವ ವಿಮಾನಗಳನ್ನು ಸಮೀಪದ ನಿಲ್ದಾಣಗಳಲ್ಲಿ ಲ್ಯಾಂಡ್‌ ಮಾಡಲು ನಿರ್ದೇಶಿಸಲಾಗುತ್ತಿತ್ತು. ಆದರೆ ಇಂದು ಕರಿಪುರ್‌ ವಿಮಾನ ನಿಲ್ದಾಣದಲ್ಲಿಯೇ ವಿಮಾನ ಇಳಿದಿದೆ.

ವಂದೇ ಭಾರತ್‌ ಮಿಷನ್‌ ಅಡಿಯಲ್ಲಿ ದುಬೈಯಿಂದ ಬಂದಿದ್ದ IX344 ವಿಮಾನವೆಂದು ಹೇಳಲಾಗಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com