ಚೀನಾ ವಿರುದ್ಧ ಆಕ್ರೋಶ; IPL ಪ್ರಾಯೋಜಕತ್ವದಿಂದ ಹಿಂದ ಸರಿದ ವಿವೋ

ಚೀನಾ- ಭಾರತ ನಡುವಿನ ಸಂಘರ್ಷದಿಂದ ಚೀನಾ ಕಂಪೆನಿಗಳ ವಿರುದ್ಧ ಭಾರತದಲ್ಲಿ ಎದ್ದಿರುವ ಜನಾಕ್ರೋಶಕ್ಕೆ ಚೀನಾ ಮೂಲದ ವೀವೋ ಮೊಬೈಲ್‌ ಕಂಪೆನಿ ಈ ಹೆಜ್ಜೆ ಇಟ್ಟಿದೆ ಎಂದು ಹೇಳಲಾಗಿದೆ.
ಚೀನಾ ವಿರುದ್ಧ ಆಕ್ರೋಶ; IPL ಪ್ರಾಯೋಜಕತ್ವದಿಂದ ಹಿಂದ ಸರಿದ ವಿವೋ

ಐಪಿಎಲ್‌ನಲ್ಲಿ ಶೀರ್ಷಿಕೆ ಪ್ರಾಯೋಜಕತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದು ವೀವೋ ಈ ವರ್ಷ ನಡೆಯಲಿರುವ ಪಂದ್ಯಾಟದಲ್ಲಿ ಪ್ರಾಯೋಜಕತ್ವದಿಂದ ಹಿಂದೆ ಸರಿದಿದೆ. ಚೀನಾ- ಭಾರತ ನಡುವಿನ ಸಂಘರ್ಷದಿಂದ ಚೀನಾ ಕಂಪೆನಿಗಳ ವಿರುದ್ಧ ಭಾರತದಲ್ಲಿ ಎದ್ದಿರುವ ಜನಾಕ್ರೋಶಕ್ಕೆ ಚೀನಾ ಮೂಲದ ವೀವೋ ಮೊಬೈಲ್‌ ಕಂಪೆನಿ ಈ ಹೆಜ್ಜೆ ಇಟ್ಟಿದೆ ಎಂದು ಹೇಳಲಾಗಿದೆ.

ಕೊನೇ ಕ್ಷಣದಲ್ಲಿ ನಡೆದ ಈ ಬದಲಾವಣೆಗೆ ಬಿಸಿಸಿಐ ಹೊಸ ಪ್ರಾಯೋಜಕರನ್ನು ಕಂಡುಕೊಳ್ಳುವ ಅನಿವಾರ್ಯತೆ ಎದುರಾಗಿದೆ. 2017 ರಲ್ಲಿ 5 ವರ್ಷಗಳ ಕಾಲದ ಒಪ್ಪಂದಕ್ಕೆ ವಿವೋ- ಬಿಸಿಸಿಐ ಸಹಿ ಮಾಡಿತ್ತು. ಅದರಂತೆ 2017 ರಿಂದ 2022 ರವರೆಗೆ ಶೀರ್ಷಿಕೆ ಪ್ರಾಯೋಜಕತ್ವವನ್ನು ವೀವೋ ತನ್ನ ಮಡಿಲಿಗೆ ಇಳಿಸಿಕೊಂಡಿತ್ತು. ಭಾರತೀಯರಲ್ಲಿ ಎದ್ದಿರುವ ಆಕ್ರೋಶ ತಣ್ಣಗಾಗಲು ವೀವೋ ಈ ನಿಲುವು ತಾಳಿದೆ ಎನ್ನಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅದಾಗ್ಯೂ 2021 ರಿಂದ 2023 ರವರೆಗೆ ಐಪಿಎಲ್‌ ಪ್ರಾಯೋಜಕತ್ವ ವಹಿಸುವುದಾಗಿ ವಿವೋ ಹೇಳಿದೆ. ಅಲ್ಲದೆ ಮಾರುಕಟ್ಟೆಯಲ್ಲಿ ಈ ವರ್ಷ ಕಳಪೆ ವಹಿವಾಟು ನಡೆದಿರುವುದರಿಂದ ಈ ವರ್ಷದ 130 ಕೋಟಿ ರುಪಾಯಿಗಳನ್ನು ಕಡಿತಗೊಳಿಸುವುದಾಗಿ ಮೂಲಗಳು ತಿಳಿಸಿವೆ.

ಭಾರೀ ಮೊತ್ತದ ಹಣದ ಹೊಳೆ ಹರಿಯುವ ಐಪಿಎಲ್‌ ಸರಣಿಯಲ್ಲಿ ಚೀನಾದ ಹೂಡಿಕೆ ಇರುವ ಹಲವಾರು ಕಂಪೆನಿಗಳು ಪ್ರಾಯೋಜಕತ್ವವನ್ನು ಪಡೆದಿವೆ. ಹಲವಾರು ಫ್ರಾಂಚೈಸಿಗಳಿಗೆ ಚೀನಾ ಕಂಪೆನಿಗಳು ಸ್ಪಾನ್ಸರ್‌ ನೀಡುತ್ತಿದೆ.

ಭಾರತದಲ್ಲಿ ಕರೋನಾ ಸೋಂಕು ವಿಪರೀತವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಪ್ರಸಕ್ತ ವರ್ಷದ ಪಂದ್ಯಾಟವನ್ನು ಗಲ್ಫ್‌ ರಾಜ್ಯಗಳಲ್ಲಿ ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಸೆಪ್ಟಂಬರ್‌ ತಿಂಗಳಲ್ಲಿ ಪಂದ್ಯಾಟ ನಡೆಸಲು ನಿಗದಿಪಡಿಸಲಾಗಿದೆ.

ಚೀನಾ ವಿರುದ್ಧ ಆಕ್ರೋಶ; IPL ಪ್ರಾಯೋಜಕತ್ವದಿಂದ ಹಿಂದ ಸರಿದ ವಿವೋ
ಆ್ಯಪ್ ಬ್ಯಾನ್‌ಗಷ್ಟೇ ಸೀಮಿತವಾಯಿತೇ ಚೀನಾ ವಿರುದ್ದದ ಹೋರಾಟ?

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com