ಕಾಶ್ಮೀರ ಸೇರಿದಂತೆ ಗುಜರಾತ್‌ನ ಭಾಗವನ್ನೂ ತನ್ನ ನಕ್ಷೆಯಲ್ಲಿ ಸೇರಿಸಿಕೊಂಡ ಪಾಕಿಸ್ತಾನ
ರಾಷ್ಟ್ರೀಯ

ಕಾಶ್ಮೀರ ಸೇರಿದಂತೆ ಗುಜರಾತ್‌ನ ಭಾಗವನ್ನೂ ತನ್ನ ನಕ್ಷೆಯಲ್ಲಿ ಸೇರಿಸಿಕೊಂಡ ಪಾಕಿಸ್ತಾನ

ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಪಾಕಿಸ್ತಾನದ ಹೊಸ ನಕಾಶೆಯೊಂದು ಬಿಡುಗಡೆಗೊಳಿಸಿದ್ದು, ನಕಾಶೆಯಲ್ಲಿ ಸಂಪೂರ್ಣ ಕಾಶ್ಮೀರವನ್ನು ಹಾಗೂ ಗುಜರಾತ್‌ನ ಜುನಾಗಢ್‌ ಪ್ರಾಂತ್ಯವನ್ನು ತನ್ನದೆಂದು ಪ್ರತಿಪಾದಿಸಿದೆ

ಪ್ರತಿಧ್ವನಿ ವರದಿ

ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಪಾಕಿಸ್ತಾನದ ಹೊಸ ನಕಾಶೆಯೊಂದು ಬಿಡುಗಡೆಗೊಳಿಸಿದ್ದು, ನಕಾಶೆಯಲ್ಲಿ ಸಂಪೂರ್ಣ ಕಾಶ್ಮೀರವನ್ನು ಹಾಗೂ ಗುಜರಾತ್‌ನ ಜುನಾಗಢ್‌ ಪ್ರಾಂತ್ಯವನ್ನು ತನ್ನದೆಂದು ಪ್ರತಿಪಾದಿಸಿದೆ ಎಂದು ದಿ ಕ್ವಿಂಟ್‌ ವರದಿ ಮಾಡಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸಾಂವಿಧಾನಿಕ ಸ್ಥಾನಮಾನ ನೀಡಿದ್ದ 370 ನೇ ವಿಧಿಯನ್ನು ರದ್ದುಪಡಿಸಿದ ಮೊದಲ ವಾರ್ಷಿಕೋತ್ಸವದ ಒಂದು ದಿನ ಮುಂಚಿತವಾಗಿ(ಆಗಸ್ಟ್‌ 4), ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಇಡೀ ಕಾಶ್ಮೀರ ಮತ್ತು ಗುಜರಾತಿನ ಜುನಾಗಢ್ ಅನ್ನು ಒಳಗೊಂಡಿರುವ ಪಾಕಿಸ್ತಾನದ ಹೊಸ ನಕ್ಷೆಯನ್ನು ಅನಾವರಣಗೊಳಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

“ಇಂದು, ನಾವು ಪಾಕಿಸ್ತಾನದ ಹೊಸ ನಕ್ಷೆಯನ್ನು ಜಗತ್ತಿಗೆ ಪರಿಚಯಿಸುತ್ತಿದ್ದೇವೆ. ಈ ಹೊಸ ನಕ್ಷೆಯನ್ನು ಪಾಕಿಸ್ತಾನದ ಕ್ಯಾಬಿನೆಟ್, ಪ್ರತಿಪಕ್ಷ ಮತ್ತು ಕಾಶ್ಮೀರಿ ನಾಯಕತ್ವ ಅನುಮೋದಿಸಿದೆ. ಈ ನಕ್ಷೆಯು ಪಾಕಿಸ್ತಾನದ ಜನರ ಭರವಸೆ ಮತ್ತು ನಂಬಿಕೆಗಳನ್ನು ಅನುಮೋದಿಸುತ್ತದೆ. ಈ ನಕ್ಷೆಯು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಆಗಸ್ಟ್ 5 ರಂದು ಭಾರತ ಕೈಗೊಂಡ ಕಾನೂನುಬಾಹಿರ ಹೆಜ್ಜೆಯನ್ನು ರದ್ದುಗೊಳಿಸುತ್ತದೆ (370 ನೇ ವಿಧಿಯನ್ನು ರದ್ದುಪಡಿಸುವುದು). ಇಂದಿನಿಂದ, ಇದು ಪಾಕಿಸ್ತಾನದ ಅಧಿಕೃತ ನಕ್ಷೆಯಾಗಿದೆ ”‌ ಎಂದು ಇಮ್ರಾನ್ ಖಾನ್ ಮಾಧ್ಯಮಗಳನ್ನುದ್ದೇಶಿಸಿ ಹೇಳಿದ್ದಾರೆ.

ಇಮ್ರಾನ್‌ ಖಾನ್ ಅವರ ಸರ್ಕಾರ ಮತ್ತು ಪಾಕಿಸ್ತಾನದ ಜನರನ್ನು ಅಭಿನಂದಿಸಿದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ, ಕಾಶ್ಮೀರ ಹಾಗೂ ಕಾಶ್ಮೀರದ ಜನರ ಹಕ್ಕನ್ನು ಭಾರತ ನಡೆಸಿರುವ ಅತಿಕ್ರಮಿಸಿದ್ದನ್ನು ಈ ಹೊಸ ನಕ್ಷೆಯು ಪ್ರಶ್ನಿಸುತ್ತದೆ ಎಂದು ಹೇಳಿದ್ದಾರೆ.

"ಈ ನಕ್ಷೆ ಪಾಕಿಸ್ತಾನ ಸರ್ಕಾರಗಳು ಇಲ್ಲಿಯವರೆಗೆ ಹೇಳುತ್ತಿದ್ದ ವಾದವನ್ನೇ ಮುಂದಿಟ್ಟಿದೆ. ಇಂದು, ನಮ್ಮ ಸರ್ಕಾರವು ಆ ನಕ್ಷೆಯನ್ನು ಇಡೀ ಜಗತ್ತಿಗೆ ಬಹಿರಂಗಪಡಿಸಿದೆ ಮತ್ತು ಪಾಕಿಸ್ತಾನ ಎಲ್ಲಿದೆ ಎಂಬುದನ್ನು ತೋರಿಸಿದೆ. ವಿವಾದಾಸ್ಪದವೆಂದು ಪರಿಗಣಿಸಲಾಗಿದ್ದ ಕಾಶ್ಮೀರ, ಆಜಾದ್ ಕಾಶ್ಮೀರ, ಗಿಲ್ಗಿಟ್ಟ್- ಬಾಲ್ಟಿಸ್ತಾನ್ ಪ್ರದೇಶದಲ್ಲಿ ಪಾಕಿಸ್ತಾನದ ಜನರು ವಿವಾದವನ್ನು ಪರಿಹರಿಸಲು ಬಯಸುತ್ತಿದ್ದಾರೆ. ಭಾರತ ಕಳೆದ ವರ್ಷ ಆಗಸ್ಟ್ 5 ರಂದು ನಕ್ಷೆಯನ್ನು ಬಿಡುಗಡೆ ಮಾಡಿ ಮತ್ತು ಪಾಕಿಸ್ತಾನದ ಸರ್ಕಾರ ಮತ್ತು ತಮ್ಮ ಜನರನ್ನು ವಿಶ್ವದ ಮುಂದೆ ಗೇಲಿ ಮಾಡಿತ್ತು." ಎಂದು ಅವರು ಹೇಳಿದ್ದಾರೆ.

ಈ ನಕ್ಷೆಯು ಕಾಶ್ಮೀರ ಸಮಸ್ಯೆಯ ಪರಿಹಾರಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಖುರೇಷಿ ಹೇಳಿದ್ದಾರೆ.

"ವಿವಾದಿತ ಪ್ರದೇಶ"ವನ್ನು ಸೂಚಿಸಲು ಬಳಸುವ ಆರಂಭಿಕ ನಕ್ಷೆಯಲ್ಲಿ ಚುಕ್ಕೆಗಳ ರೇಖೆಯನ್ನು ತೆಗೆದುಹಾಕಲಾಗಿದೆ ಎಂದು ಹೇಳಿರುವ ಅವರು ಸಿಯಾಚಿನ್ ಅನ್ನು ಹೊಸ ನಕ್ಷೆಯಲ್ಲಿ ಸೇರಿಸಲಾಗಿದೆ ಮತ್ತು ಅದು ಯಾವಾಗಲೂ ಪಾಕಿಸ್ತಾನಕ್ಕೆ ಸೇರಿರುತ್ತದೆ ಎಂದು ಅವರು ಹೇಳಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com