ಅಮೇರಿಕಾದಲ್ಲಿ ಟಿಕ್‌ಟಾಕ್‌ ನಿಷೇಧಕ್ಕೆ ತಡೆಯಾಗಲಿದೆಯೇ ಮೈಕ್ರೋಸಾಫ್ಟ್‌ ?

‌ಚೀನಾ ಮೂಲದ ಪ್ರಸಿದ್ಧ ಟಿಕ್‌ಟಾಕ್‌ ಅಪ್ಲಿಕೇಶನ್‌ಅನ್ನು ಸೆಪ್ಟೆಂಬರ್‌ 15ರೊಳಗೆ ಅಮೇರಿಕಾ ಮೂಲದ ಯಾವುದಾದರೂ ಕಂಪೆನಿ ಕೊಂಡುಕೊಳ್ಳದಿದ್ದರೆ ಅಮೇರಿಕಾದಲ್ಲೂ ಅಪ್ಲಿಕೇಶನ್‌ ಅನ್ನು ನಿಷೇಧಿಸುವುದಾಗಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿ ...
ಅಮೇರಿಕಾದಲ್ಲಿ ಟಿಕ್‌ಟಾಕ್‌ ನಿಷೇಧಕ್ಕೆ ತಡೆಯಾಗಲಿದೆಯೇ ಮೈಕ್ರೋಸಾಫ್ಟ್‌ ?

‌ಚೀನಾ ಮೂಲದ ಪ್ರಸಿದ್ಧ ಟಿಕ್‌ಟಾಕ್‌ ಅಪ್ಲಿಕೇಶನ್‌ಅನ್ನು ಸೆಪ್ಟೆಂಬರ್‌ 15ರೊಳಗೆ ಅಮೇರಿಕಾ ಮೂಲದ ಯಾವುದಾದರೂ ಕಂಪೆನಿ ಕೊಂಡುಕೊಳ್ಳದಿದ್ದರೆ ಅಮೇರಿಕಾದಲ್ಲೂ ಅಪ್ಲಿಕೇಶನ್‌ ಅನ್ನು ನಿಷೇಧಿಸುವುದಾಗಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಅಮೇರಿಕಾದಲ್ಲಿ ಟಿಕ್‌ಟಾಕ್‌ ಸ್ವಾಮ್ಯವನ್ನು ಪಡೆಯಲು ಅಮೇರಿಕಾ ಮೂಲದ ಟೆಕ್ನಾಲಜಿ ದೈತ್ಯ ಮೈಕ್ರೋಸಾಫ್ಟ್‌ ಉತ್ಸುಕತೆ ತೋರುತ್ತಿದೆ. ಈಗಾಗಲೇ ಟಿಕ್‌ಟಾಕ್‌ ಮಾತೃಸಂಸ್ಥೆಯಾದ ಬೈಟ್‌ಡ್ಯಾನ್ಸ್‌ ಕಂಪೆನಿ ಜೊತೆಗೆ ಮೈಕ್ರೊಸಾಫ್ಟ್‌ ಮೊದಲ ಸುತ್ತಿನ ಮಾತುಕತೆಯನ್ನೂ ನಡೆಸಲಿದೆ.ಟಿಕ್‌ಟಾಕ್ ವಿಷಯದ ಕುರಿತಾಗಿ ಮೈಕ್ರೊಸಾಫ್ಟ್‌ ಸಿಇಒ ಆಗಿರುವ ಭಾರತದ ಮೂಲದ ಸತ್ಯ ನಡೆಲ್ಲಾ ಜೊತೆಗೆ ತಾನು ಚರ್ಚೆ ನಡೆಸಿದ್ದೇನೆ ಎಂದು ಶ್ವೇತ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಟ್ರಂಪ್‌ ಹೇಳಿದ್ದಾರೆ.

ಟಿಕ್‌ಟಾಕ್‌ ಸ್ವಾಮ್ಯವನ್ನು ಕೊಂಡುಕೊಳ್ಳುವ ಕುರಿತಾಗಿ ತನ್ನ ಅಭಿಪ್ರಾಯವನ್ನು ಸತ್ಯ ನಡೆಲ್ಲಾ ಕೇಳಿದ್ದಾರೆ. ಭದ್ರತಾ ದೃಷ್ಟಿಯಿಂದ, ಅಮೇರಿಕಾದಲ್ಲಿ ಟಿಕ್‌ಟಾಕ್ ನಿಯಂತ್ರಣವನ್ನು ಚೀನಾ ಮಾಡಬಾರದೆಂದು‌ ಹೇಳಿದ್ದೇನೆ. ಇದು ತುಂಬಾ ಅಗಾಧವಾಗಿದೆ ಹಾಗೂ ಆಕ್ರಮಣಕಾರಿ ಕೂಡಾ. ಇದನ್ನು ಮೈಕ್ರೊಸಾಫ್ಟ್‌ ಅಥವಾ ಇನ್ನಾವುದೇ ಕಂಪೆನಿಗಳು ಕೊಂಡುಕೊಳ್ಳುವುದರ ಕುರಿತು ತನಗೆ ಅಭ್ಯಂತರವಿಲ್ಲ. ಆದರೆ ಅಮೇರಿಕಾದಲ್ಲಿ ಅದರ ಸಂಪೂರ್ಣ ಒಡೆತನವನ್ನು ಅಮೇರಿಕಾ ಮೂಲದ ಕಂಪೆನಿಯೇ ಕೊಂಡುಕೊಳ್ಳಬೇಕೆಂದು ತಾನು ಹೇಳಿದ್ದೇನೆ. ಅಲ್ಲದೆ ಈ ಒಪ್ಪಂದದಲ್ಲಿ ಪಾಲನ್ನು ಅಮೇರಿಕಾ ಖಜಾನೆಗೂ ನೀಡಬೇಕೆಂದು ಸೂಚಿಸಿದ್ದೇನೆ ಎಂದು ಟ್ರಂಪ್‌ ಸುದ್ದಿಗಾರರೊಂದಿಗೆ ಹೇಳಿದ್ದಾರೆ. 30% ಷೇರು ಪಡೆಯುವುದಕ್ಕಿಂತಲೂ ಸಂಪೂರ್ಣ ಷೇರ್‌ಗಳನ್ನು ಮೈಕ್ರೋಸಾಫ್ಟ್‌ ಕೊಂಡುಕೊಳ್ಳಲಿ ಎಂದು ನಾನು ಸತ್ಯ ಅವರಿಗೆ ವೈಯಕ್ತಿಕವಾಗಿ ಸೂಚಿಸಿದ್ದೇನೆ. 30% ಕೊಂಡುಕೊಳ್ಳುವುದು ಸಂಕೀರ್ಣತೆಗಳನ್ನು ಸೃಷ್ಟಿಸುತ್ತದೆ. ಅದಕ್ಕಿಂತಲೂ ಸಂಪೂರ್ಣ ಷೇರು ಪಡೆದುಕೊಂಡರೆ ಕಾರ್ಯ ಸರಳವಾಗಲಿದೆ ಎಂದು ತಾನು ಸಲಹೆ ನೀಡಿರುವುದಾಗಿಯೂ ಟ್ರಂಪ್‌ ಹೇಳಿದ್ದಾರೆ. ಸೆಪ್ಟಂಬರ್‌ 15 ರೊಳಗೆ ಅಮೇರಿಕಾ ಮೂಲದ ಕಂಪೆನಿ ಟಿಕ್‌ಟಾಕನ್ನು ಕೊಂಡುಕೊಳ್ಳದಿದ್ದರೆ ಟಿಕ್‌ಟಾಕ್‌ ವ್ಯವಹಾರಗಳು ಅಮೇರಿಕಾದಿಂದ ಹೊರಗುಳಿಯಲಿದೆ ಎಂದು ಅಮೇರಿಕಾ ಅಧ್ಯಕ್ಷ ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಟಿಕ್‌ಟಾಕ್‌ ಒಂದು ದೊಡ್ಡ ಆಸ್ತಿ ಆಗಿರಬಹುದು, ಆದರೆ ನಾವು (ಅಮೇರಿಕಾ ಸರ್ಕಾರ) ಅನುಮತಿ ನೀಡದಿದ್ದಲ್ಲಿ ಅದು ಅಮೇರಿಕಾದಲ್ಲಿ ದೊಡ್ಡ ಆಸ್ತಿಯಲ್ಲ. ಟಿಕ್‌ಟಾಕ್‌ ನ್ನು ಅಮೇರಿಕಾದ ಯಾವ ಕಂಪೆನಿಯೂ ಕೊಂಡುಕೊಳ್ಳಬಹುದು. ಆದರೆ ಒಪ್ಪಂದದಲ್ಲಿ ಅಮೇರಿಕಾ ಖಜಾನೆಗೆ ಇಂತಿಷ್ಟು ಪಾಲು ಬರಬೇಕು, ಯಾಕೆಂದರೆ ಈ ಒಪ್ಪಂದ ನಡೆಯಲು ನಾವೇ ಮುಖ್ಯ ಕಾರಣ. ನಾವು ಅನುಮತಿ ನೀಡದಿದ್ದರೆ ಅದು ಇಲ್ಲಿ ಕಾರ್ಯಚರಿಸಲು ಸಾಧ್ಯವಿಲ್ಲ. ಈ ಒಪ್ಪಂದ ನಡೆದರೆ ಅಮೇರಿಕ ಖಜಾನೆಗೆ ದೊಡ್ಡ ಮೊತ್ತ ಬರಲಿದೆ ಎಂದು ಟ್ರಂಪ್‌ ಹೇಳಿದ್ದಾರೆ.

ಸತ್ಯ ನಡೆಲ್ಲಾ ಹಾಗೂ ಟ್ರಂಪ್‌ ಮಾತುಕತೆ ನಡೆದ ಬೆನ್ನಲ್ಲಿ ಹೇಳಿಕೆ ನೀಡಿದ ಮೈಕ್ರೊಸಾಫ್ಟ್‌ ಅಮೇರಿಕಾದಲ್ಲಿ ಟಿಕ್‌ಟಾಕ್‌ ಸ್ವಾಮ್ಯವನ್ನು ಕೊಂಡುಕೊಳ್ಳುವ ಮಾತುಕತೆ ನಡೆಯುತ್ತಿದೆ ಎಂದಿದೆ. ಶೀಘ್ರವೇ ಟಿಕ್‌ಟಾಕ್‌ನ್ನು ಮೈಕ್ರೊಸಾಫ್ಟ್‌ ಕೊಂಡುಕೊಳ್ಳಲಿದೆ. ಸೆಪ್ಟೆಂಬರ್‌ 15 ರೊಳಗೆ ಈ ಕುರಿತಾದ ಮಾತುಕತೆಯೆಲ್ಲಾ ಮುಗಿಯಲಿದೆ ಎಂದು ಮೈಕ್ರೊಸಾಫ್ಟ್‌ ಮೂಲಗಳು ತಿಳಿಸಿವೆ.

ಕಳೆದ ವಾರ ಟ್ರಂಪ್‌ ಅಮೇರಿಕಾದಲ್ಲಿ ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಟಿಕ್‌ಟಾಕನ್ನು ಬ್ಯಾನ್‌ ಮಾಡುವುದಾಗಿ ಹೇಳಿದ್ದರು. ಅದಕ್ಕೂ ಮೊದಲು ಅಮೇರಿಕಾ ಕಾರ್ಯದರ್ಶಿ ಮೈಕ್‌ ಪಾಂಪಿಯೊ, ಟಿಕ್‌ಟಾಕ್‌ ಅಮೇರಿಕಾ ಬಳಕೆದಾರರ ವೈಯಕ್ತಿಕ ವಿವರಗಳನ್ನು ಸಂಗ್ರಹಿಸುತ್ತಿದೆ ಎಂದು ಆರೋಪಿಸಿದ್ದರು.

ಈ ಆರೋಪಗಳ ಬಳಿಕ ಹೇಳಿಕೆ ನೀಡಿದ ನೀಡಿದ ಟಿಕ್‌ಟಾಕ್, ಅಮೇರಿಕಾದ ಬಳಕೆದಾರರ ಮಾಹಿತಿಯನ್ನು ಅಮೇರಿಕಾ ಮೂಲದ ಸರ್ವರ್‌ಗಳಲ್ಲಿ ಶೇಖರಿಸಿಡಲಾಗಿದೆ. ಅದರ ಬ್ಯಾಕಪ್‌ನ್ನು ಸಿಂಗಾಪುರದಲ್ಲಿ ಇರಿಸಲಾಗಿದೆ. ಅಮೇರಿಕಾ ಅಧಿಕಾರಿಗಳು ಆತಂಕಪಡುವಂತೆ, ಇದು ಯಾವುದೇ ಕಾರಣಕ್ಕೂ ಚೀನಾದ ಕಾನೂನಿನಡಿಯಲ್ಲಿ ಇದು ಒಳಪಡುವುದಿಲ್ಲ ಎಂದು‌ ಸಮಜಾಯಿಷಿ ನೀಡಿತ್ತು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com