ವುಹಾನ್ ಕಾರ್ಖಾನೆಯಲ್ಲಿ ಸ್ಪೋಟ: ಆರು ಮಂದಿ ಸಾವು

ಚೀನಾದ ವುಹಾನ್ ನಗರದ ಬಳಿ ರಾಸಾಯನಿಕ ಕಾರ್ಖಾನೆಯಲ್ಲಿ ನಿನ್ನೆ ಸಂಭವಿಸಿದ ಸ್ಫೋಟದಲ್ಲಿ ಆರು ಜನರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇನ್ನೂ ನಾಲ್ಕು ಜನರು ಗಾಯಗೊಂಡಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ವುಹಾನ್ ಕಾರ್ಖಾನೆಯಲ್ಲಿ ಸ್ಪೋಟ: ಆರು ಮಂದಿ ಸಾವು

ಚೀನಾದ ವುಹಾನ್ ನಗರದ ಬಳಿ ರಾಸಾಯನಿಕ ಕಾರ್ಖಾನೆಯಲ್ಲಿ ನಿನ್ನೆ ಸಂಭವಿಸಿದ ಸ್ಫೋಟದಲ್ಲಿ ಆರು ಜನರು ಮೃತಪಟ್ಟಿದ್ದಾರೆ. ಸಂಜೆ ಸ್ಫೋಟ ಸಂಭವಿಸಿದ ನಂತರ ಸ್ಥಾವರದಿಂದ ದಟ್ಟ ಕಪ್ಪು ಹೊಗೆ ಹೋಗುತ್ತಿರುವ ವೀಡಿಯೋ ಚಿತ್ರಣವನ್ನು ಮಾಧ್ಯಮಗಳು ವರದಿ ಮಾಡಿವೆ.

ಘಟನೆಯಲ್ಲಿ ಇನ್ನೂ ನಾಲ್ಕು ಜನರು ಗಾಯಗೊಂಡಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಸಂಜೆ 5: 30 ರ ಸುಮಾರಿಗೆ ಕ್ಸಿಯಾಂಟಾವೊದ ಕ್ಸಿಲಿಯುಹೆ ಪಟ್ಟಣದ ಲಾನ್ಹುವಾ ಸಿಲಿಕೋನ್ ಕಂಪನಿಯ ಕಾರ್ಖಾನೆಯಲ್ಲಿ ಈ ಘಟನೆ ನಡೆದಿದೆ ಎಂದು ಸರ್ಕಾರದ ತಿಳಿಸಿದೆ.

1.5 ಮಿಲಿಯನ್ ಜನಸಂಖ್ಯೆ ಹೊಂದಿರುವ ಕ್ಸಿಯಾಂಟಾವೊ ನಗರವು ಪ್ರಾಂತೀಯ ರಾಜಧಾನಿ ವುಹಾನ್‌ನಿಂದ 109ಕಿಲೋಮೀಟರ್ ದೂರದಲ್ಲಿದೆ.

ಬ್ಯುಟಾನೋನ್ ಆಕ್ಸಿಮ್ (butanone oxime) ರಾಸಾಯನಿಕದ ಸಂಗ್ರಾಹಕದ ಬಳಿ ಈ ಸ್ಫೋಟ ಸಂಭವಿಸಿದೆ. ಸ್ಪೋಟದ ತೀವ್ರತೆಗೆ ಸಮೀಪದ ಕಟ್ಟಡಗಳ ಗಾಜಿನ ಬಾಗಿಲುಗಳು ಒಡೆದು ಹೋಗಿವೆ ಎಂದು ಪ್ರತ್ಯಕ್ಷ ದರ್ಶಿಗಳು ಮಾಧ್ಯಮಗಳಿಗೆ ಹೇಳಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com