ಹೈಕಮಾಂಡ್ ಕ್ಷಮಿಸಿದರೆ ಬಂಡಾಯ ಶಾಸಕರ ಮರಳುವಿಕೆಗೆ ಸ್ವಾಗತ- ಗೆಹ್ಲೋಟ್
ರಾಷ್ಟ್ರೀಯ

ಹೈಕಮಾಂಡ್ ಕ್ಷಮಿಸಿದರೆ ಬಂಡಾಯ ಶಾಸಕರ ಮರಳುವಿಕೆಗೆ ಸ್ವಾಗತ- ಗೆಹ್ಲೋಟ್

ಸಚಿನ್‌ ಪೈಲಟ್‌ ಹಾಗೂ ತಂಡ ತಪ್ಪು ಒಪ್ಪಿ ಬಂದರೆ ರಾಜ್ಯ ಕಾಂಗ್ರೆಸ್‌ ಅವರನ್ನು ಸ್ವಾಗತಿಸಲು ಮುಕ್ತವಾಗಿದೆ ಎಂದು ಸುದ್ದಿಗಾರರೊಂದಿಗೆ ಹೇಳಿದ ರಾಜಸ್ಥಾನ ಮುಖ್ಯಮಂತ್ರಿ ಗೆಹ್ಲೋಟ್‌, ಬಂಡಾಯ ಶಾಸಕರನ್ನು ಪಕ್ಷದ ಹೈಕಮಾಂಡ್‌ ಮನ್ನಿಸಿದರೆ ಅವರನ್ನು ಒಪ್ಪಿಕೊಳ್ಳಲು ಮುಕ್ತ ಮನಸ್ಸು ಮಾಡುವುದಾಗಿ ಹೇಳಿದ್ದಾರೆ.

ಪ್ರತಿಧ್ವನಿ ವರದಿ

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ತನ್ನನ್ನು ಮೂರು ಬಾರಿ ಮುಖ್ಯಮಂತ್ರಿ ಮಾಡಿರುವ ಕಾಂಗ್ರೆಸ್‌ ಪಕ್ಷಕ್ಕೆ ಬೇಕಾಗಿ ತಾನು ಏನು ಬೇಕಾದರೂ ಮಾಡಲು ತಯಾರಿರುವುದಾಗಿ ಅಶೋಕ್‌ ಗೆಹ್ಲೋಟ್‌ ಹೇಳಿದ್ದಾರೆ.

ನಮಗೆ ಯಾರೊಂದಿಗೂ ಜಗಳವಿಲ್ಲ. ಪ್ರಜಾಪ್ರಭುತ್ವದಲ್ಲಿ, ಹೋರಾಟಗಳು ಸಿದ್ಧಾಂತ, ನೀತಿಗಳು ಹಾಗೂ ಯೋಜನೆಗಳ ಮೇಲೆ ನಡೆಯಬೇಕೆ ಹೊರತು ಸರ್ಕಾರವನ್ನು ಉರುಳಿಸುವುದಕ್ಕಾಗಿ ಅಲ್ಲ ಎಂದು ಅವರು ಹೇಳಿದ್ದಾರೆ.

ರಾಜಸ್ಥಾನದಲ್ಲಿ ನಡೆಯುತ್ತಿರುವ ಪ್ರಹಸನ ತಕ್ಷಣವೇ ಮೋದಿ ನಿಲ್ಲಿಸಬೇಕು. ತಮ್ಮ ಸರ್ಕಾರವನ್ನು ಉರುಳಿಸುವ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿಯವರು ಕೈಬಿಡಬೇಕು ಎಂದು ಅಶೋಕ್‌ ಗೆಹ್ಲೋಟ್‌ ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ರಾಜ್ಯ ಸರ್ಕಾರದ ನಂತರದ ಸ್ಥಾನ ಕೇಂದ್ರ ಗೃಹ ಸಚಿವಾಲಯಕ್ಕಿರುವುದು ಎಂದು ಹೇಳಿದ ಗೆಹ್ಲೋಟ್‌ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com