ರಾಜಸ್ಥಾನ: ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಮೊರೆ ಹೋಗಲಿರುವ ಸರ್ಕಾರ
ರಾಷ್ಟ್ರೀಯ

ರಾಜಸ್ಥಾನ: ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಮೊರೆ ಹೋಗಲಿರುವ ಸರ್ಕಾರ

ಸರ್ಕಾರದ ವಿರುದ್ಧ ಬಂಡಾಯ ಸಾರಿರುವ ಸಚಿನ್‌ ಪೈಲ್ಟ್ ಹಾಗೂ ಬೆಂಬಲಿಗ 18 ಶಾಸಕರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ, ತನ್ನ ಸರ್ಕಾರವನ್ನು ಸುಭಧ್ರಗೊಳಿಸುವ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಯೋಚನೆಗಳಿಗೆ ರಾಜಸ್ಥಾನ ಹೈಕೋರ್ಟ್ ಆದೇಶ‌ ಮುಳ್ಳಾಗಿದೆ

ಪ್ರತಿಧ್ವನಿ ವರದಿ

ರಾಜಸ್ಥಾನ ರಾಜ್ಯ ಸರ್ಕಾರದ ಬಿಕ್ಕಟ್ಟು ಶಮನಗೊಳ್ಳುವುದು ಕಾಣುತ್ತಿಲ್ಲ. ಸರ್ಕಾರದ ತೊಯ್ದಾಟ ಇನ್ನೂ ನಿಂತಿಲ್ಲ. ಸರ್ಕಾರದ ವಿರುದ್ಧ ಬಂಡಾಯ ಸಾರಿರುವ ಸಚಿನ್‌ ಪೈಲ್ಟ್ ಹಾಗೂ ಬೆಂಬಲಿಗ 18 ಶಾಸಕರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ, ತನ್ನ ಸರ್ಕಾರವನ್ನು ಸುಭಧ್ರಗೊಳಿಸುವ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಯೋಚನೆಗಳಿಗೆ ರಾಜಸ್ಥಾನ ಹೈಕೋರ್ಟ್ ಆದೇಶ‌ ಮುಳ್ಳಾಗಿದೆ.

ಬಂಡಾಯ ಶಾಸಕರ ವಿರುದ್ಧ ಜುಲೈ 21 ರವರೆಗೆ ಶಿಸ್ತುಕ್ರಮ ತೆಗೆದುಕೊಳ್ಳದಂತೆ ಆದೇಶಿಸಿದ್ದ ಹೈಕೋರ್ಟ್‌ ಅವಧಿಯನ್ನು 24 ಜುಲೈವರೆಗೆ ವಿಸ್ತರಿಸಿದೆ. ಈ ಆದೇಶದ ವಿರುದ್ಧ ಸುಪ್ರಿಂ ಕೋರ್ಟ್‌ ಮೊರೆ ಹೋಗುವುದಾಗಿ ರಾಜಸ್ಥಾನ ವಿಧಾನಸಭೆ ಸಭಾಪತಿ ಸಿ.ಪಿ ಜೋಷಿ ಪತ್ರಿಕಾ ಗೋಷ್ಟಿಯಲ್ಲಿ ಹೇಳಿದ್ದರು.

Click here to follow us on Facebook , Twitter, YouTube, Telegram

Pratidhvani
www.pratidhvani.com