ಟ್ವಿಟರ್‌ನಲ್ಲಿ ಟ್ರೆಂಡ್ ಆಗುತ್ತಿದೆ  #Nonsense_Modi
ರಾಷ್ಟ್ರೀಯ

ಟ್ವಿಟರ್‌ನಲ್ಲಿ ಟ್ರೆಂಡ್ ಆಗುತ್ತಿದೆ #Nonsense_Modi

ನರೇಂದ್ರ ಮೋದಿಯ 2014 ರ ಹಿಂದಿನ ಟ್ವೀಟ್‌ಗಳನ್ನೇ, ನೆಟ್ಟಿಗರು ಇಂದು ಸರ್ಕಾರದ ವಿರುದ್ಧ ಪ್ರಯೋಗಿಸುತ್ತಿದ್ದಾರೆ. ಮೋದಿಯ ಆಡಳಿತದ ವೈಫಲ್ಯಗಳನ್ನು, ಅವರ ಹಳೆಯ ಟ್ವೀಟ್‌, ವೀಡಿಯೋಗಳನ್ನು, ಅವರ ಮೇಲೆ ಬರೆದಿರುವ ವ್ಯಂಗ್ಯ ಚಿತ್ರಗಳನ್ನು ಬಳಸಿ ಟ್ವೀಟಿಗರು #Nonsense_Modi ಎಂಬ ಹ್ಯಾಷ್‌ಟ್ಯಾಗ್‌ ಮೂಲಕ ಟ್ರೆಂಡ್‌ ಮಾಡಿದ್ದಾರೆ

ಪ್ರತಿಧ್ವನಿ ವರದಿ

ಭಾರತದ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣವನ್ನು ಸಮರ್ಪಕವಾಗಿ ಬಳಸಿ ದೇಶದ ಪ್ರಭಾವಿ ನಾಯಕರೆನಿಸಿಕೊಂಡವರು. ನರೇಂದ್ರ ಮೋದಿಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಷ್ಟು ಪ್ರಚಾರ ಬಹುಷ ವಿಶ್ವದ ಯಾವ ನಾಯಕನಿಗೂ ಸಿಕ್ಕಿರಲಿಕ್ಕಿಲ್ಲ.

2014 ರಲ್ಲಿ ತಾನು ಅಧಿಕಾರಕ್ಕೇರುವ ಮುನ್ನ, ಯುಪಿಎ ಆಡಳಿತವನ್ನು ತನ್ನ ತೀಕ್ಷ್ಣ ವ್ಯಂಗ್ಯದ ಮೂಲಕ ಅಂದು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಟೀಕಿಸುತ್ತಿದ್ದರು. ಅವರು ಅಂದು ಅನುಸರಿಸಿದ ಮಾರ್ಗಗಳೇ ಮೋದಿಗೆ ಇಂದು ತಿರುಗುಬಾಣವಾಗಿದೆ.

ನರೇಂದ್ರ ಮೋದಿಯ 2014 ರ ಹಿಂದಿನ ಟ್ವೀಟ್‌ಗಳನ್ನೇ, ನೆಟ್ಟಿಗರು ಇಂದು ಸರ್ಕಾರದ ವಿರುದ್ಧ ಪ್ರಯೋಗಿಸುತ್ತಿದ್ದಾರೆ. ಮೋದಿಯ ಆಡಳಿತದ ವೈಫಲ್ಯಗಳನ್ನು, ಅವರ ಹಳೆಯ ಟ್ವೀಟ್‌, ವೀಡಿಯೋಗಳನ್ನು, ಅವರ ಮೇಲೆ ಬರೆದಿರುವ ವ್ಯಂಗ್ಯ ಚಿತ್ರಗಳನ್ನು ಬಳಸಿ ಟ್ವೀಟಿಗರು #Nonsense_Modi ಎಂಬ ಹ್ಯಾಷ್‌ಟ್ಯಾಗ್‌ ಮೂಲಕ ಟ್ರೆಂಡ್‌ ಮಾಡಿದ್ದಾರೆ. ಈ ಅಭಿಯಾನದಲ್ಲಿ ಮಂಗಳವಾರ ಸಂಜೆ ಎಂಟು ಗಂಟೆವರೆಗೆ 1 ಲಕ್ಷದ 10 ಸಾವಿರ ಮಂದಿ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.

ಇತ್ತೀಚೆಗಷ್ಟೇ ನರೇಂದ್ರ ಮೋದಿ ಫಾಲೋವರ್ಸ್‌ ಸಂಖ್ಯೆ 60 ಮಿಲಿಯನ್‌ ದಾಟಿದೆ. ಇದೂ ಕೂಡ ವ್ಯಂಗ್ಯಕ್ಕೆ ಒಳಗಾಗಿದೆ. ನರೇಂದ್ರ ಮೋದಿಯವರ ಖಾತೆಯನ್ನು ಹಿಂಬಾಲಿಸುವವರಲ್ಲಿ 60 ಶೇಕಡಾ ನಕಲಿ ಅಕೌಂಟ್‌ಗಳು ಎಂದು 2018 ರಲ್ಲಿ ವರದಿಯಾಗಿತ್ತು. ಆ ವರದಿಯ ತುಣುಕನ್ನು ಆಧರಿಸಿ ವ್ಯಾಪಕ ಟೀಕೆಗೊಳಗಾಗುತ್ತಿದೆ.

ನರೇಂದ್ರ ಮೋದಿಯ ಪರವೂ ನಡೆಯುತ್ತಿದೆ ಅಭಿಯಾನ

ನರೇಂದ್ರ ಮೋದಿಯರ ಅಭಿಮಾನಿಗಳು ಕೂಡಾ ಅಭಿಯಾನ ಶುರು ಮಾಡಿದ್ದು ಇನ್ನೇನು ರಾಮಮಂದಿರ ನಿರ್ಮಾಣ ಕಾರ್ಯ ಆರಂಭಗೊಳ್ಳುತ್ತದೆ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರೊಂದಿಗೆ #राम_भक्त_मोदी (ರಾಮಭಕ್ತ ಮೋದಿ) ಎಂದು ಟ್ವಿಟರ್‌ ಟ್ರೆಂಡ್‌ ಶುರು ಮಾಡಿದ್ದಾರೆ. ಅದರೊಂದಿಗೆ #मोदी_का_रामराज्य (ಮೋದಿ ಕಾ ಸಾಮ್ರಾಜ್ಯ್)‌ ಎಂಬ ಟ್ವಿಟರ್‌ ಟ್ರೆಂಡ್‌ ನಡೆಯುತ್ತಿದೆ. ಇದಕ್ಕೆ ಕ್ರಮವಾಗಿ 56 ಸಾವಿರ ಹಾಗೂ 75 ಸಾವಿರ ಮಂದಿ ಬೆಂಬಲಿಸಿದ್ದಾರೆ.

ನರೇಂದ್ರ ಮೋದಿ ಪರ- ವಿರೋಧ ಟ್ವೀಟ್‌ಗಳು

Click here to follow us on Facebook , Twitter, YouTube, Telegram

Pratidhvani
www.pratidhvani.com