ಕರೋನಾ ವೈರಸ್ ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗಬಹುದು: ಅಧ್ಯಯನ
ರಾಷ್ಟ್ರೀಯ

ಕರೋನಾ ವೈರಸ್ ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗಬಹುದು: ಅಧ್ಯಯನ

ಹೊಸ ಅಧ್ಯಯನದ ಪ್ರಕಾರ ಕರೋನಾ ವೈರಸ್ ರುಚಿ ಮತ್ತು ವಾಸನೆಯನ್ನು ಮಾತ್ರ ಕಸಿದುಕೊಳ್ಳುವುದಲ್ಲದೆ, ಇದು ಪುರುಷರಲ್ಲಿ ಬಂಜೆತನಕ್ಕೂ ಕಾರಣವಾಗಬಹುದು ಅಲ್ಲದೆ ಲೈಂಗಿಕ ಸಂಪರ್ಕದಿಂದ ಕರೋನಾ ಸೋಂಕು ಹರಡಬಹುದು

ಪ್ರತಿಧ್ವನಿ ವರದಿ

ಹೊಸ ಅಧ್ಯಯನದ ಪ್ರಕಾರ ಕರೋನಾ ವೈರಸ್ ರುಚಿ ಮತ್ತು ವಾಸನೆಯನ್ನು ಮಾತ್ರ ಕಸಿದುಕೊಳ್ಳುವುದಲ್ಲದೆ, ಇದು ಪುರುಷರಲ್ಲಿ ಬಂಜೆತನಕ್ಕೂ ಕಾರಣವಾಗಬಹುದು ಅಲ್ಲದೆ ಲೈಂಗಿಕ ಸಂಪರ್ಕದಿಂದ ಕರೋನಾ ಸೋಂಕು ಹರಡಬಹುದೆಂದು ನ್ಯೂಯಾರ್ಕ್‌ ಪೋಸ್ಟ್‌ ವರದಿ ಮಾಡಿದೆ.

ಅಮೇರಿಕನ್ ಮೆಡಿಕಲ್ ಅಸೋಸಿಯೇಷನ್ ​​ಪ್ರಕಟಿಸಿದ ಮಾಸಿಕ ಮೆಡಿಕಲ್ ಜರ್ನಲ್ ಜಾಮಾದಲ್ಲಿ ಕಳೆದ ತಿಂಗಳು ಪ್ರಕಟವಾದ ವರದಿ ಪ್ರಕಾರ ಅಧ್ಯಯನಕ್ಕಾಗಿ ಚೀನಾದ ಶಾಂಗ್‌ಕಿಯುನಲ್ಲಿ ಸಂಶೋಧಕರು 38 ಮಂದಿ ಕರೋನಾ ರೋಗಿಗಳ ವೀರ್ಯಗಳನ್ನು ಪರಿಶೀಲಿಸಿದೆ. ಅದರಲ್ಲಿ 15% ವೀರ್ಯ ಮಾದರಿಗಳಲ್ಲಿ COVID-19 ಇರುವಿಕೆ ಕಂಡುಬಂದಿದೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ವೀರ್ಯದಲ್ಲಿ ಕರೋನಾ ಸೋಂಕು ಕಂಡು ಬಂದ 6 ಮಂದಿಯಲ್ಲಿ ನಾಲ್ಕು ರೋಗಿಗಳು ಸೋಂಕಿನ ತೀವ್ರ ಹಂತದಲ್ಲಿದ್ದರು, ಮತ್ತು ಇಬ್ಬರು ಚೇತರಿಸಿಕೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.

ಸಂಶೋಧಕ ಡಾ. ಜಾನ್ ಐಟ್ಕೆನ್ ಇದನ್ನು ಝೀಕಾ ವೈರಸ್‌ಗೆ ಹೋಲಿಸಿದ್ದಾರೆ. ಲೈಂಗಿಕ ಸಂಪರ್ಕದ ವೇಳೆ ಝೀಕಾ ಸೋಂಕಿನ ಪ್ರಸರಣ ಸಂಭವಿಸುವಂತೆ, ಕರೋನಾ ಕೂಡಾ ವೀರ್ಯಾಣು ಮೂಲಕ ಪುರುಷರಿಂದ ಸ್ತ್ರೀ ಸಂತಾನೋತ್ಪತ್ತಿ ಭಾಗಕ್ಕೆ ವೈರಲ್ ಸೋಂಕುಗಳನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಹಾಗಾಗಿ ಕರೋನಾ ಸೋಂಕು ಲೈಂಗಿಕವಾಗಿ ಹರಡಬಹುದು ಎಂಬುದನ್ನು ಇದು ಸೂಚಿಸುತ್ತದೆ ಎಂದು ಅವರು ಹೇಳಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com