ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಕರೋನಾ ಪಾಸಿಟಿವ್
ರಾಷ್ಟ್ರೀಯ

ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಕರೋನಾ ಪಾಸಿಟಿವ್

ಸದ್ಯ ಅಮಿತಾಭ್‌ರನ್ನು ಮುಂಬೈಯ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರತಿಧ್ವನಿ ವರದಿ

ಹಿಂದಿ ಚಿತ್ರರಂಗದ ಹಿರಿಯ ನಟ ಅಮಿತಾಭ್ ಬಚ್ಚನ್ ರಿಗೆ ಕರೋನಾ ಸೋಂಕು ಇರುವುದು ಧೃಡವಾಗಿದೆ. ಕರೋನಾ ಶಂಕೆ ಹಿನ್ನಲೆಯಲ್ಲಿ ನಟನ ಗಂಟಲು ಪರೀಕ್ಷೆ ನಡೆಸಿದ್ದು ಸೋಂಕು ಇರುವುದು ಪರೀಕ್ಷೆಯಲ್ಲಿ ಖಚಿತಗೊಂಡಿದೆ.

ಸದ್ಯ ಅಮಿತಾಭ್‌ರನ್ನು ಮುಂಬೈಯ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಮಿತಾಭ್‌ರಿಗೆ ಕರೋನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಕುಟುಂಬಸ್ಥರನ್ನು ಹಾಗೂ ಸಹಾಯಕರನ್ನು, ಮನೆ ಕೆಲಸದವರನ್ನು ಕರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವಿಷಯವನ್ನು ಸ್ವತಃ ಅಮಿತಾಭ್ ಬಚ್ಚನ್ ತಮ್ಮ ಟ್ವಿಟರಿನಲ್ಲಿ ಹೇಳಿಕೊಂಡಿದ್ದಾರೆ

ಅಭಿಷೇಕ್‌ಗೂ ಸೋಂಕು

ಅಮಿತಾಭ್‌ ಬಚ್ಚನ್‌ ಅವರ ಪುತ್ರ ಅಭಿಷೇಕ್‌ ಬಚ್ಚನ್‌ಗೂ ಸೋಂಕು ತಗುಲಿದ ಮಾಹಿತಿ ಖಚಿತವಾಗಿದೆ. ಇವರೂ ಕೂಡಾ ನಾನಾವತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com