ಬಿಹಾರ ವಿಧಾನ ಪರಿಷತ್ ಸಭಾಪತಿ ಕರೋನಾ ಪಾಸಿಟಿವ್
ರಾಷ್ಟ್ರೀಯ

ಬಿಹಾರ ವಿಧಾನ ಪರಿಷತ್ ಸಭಾಪತಿ ಕರೋನಾ ಪಾಸಿಟಿವ್

ಜುಲೈ 1 ರಂದು ಪ್ರಮಾಣ ವಚನ ಸಮಾರಂಭವಿದ್ದು, ಸಭೆಯಲ್ಲಿ ಸೋಂಕು ಪಾಸಿಟಿವ್‌ ಕಂಡು ಬಂದ ಸಭಾಪತಿಯ ಸಮೀಪವೇ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಇದ್ದರು. ಈ ಹಿನ್ನಲೆಯಲ್ಲಿ ಕರೋನಾ ಸೋಂಕು ಹರಡಿರುವ ಶಂಕೆಯಲ್ಲಿ ಅವರ ಹಾಗೂ ಅವರ ಆಪ್ತ ಕಾರ್ಯದರ್ಶಿ ಗಂಟಲ ದ್ರವವನ್ನೂ ಪರೀಕ್ಷೆಗೆ ರವಾನಿಸಲಾಗಿದೆ.

ಪ್ರತಿಧ್ವನಿ ವರದಿ

ಶುಕ್ರವಾರ ಗಂಟಲು ದ್ರವ ಪರೀಕ್ಷೆಗೆ ರವಾನಿಸಿದ್ದ ಬಿಹಾರ ವಿಧಾನ ಪರಿಷತ್‌ ಸಭಾಪತಿ ಅವಧೇಶ್‌ ನಾರಾಯಣ್‌ ಸಿಂಗ್‌ರ ರಿಸಲ್ಟ್‌ ಕರೋನಾ ಪಾಸಿಟಿವ್‌ ಎಂದು ಕಂಡು ಬಂದಿದೆ. ಸಭಾಪತಿಯಲ್ಲಿ ಕರೋನಾ ಪಾಸಿಟಿವ್‌ ಕಂಡು ಬಂದ ಬೆನ್ನಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹಾಗೂ ಆಪ್ತ ಸಹಾಯಕರ ಗಂಟಲು ದ್ರವವನ್ನೂ ಪರೀಕ್ಷೆ ನಡೆಸಲು ಲ್ಯಾಬ್‌ಗಳಿಗೆ ರವಾನಿಸಲಾಗಿದೆ.

ಜುಲೈ 1 ರಂದು ಪ್ರಮಾಣ ವಚನ ಸಮಾರಂಭವಿದ್ದು, ಸಭೆಯಲ್ಲಿ ಸೋಂಕು ಪಾಸಿಟಿವ್‌ ಕಂಡು ಬಂದ ಸಭಾಪತಿಯ ಸಮೀಪವೇ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಇದ್ದರು. ಈ ಹಿನ್ನಲೆಯಲ್ಲಿ ಕರೋನಾ ಸೋಂಕು ಹರಡಿರುವ ಶಂಕೆಯಲ್ಲಿ ಅವರ ಹಾಗೂ ಅವರ ಆಪ್ತ ಕಾರ್ಯದರ್ಶಿ ಗಂಟಲ ದ್ರವವನ್ನೂ ಪರೀಕ್ಷೆಗೆ ರವಾನಿಸಲಾಗಿದೆ.

ಅಲ್ಲದೆ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ, ಮಂತ್ರಿಗಳಾದ ಶ್ರವಣ್‌ ಕುಮಾರ್, ಮಂಗಲ್‌ ಪಾಂಡೆ, ವಿನೋದ್‌ ನಾರಾಯಣ್‌ ಜಾ಼ ಸೇರಿದಂತೆ ವಿಧಾನಸಭಾ ಸಭಾಪತಿ ವಿಜಯ್‌ ಕುಮಾರ್‌ ಛೌಧರಿ ಹಾಗೂ ಇನ್ನಿತರ ನಾಯಕರೂ ಪಾಲ್ಗೊಂಡಿದ್ದರು.

ಆ ಪೈಕಿ ವಿಧಾನಸಭಾ ಸಭಾಪತಿ ವಿಜಯ್‌ ಕುಮಾರ್‌ ಚೌಧರಿ ಹಾಗೂ ಅವರ ಕಾರ್ಯದರ್ಶಿ ಗಂಟಲು ದ್ರವ ಪರೀಕ್ಷೆ ನಡೆಸಿದ್ದು, ಫಲಿತಾಂಶ ಇನ್ನೂ ಹೊರಬರಬೇಕಷ್ಟೆ ಎಂದು ತಿಳಿದು ಬಂದಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com