ಅಂಫಾನ್ ಚಂಡಮಾರುತ : ಪ್ರಧಾನಿ ಮೋದಿ ಕಾಲೆಳೆದ ಡಿಕೆಶಿ.!
ರಾಷ್ಟ್ರೀಯ

ಅಂಫಾನ್ ಚಂಡಮಾರುತ : ಪ್ರಧಾನಿ ಮೋದಿ ಕಾಲೆಳೆದ ಡಿಕೆಶಿ.!

ಅಂದಹಾಗೆ ಪಶ್ಚಿಮ ಬಂಗಾಳದಲ್ಲಿ 2021ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅಲ್ದೇ 2018ರ ವಿಧಾನಸಭಾ ಚುನಾವಣೆ ಹಾಗೂ 2019ರ ಲೋಕಸಭಾ ಚುನಾವಣೆಯ ವೇಳೆ ಮೋದಿ ಕರ್ನಾಟಕಕ್ಕೆ ಬರೋಬ್ಬರಿ 30ಸಲ ಭೇಟಿಕೊಟ್ಟಿದ್ದರು.

ಪ್ರತಿಧ್ವನಿ ವರದಿ

ಅಂಫಾನ್‌ ಚಂಡಮಾರುತದಿಂದ ಪಶ್ಚಿಮ ಬಂಗಾಳದ ತೀರ ಪ್ರದೇಶಗಳಲ್ಲಿ ಭೀಕರ ಹಾನಿಯುಂಟಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿಗೆ ಭೇಟಿಕೊಟ್ಟ ಪ್ರಧಾನಿ ಮೋದಿಯವರು ಪಶ್ಚಿಮ ಬಂಗಾಳದಕ್ಕೆ ಸಾವಿರ ಕೋಟಿಯ ಮಧ್ಯಂತರ ಪರಿಹಾರ ಘೋಷಿಸಿದರು. ಈ ವಿಚಾರವನ್ನು ಮುಂದಿಟ್ಟುಕೊಂಡು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಮೋದಿಗೆ ಟಾಂಗ್‌ ಕೊಟ್ಟಿದ್ದಾರೆ.

ಮಾನ್ಯ ಪ್ರಧಾನಿಗಳು ಅಂಫಾನ್‌ ಪೀಡಿತ ಪಶ್ಚಿಮ ಬಂಗಾಳಕ್ಕೆ ತಕ್ಷಣ ಭೇಟಿಕೊಟ್ಟು ಮಧ್ಯಂತರ ಪರಿಹಾರ ಘೋಷಿಸಿದ್ದು ಖುಷಿಯ ವಿಚಾರ. ಆದರೆ, ಕರ್ನಾಟಕದಲ್ಲಿ 2019ರಲ್ಲಿ ನೆರೆ ಬಂದಾಗ ಪ್ರಧಾನಿಗಳು ಭೇಟಿಕೊಟ್ಟಿರಲಿಲ್ಲ. ಅಲ್ಲದೇ ಪರಿಹಾರ ಘೋಷಿಸಲು ತಡಮಾಡಿದರು. ಯಾಕೆ ಬಿಜೆಪಿ ಕರ್ನಾಟಕದ ಜೊತೆ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಅಂದಹಾಗೆ ಪಶ್ಚಿಮ್‌ ಬಂಗಾಳದಲ್ಲಿ 2021ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅಲ್ದೇ 2018ರ ವಿಧಾನಸಭಾ ಚುನಾವಣೆ ಹಾಗೂ 2019ರ ಲೋಕಸಭಾ ಚುನಾವಣೆಯ ವೇಳೆ ಮೋದಿ ಕರ್ನಾಟಕಕ್ಕೆ ಬರೋಬ್ಬರಿ 30ಸಲ ಭೇಟಿಕೊಟ್ಟಿದ್ದರು.

Click here Support Free Press and Independent Journalism

Pratidhvani
www.pratidhvani.com