RBI ಗವರ್ನರ್ ಶಕ್ತಿಕಾಂತ್ ದಾಸ್ ಸುದ್ದಿಗೋಷ್ಠಿ : ಆಹಾರ ಧಾನ್ಯ ಉತ್ಪಾದನೆಯಲ್ಲಿ 3.7% ಹೆಚ್ಚಳ.!
ರಾಷ್ಟ್ರೀಯ

RBI ಗವರ್ನರ್ ಶಕ್ತಿಕಾಂತ್ ದಾಸ್ ಸುದ್ದಿಗೋಷ್ಠಿ : ಆಹಾರ ಧಾನ್ಯ ಉತ್ಪಾದನೆಯಲ್ಲಿ 3.7% ಹೆಚ್ಚಳ.!

ಕೋವಿಡ್-19 ನಿಂದಾಗಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಉಂಟಾಗಿರುವ ಹಣಕಾಸು ಬಿಕ್ಕಟ್ಟಿನ ಸಂದರ್ಭದಲ್ಲಿ ಹಲವು ಕ್ರಮಗಳನ್ನು ಪ್ರಕಟಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ್ ದಾಸ್ ಮೇ22ರಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಪ್ರತಿಧ್ವನಿ ವರದಿ

ರೆಪೊ ದರ ಮತ್ತು ರಿವರ್ಸ್ ರೆಪೊ ದರ ಈ ಹೊತ್ತಿನಲ್ಲಿ ಮುಖ್ಯವಾಗಿದ್ದು ಈ ಕುರಿತು ಪ್ರಕಟಿಸಿದ ಶಕ್ತಿಕಾಂತ್ ದಾಸ್, ರೆಪೊ ದರವನ್ನು 40 ಬೇಸಿಸ್ ಪಾಯಿಂಟ್ ಗಳಂತೆ ಶೇಕಡಾ 4.4ರಿಂದ ಶೇಕಡಾ 4ಕ್ಕೆ ಇಳಿಸಿದ್ದಾರೆ. ರಿವರ್ಸ್ ರೆಪೊ ದರ ಶೇಕಡಾ 3.35ರಷ್ಟಾಗಿದೆ ಈಗ.

ಅಲ್ಲದೆ ಲಾಕ್‌ ಡೌನ್‌ ಅವಧಿಯಲ್ಲಿ ದೇಶದ ಕೃಷಿ ಮತ್ತು ಸಂಬಂಧಿತ ಚಟುವಟಿಕೆಯಲ್ಲಿ, ಆಹಾರ ಧಾನ್ಯ ಉತ್ಪಾದನೆಯಲ್ಲಿ ಶೇ.3.7ರಷ್ಟು ಹೆಚ್ಚಿದ್ದು, ಇದು ದೇಶಕ್ಕೆ ಭರವಸೆಯ ದಾರಿದೀಪವನ್ನು ತೋರಿದೆ ಎಂದಿದ್ದಾರೆ. ಸದ್ಯ ನಾಲ್ಕನೇ ಹಂತದ ಲಾಕ್‌ಡೌನ್‌ ಮೇ 31ರ ವರೆಗೆ ಜಾರಿಯಾಗಿರುವುದರಿಂದ ಈ ಅವಧಿಯಲ್ಲಿ ಆರ್‌ಬಿಐ ಸಾಲವನ್ನು ಯಾರು ಮರುಪಾವತಿ ಮಾಡುವ ಅಗತ್ಯ ಇಲ್ಲ ಎಂದಿದ್ದಾರೆ. ಅಲ್ಲದೆ, ಪ್ರಧಾನಿ ಮೋದಿ ಘೋಷಿಸಿದ 20 ಲಕ್ಷ ಕೋಟಿ ಪ್ಯಾಕೇಜ್ ಪೈಕಿ 8 ಲಕ್ಷ ಕೋಟಿ ಮೊತ್ತದ ಲಿಕ್ವಿಡಿಟಿ ಕ್ರಮಗಳನ್ನು ಆರ್‌ಬಿಐ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ.

Click here Support Free Press and Independent Journalism

Pratidhvani
www.pratidhvani.com