ಕರೋನಾ ಮರಣ ಮೃದಂಗಕ್ಕೆ ಬಳಲಿ ಹೋದ ವಾಣಿಜ್ಯ ನಗರಿ!
ರಾಷ್ಟ್ರೀಯ

ಕರೋನಾ ಮರಣ ಮೃದಂಗಕ್ಕೆ ಬಳಲಿ ಹೋದ ವಾಣಿಜ್ಯ ನಗರಿ!

ವಾಣಿಜ್ಯ ನಗರಿ ಮುಂಬೈಯಲ್ಲಿ ಕರೋನಾ ಸೋಂಕಿತರ ಸಂಖ್ಯೆ ಕ್ಷಿಪ್ರಗತಿಯಲ್ಲಿ ಏರತೊಡಗಿದೆ. ಕಳೆದ 24 ಗಂಟೆಯಲ್ಲಿ 2,940 ಹೊಸ ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 44,582ಕ್ಕೆ ಏರಿದೆ.

ಪ್ರತಿಧ್ವನಿ ವರದಿ

ದೇಶದಲ್ಲಿಯೇ ಅತ್ಯಂತ ಕ್ಷಿಪ್ರಗತಿಯಲ್ಲಿ ಸೋಂಕು ಹರಡುತ್ತಿರುವುದು ಮಹಾರಾಷ್ಟ್ರದಲ್ಲಾಗಿದ್ದು, ಇಂದು ಒಂದೇ ದಿವಸ ರಾಜ್ಯಾದ್ಯಂತ 2490 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದು ಮಹಾರಾಷ್ಟ್ರದಲ್ಲಿ ಸೋಂಕು ಸಾಮುದಾಯಿಕ ಹಂತಕ್ಕೆ ತಲುಪಿರುವ ಆತಂಕ ತಂದಿರಿಸಿದೆ. ಇದರಿಂದಾಗಿ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಅನ್ನೋದು 44,582ಕ್ಕೆ ಏರಿಕೆ ಆಗಿದೆ. ಅಲ್ಲದೇ 63 ಮಂದಿ ಹೊಸದಾಗಿ ಬಲಿಯಾಗಿದ್ದು, ಸಾವಿನ ಸಂಖ್ಯೆ 1517ಕ್ಕೆ ಏರಿಕೆಯಾಗಿದೆ. ಮಾಯಾನಗರಿ ಮುಂಬೈಯೊಂದರಲ್ಲೇ 27,251 ಪ್ರಕರಣಗಳು ಪತ್ತೆಯಾಗುತ್ತಿದ್ದು ಆತಂಕ ಮನೆ ಮಾಡಿದೆ. ಅಲ್ಲದೇ ಮಹಾರಾಷ್ಟ್ರ ರಾಜ್ಯದಲ್ಲಿಯೇ ನಡೆದ 1,571 ಸಾವು ಪ್ರಕರಣಗಳಲ್ಲಿ 909 ಸಾವು ಮುಂಬೈಯೊಂದರಲ್ಲೇ ನಡೆದಿದೆ.

ಹೀಗಿದ್ದೂ, ಆರ್ಥಿಕ ಕುಸಿತ ಸರಿದೂಗಿಸಲು ಮುಂಬೈ ಸ್ಥಳೀಯ ಆಡಳಿತ ಆನ್‌ಲೈನ್‌ ಮೂಲಕ ಆಲ್ಕೋಹಾಲ್‌ ಡೆಲಿವೆರಿ ನೀಡುತ್ತಿದೆ. ಇನ್ನು ದೇಶದಲ್ಲಿ ಕರೋನಾ ಸೋಂಕಿತರ ಸಂಖ್ಯೆಯು 1,24,073ಕ್ಕೆ ಏರಿಕೆ ಕಂಡಿದೆ. ಜೊತೆಗೆ 51,302 ಮಂದಿ ರೋಗಿಗಳು ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ 3,707 ನ್ನು ತಲುಪಿದೆ.

Click here Support Free Press and Independent Journalism

Pratidhvani
www.pratidhvani.com