ʻಲಾಕ್‌ಡೌನ್ ಮೋದಿಯ ವಿಫಲ ಪ್ರಯತ್ನʼ : ತಪ್ಪಡ್ ನಿರ್ದೇಶಕ ಅನುಭವ್ ಸಿನ್ಹಾ ಅಭಿಮತ
ರಾಷ್ಟ್ರೀಯ

ʻಲಾಕ್‌ಡೌನ್ ಮೋದಿಯ ವಿಫಲ ಪ್ರಯತ್ನʼ : ತಪ್ಪಡ್ ನಿರ್ದೇಶಕ ಅನುಭವ್ ಸಿನ್ಹಾ ಅಭಿಮತ

ಪ್ರಧಾನಿ ಮೋದಿಯ ಲಾಕ್ ಡೌನ್ ನಿರ್ಧಾರ ವಲಸೆ ಕಾರ್ಮಿಕರಿಗೆ ಮತ್ತು ಬಡವರಿಗೆ ಕಠಿಣವಾಗಿ ಪರಿಣಮಿಸಿದೆ ಎಂಬುದು ನಿರ್ದೇಶಕ ಅನುಭವ್ ಸಿನ್ಹಾರ ಟ್ವೀಟಿನ ಒಳಮರ್ಮ. ಇದೇ ಸಮಯದಲ್ಲಿ ವಿದೇಶದಲ್ಲಿರುವ ಭಾರತೀಯರನ್ನು ಮರಳಿ ಕರೆತರಲು ವಿಶೇಷ ವಿಮಾನ ಏರ್ಪಡಿಸುವಾಗ ನಮ್ಮ ಕಣ್ಣೆದುರಿನ ವಲಸೆ ಕಾರ್ಮಿಕರನ್ನು ಸರ್ಕಾರ ನಿರ್ಲಕ್ಷಿಸಿದೆ ಎಂದಿದ್ದಾರೆ.

ಪ್ರತಿಧ್ವನಿ ವರದಿ

ದೇಶದಲ್ಲಿ ಕರೋನಾ ವೈರಸ್‌ ಹರಡುವುದನ್ನು ತಡಗಟ್ಟಲು ಲಾಕ್‌ ಡೌನ್‌ ಹೇರುವುದು ಪ್ರಧಾನಿ ಮೋದಿಯವರಿಗೆ ಅನಿವಾರ್ಯವಾಗಿತ್ತು. ಆದರೆ ಎಷ್ಟರ ಮಟ್ಟಿಗೆ ಲಾಕ್‌ ಡೌನ್‌ ಸಕ್ಸಸ್‌ ಆಗಿದೆ ಎಂದರೆ ಆರ್ಥಿಕತೆಯ ದೊಡ್ಡ ಪ್ರಶ್ನೆ ದೇಶದ ಕಣ್ಣೆದುರಿಗಿದೆ. ಈ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿದೆ. ಈತನ್ಮಧ್ಯೆ, ಬಾಲಿವುಡ್‌ ಸಿನಿಮಾ ನಿರ್ದೇಶಕ ಅನುಭವ್‌ ಸಿನ್ಹಾ ಮೋದಿಯ ಲಾಕ್‌ಡೌನ್‌ ಎಂಬುವುದು ಒಂದು ವಿಫಲ ಪ್ರಯತ್ನ ಎಂದಿದ್ದಾರೆ.

“ಕಳೆದ 45 ದಿನಗಳಲ್ಲಿ ಕೇಂದ್ರ ಸರ್ಕಾರ ಟಿವಿ ನೋಡಿದ್ದಾರೆ ಎಂದು ನಂಬಿದ್ದೇನೆ. ಗರ್ಭಿಣಿಯರು, ಮಕ್ಕಳು ಊಟವಿಲ್ಲದೆ, ನೀರಿಲ್ಲದೆ, ಕೈಯಲ್ಲಲಿ ದುಡ್ಡಿಲ್ಲದೆ ಊರು ಸೇರಲು ಸಾವಿರಾರು ಕಿಲೋ ಮೀಟರ್‌ ದೂರ ನಡೆದಿದ್ದಾರೆ. ನೀವು ಟಿವಿಯ ಮುಂದೆ ಅಂದವಾಗಿ ಬಂದು ಕೂರುವಾಗ ಅವರನ್ನ ದಯವಿಟ್ಟು ನೆನಪಿಸಿಕೊಳ್ಳಿ. ಲಾಕ್‌ ಡೌನ್‌ ಮೋದಿಯ ವಿಫಲ ಪ್ರಯತ್ನ.” ಎಂದು ಅನುಭವ್‌ ಸಿನ್ಹಾ ಟ್ವೀಟ್‌ ಮಾಡಿದ್ದಾರೆ.

ಪ್ರಧಾನಿ ಮೋದಿಯ ಲಾಕ್‌ ಡೌನ್‌ ನಿರ್ಧಾರ ವಲಸೆ ಕಾರ್ಮಿಕರಿಗೆ ಮತ್ತು ಬಡವರಿಗೆ ಕಠಿಣವಾಗಿ ಪರಿಣಮಿಸಿದೆ ಎಂಬುದು ನಿರ್ದೇಶಕ ಅನುಭವ್‌ ಸಿನ್ಹಾರ ಟ್ವೀಟಿನ ಒಳಮರ್ಮ. ಇದೇ ಸಮಯದಲ್ಲಿ ವಿದೇಶದಲ್ಲಿರುವ ಭಾರತೀಯರನ್ನು ಮರಳಿ ಕರೆತರಲು ವಿಶೇಷ ವಿಮಾನ ಏರ್ಪಡಿಸುವಾಗ ನಮ್ಮ ಕಣ್ಣೆದುರಿನ ವಲಸೆ ಕಾರ್ಮಿಕರನ್ನು ಸರ್ಕಾರ ನಿರ್ಲಕ್ಷಿಸಿದೆ ಎಂದಿದ್ದಾರೆ. ಅನುಭವ್‌ ಸಿನ್ಹಾ ಮಾಡಿರುವ ಟ್ವೀಟ್‌ 2,600 ಬಾರಿ ರಿಟ್ವೀಟ್‌ ಆಗಿದೆ. ಅನುಭವ್‌ ಸಿನ್ಹಾರ ಈ ಟ್ವೀಟ್‌ ಗೆ ಹಿರಿಯ ಪತ್ರಕರ್ತೆ ಬರ್ಖಾ ದತ್ತ್‌ ಅವರೂ ರಿಟ್ವೀಟ್‌ ಮಾಡಿದ್ದಾರೆ. ಅಂದಹಾಗೆ ಅನುಭವ್‌ ಸಿನ್ಹಾ ತಪ್ಪಡ್‌ ಸಿನಿಮಾದ ನಿರ್ದೇಶಕ.

ಅನುಭವ್‌ ಸಿನ್ಹಾ ಒಬ್ಬರೇ ಈ ರೀತಿಯಾದ ಟ್ವೀಟ್‌ ಮಾಡಿಲ್ಲ. ಖ್ಯಾತ ಬರಹಗಾರ ಜಾವೆದ್‌ ಅಖ್ತರ್‌ ಕೂಡ ಮೋದಿಯ ಲಾಕ್‌ಡೌನ್‌ ಬಗ್ಗೆ ಕಿಡಿಕಾರಿದ್ದಾರೆ. ಈ ಬಗ್ಗೆ ಈ ಟ್ವೀಟ್‌ ಮಾಡಿದ ಅವರು, “20 ಲಕ್ಷ ಕೋಟಿ ಪ್ಯಾಕೇಜ್ ಖಂಡಿತವಾಗಿಯೂ ರಾಷ್ಟ್ರಕ್ಕೆ ನೈತಿಕ ಹೆಗ್ಗಳಿಕೆಯಾಗಿದೆ. ಆದರೆ ಮೋದಿಯವರ 33 ನಿಮಿಷಗಳ ಭಾಷಣದಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರ ದುಃಸ್ಥಿತಿಯ ಬಗ್ಗೆ ಒಂದು ಮಾತು ಕೂಡ ಮೋದಿ ಎತ್ತಲಿಲ್ಲ” ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಲಾಕ್‌ ಡೌನ್‌ ನ ಒಟ್ಟು ಪರಿಣಾಮ ವಲಸೆ ಕಾರ್ಮಿಕರ ಮೇಲೆ ಕೆಟ್ಟದಾಗಿ ಬಿದ್ದಿದೆ. ಇನ್ನಾದರು ಕೇಂದ್ರ ಸರ್ಕಾರ ಬಣ್ಣದ ಮಾತುಗಳನ್ನು ಬದಿಗಿಟ್ಟು ಬಡವರ, ಕಾರ್ಮಿಕರ, ಮಹಿಳೆಯರ ಬಗ್ಗೆ ಗಮನಹರಿಸಬೇಕಿದೆ.

Click here Support Free Press and Independent Journalism

Pratidhvani
www.pratidhvani.com