ಮೇ 22ಕ್ಕೆ ವಿಪಕ್ಷದ ಸಭೆ ಕರೆದ ಸೋನಿಯಾ ಗಾಂಧಿ.!
ರಾಷ್ಟ್ರೀಯ

ಮೇ 22ಕ್ಕೆ ವಿಪಕ್ಷದ ಸಭೆ ಕರೆದ ಸೋನಿಯಾ ಗಾಂಧಿ.!

ಈ ಲಾಕ್‌ ಡೌನ್‌ ಅವಧಿಯಲ್ಲಿ ಅಪಾರ ತೊಂದರೆ ಎದುರಿಸಿದವರು ವಲಸೆ ಕಾರ್ಮಿಕರು. ಇವರ ಕುರಿತು ಸಭೆಯಲ್ಲಿ ಮಹತ್ವದ ತೀರ್ಮಾನಗಳು ಮತ್ತು ವಿಪಕ್ಷಗಳ ಜವಾಬ್ದಾರಿಯ ಕುರಿತು ಮುಖ್ಯವಾಗಿ ಚರ್ಚೆಯಾಗಲಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿದೆ.

ಪ್ರತಿಧ್ವನಿ ವರದಿ

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮೇ 22ಕ್ಕೆ ವಿಪಕ್ಷದ ಸಭೆ ಕರೆದಿದ್ದಾರೆ. ಕರೋನಾ ವೈರಸ್‌, ಲಾಕ್‌ ಡೌನ್‌ ಹಾಗೂ ವಲಸೆ ಕಾರ್ಮಿಕರ ಬಗ್ಗೆ ಸಭೆಯಲ್ಲಿ ಚರ್ಚೆಯಾಗಲಿರುವ ವಿಚಾರಗಳು. ಮೇ 22ರಂದು ಮಧ್ಯಾಹ್ನ 3ರ ಹೊತ್ತಿಗೆ ವೀಡಿಯೋ ಕಾನ್ಫರೆನ್ಸ್‌ ಮೂಲಕ ಸೋನಿಯಾ ಗಾಂಧಿ ಸಭೆ ನಡೆಸಲಿದ್ದಾರೆ.

ಈ ಲಾಕ್‌ ಡೌನ್‌ ಅವಧಿಯಲ್ಲಿ ಅಪಾರ ತೊಂದರೆ ಎದುರಿಸಿದವರು ವಲಸೆ ಕಾರ್ಮಿಕರು. ಇವರ ಕುರಿತು ಸಭೆಯಲ್ಲಿ ಮಹತ್ವದ ತೀರ್ಮಾನಗಳು ಮತ್ತು ವಿಪಕ್ಷಗಳ ಜವಾಬ್ದಾರಿಯ ಕುರಿತು ಮುಖ್ಯವಾಗಿ ಚರ್ಚೆಯಾಗಲಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿದೆ.

ಇನ್ನು ಈ ಸಭೆಯಲ್ಲಿ ಎನ್‌ಸಿಪಿ ಮುಖ್ಯಸ್ಥ ಶರಾದ್‌ ಪವರ್‌, ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೋರೆನ್‌, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಿಎಂಕೆ ನಾಯಕ ಎಂಕೆ ಸ್ಟಾಲಿನ್‌, ಸಿಪಿಐ(ಎಮ್)‌ ನಾಯಕ ಸಿತರಾಂ ಯೆಚೂರಿ, ಆರ್‌ಜೆಡಿಯ ತೇಜಸ್ವಿ ಯಾದವ್‌ ಸೇರಿದಂತೆ ಸುಮಾರು 20 ಪಕ್ಷದ ನಾಯಕರುಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Click here Support Free Press and Independent Journalism

Pratidhvani
www.pratidhvani.com