100 ಕೋವಿಡ್-19 ಬಾಧಿತ ಮಹಿಳೆಯರ ಹೆರಿಗೆಗೆ ಸಾಕ್ಷಿಯಾದ ನಾಯರ್ ಆಸ್ಪತ್ರೆ.!
ರಾಷ್ಟ್ರೀಯ

100 ಕೋವಿಡ್-19 ಬಾಧಿತ ಮಹಿಳೆಯರ ಹೆರಿಗೆಗೆ ಸಾಕ್ಷಿಯಾದ ನಾಯರ್ ಆಸ್ಪತ್ರೆ.!

ಹೆರಿಗೆಯಾದ ಬಳಿಕವೂ ಮಕ್ಕಳನ್ನು ತಾಯಿಗೆ ಬೇರ್ಪಡಿಸಿ ದೂರ ಇಟ್ಟಿಲ್ಲ. ತಾಯಿ ಮಗುವನ್ನೂ ಒಂದೇ ಕೊಠಡಿಯಲ್ಲಿ ಇಡಲಾಗಿದೆ. ಇದರಿಂದ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ ವೈದ್ಯರು. ಅಲ್ಲದೇ ಸೋಂಕು ಬಾಧಿತ ತಾಯಿಯೇ ಮಗುವಿಗೆ ಹಾಲುಣಿಸಲಿ ಎಂದು ವೈದ್ಯರು ಸೂಚಿಸಿದ್ದಾರಂತೆ.

ಪ್ರತಿಧ್ವನಿ ವರದಿ

ಮುಂಬೈನ ನಾಯರ್‌ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ಕರೋನಾ ವೈರಸ್‌ ಬಾಧಿತ ತಾಯಿ ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಮಗು 2.7 ಕೆ.ಜಿ ತೂಕವಿದ್ದು ಆರೋಗ್ಯವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಈ ಮೂಲಕ ನಾಯರ್‌ ಆಸ್ಪತ್ರೆ 100 ಕೋವಿಡ್‌ 19 ಬಾಧಿತ ಮಹಿಳೆಯರ ಹೆರಿಗೆಗೆ ಸಾಕ್ಷಿಯಾಗಿದೆ. ಆದರೆ ಯಾವ ಮಗುವಿಗೂ ಕೂಡ ಸೋಂಕು ದೃಢ ಪಟ್ಟಿಲ್ಲ. ಎಲ್ಲಾ ಮಕ್ಕಳು ಕೂಡ ಆರೋಗ್ಯವಾಗಿದ್ದಾರೆ. ತಾಯಿಗೆ ಸೋಂಕು ಇದೆ ಎಂದ ಮಾತ್ರ ಮಗುವಿಗೂ ಸೋಂಕು ತಗುಲಬೇಕು ಎಂದೇನಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಹೆರಿಗೆಯಾದ ಬಳಿಕವೂ ಮಕ್ಕಳನ್ನು ತಾಯಿಗೆ ಬೇರ್ಪಡಿಸಿ ದೂರ ಇಟ್ಟಿಲ್ಲ. ತಾಯಿ ಮಗುವನ್ನೂ ಒಂದೇ ಕೊಠಡಿಯಲ್ಲಿ ಇಡಲಾಗಿದೆ. ಇದರಿಂದ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ ವೈದ್ಯರು. ಅಲ್ಲದೇ ಸೋಂಕು ಬಾಧಿತ ತಾಯಿಯೇ ಮಗುವಿಗೆ ಹಾಲುಣಿಸಲಿ ಎಂದು ವೈದ್ಯರು ಸೂಚಿಸಿದ್ದಾರಂತೆ. ಆದರೆ ಮಗುವನ್ನಾಗಲಿ ತಾಯಿಯನ್ನಾಗಲಿ ನೋಡಲು ಯಾರಿಗೂ ಅವಕಾಶ ಇಲ್ಲ.

ಹೆರಿಗೆಯಾದ 24 ಗಂಟೆಯ ಬಳಿಕ ಮಗುವನ್ನು ಕೋವಿಡ್‌ 19 ಪರೀಕ್ಷೆಗ ಒಳಪಡಿಸಲಾಗುತ್ತಿದೆ. ಈ ವೇಳೆ ಕರೋನಾ ಹೊರತಾಗಿಯೂ ಬೇರೆ ಯಾವ ಅನಾರೋಗ್ಯ ಕಂಡು ಬಂದರೂ ಕೂಡ ತಾಯಿಂದ ಮಗುವನ್ನು ದೂರ ಇಡುತ್ತೇವೆ. ಆದರೆ ಮಗುವಿಗೆ ಯಾವುದೇ ಸಮಸ್ಯೆ ಇಲ್ಲ, ತೂಕ, ಆರೋಗ್ಯ ಎಲ್ಲವೂ ನಿರ್ಧಿಷ್ಟವಾಗಿದ್ದರೆ ಮಗುವನ್ನು ತಾಯಿಯ ಜೊತೆಗೇ ಇಟ್ಟು, ಅವರ ಮೇಲೆ ನಿಗಾ ಇಡಲಾಗುತ್ತದೆ ಎಂದು ನಾಯರ್‌ ಆಸ್ಪತ್ರೆಯ ಮುಖ್ಯ ವೈದ್ಯೆ ಸುಷ್ಮಾ ಮಾಲಿಕ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Click here Support Free Press and Independent Journalism

Pratidhvani
www.pratidhvani.com