ವಲಸೆ ಕಾರ್ಮಿಕರಿಗೆ 1 ಸಾವಿರ ಬಸ್ ವ್ಯವಸ್ಥೆ ಮಾಡಿದ ಪ್ರಿಯಾಂಕ ಗಾಂಧಿ
ರಾಷ್ಟ್ರೀಯ

ವಲಸೆ ಕಾರ್ಮಿಕರಿಗೆ 1 ಸಾವಿರ ಬಸ್ ವ್ಯವಸ್ಥೆ ಮಾಡಿದ ಪ್ರಿಯಾಂಕ ಗಾಂಧಿ

ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಅವರು ವಲಸೆ ಕಾರ್ಮಿಕರಿಗೆ 1 ಸಾವಿರ ಬಸ್ ವ್ಯವಸ್ಥೆಯನ್ನು ಒದಗಿಸಿಕೊಟ್ಟಿದ್ದಾರೆ. ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವನೀಶ್ ಅವಸ್ಥಿ ಅವರು ಈ ಮನವಿಯನ್ನು ಪುರಸ್ಕರಿಸಿದ್ದಾರೆ. ರಾಜ್ಯದ ನಾಯ್ಡ, ಘಾಝಿಪುರ್, ಘಾಝಿಯಬಾದ್ ಮುಂತಾದ ಸ್ಥಳದಲ್ಲಿ ಸಿಲುಕಿಕೊಂಡಿರುವ ಜನರನ್ನು ಅವರರ ಊರು ಸೇರಲು ಈ ವ್ಯವಸ್ಥೆ ಸಹಕಾರಿಯಾಗಲಿದೆ.

ಪ್ರತಿಧ್ವನಿ ವರದಿ

ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಅವರು ವಲಸೆ ಕಾರ್ಮಿಕರಿಗೆ 1 ಸಾವಿರ ಬಸ್‌ ವ್ಯವಸ್ಥೆಯನ್ನು ಒದಗಿಸಿಕೊಟ್ಟಿದ್ದಾರೆ. ಆದರೆ ಇದು ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ. ಯುಪಿಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ತೆರಳು ದುಡಿಯುತ್ತಿರುವವ ಸಂಖ್ಯೆ ಬಹಳ ಹೆಚ್ಚಿದೆ. ಈ ಹಿನ್ನೆಲೆ ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ಅವರವರ ಊರಿಗೆ ತಲುಪಿಸಲು ಪ್ರಿಯಾಂಕ ಗಾಂಧಿ ಮುಂದಾಗಿದ್ದಾರೆ.

ಹೀಗೊಂದು ಮನವಿಯನ್ನು ಪ್ರಿಯಾಂಕ ಗಾಂಧಿ ಪಿಎ ಉತ್ತರಪ್ರದೇಶ ಸರ್ಕಾರದ ಮುಂದಿಟ್ಟಾಗ ಮೊದಲು ಸರ್ಕಾರ ಇದನ್ನ ತಿರಸ್ಕರಿಸಿತು. ಆ ಬಳಿಕದ ಮಾತುಕತೆಯಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವನೀಶ್‌ ಅವಸ್ಥಿ ಅವರು ಈ ಮನವಿಯನ್ನು ಪುರಸ್ಕರಿಸಿದ್ದಾರೆ. ರಾಜ್ಯದ ನಾಯ್ಡ, ಘಾಝಿಪುರ್‌, ಘಾಝಿಯಬಾದ್‌ ಮುಂತಾದ ಸ್ಥಳದಲ್ಲಿ ಸಿಲುಕಿಕೊಂಡಿರುವ ಜನರನ್ನು ಅವರರ ಊರು ಸೇರಲು ಈ ವ್ಯವಸ್ಥೆ ಸಹಕಾರಿಯಾಗಲಿದೆ. ಮೊದಲು 500 ಬಸ್‌ ವ್ಯವಸ್ಥೆ ಮಾಡಲಾಗಿತ್ತಾದರೂ, ಆ ಬಳಿಕ ಯೋಗಿ ಆದಿತ್ಯನಾಥ್‌ ಅವರಿಗೆ ಪತ್ರ ಬರೆದ ಪ್ರಿಯಾಂಕ ವಾದ್ರಾ ಹೆಚ್ಚಿನ ಬಸ್‌ ವ್ಯವಸ್ಥೆ ಕಲ್ಪಿಸಿಲು ಅನುವುಮಾಡಿಕೊಡಿ ಎಂದು ಕೇಳಿಕೊಂಡರು.

ಆದರೆ ಸಿಎಂ ಯೋಗಿ ಆದಿತ್ಯನಾಥ್‌ ಅವರು ಅನುಮತಿ ನೀಡಿದೆ ರಾಜಕೀಯ ಮಾಡಿದ್ದರು. ಹೀಗಾಗಿ ವೀಡಿಯೋ ಕಾನ್ಫರೆನ್ಸ್‌ ಮೂಲಕ ಪತ್ರಕರ್ತರೊಂದಿಗೆ ಮಾತನಾಡಿದ ಪ್ರಿಯಾಂಕ ವಾದ್ರಾ “ಇದು ರಾಜಕೀಯ ಮಾಡುವ ಸಮಯವಲ್ಲ. ನಮ್ಮ ಬಸ್‌ ಬಾರ್ಡರ್‌ಗಳಲ್ಲಿ ನಿಂತಿದೆ. ನಿಮ್ಮ ಅನುಮತಿಯಷ್ಟೇ ಬೇಕಿರುವುದು. ಬಡವರ ಸೇವೆಗೆ ಅವಕಾಶ ಮಾಡಿಕೊಡಿ” ಎಂದು ಹೇಳಿದ್ದರು. ಅಂತೆಯೇ ಉತ್ತರಪ್ರದೇಶದ ಸರ್ಕಾರದ ಅನುಮತಿಯೊಂದಿಗೆ 1000 ಬಸ್‌ ಗಳು ವಲಸೆ ಕಾರ್ಮಿಕರನ್ನು ಅವರರ ಗೂಡು ಸೇರಿಸುವಲ್ಲಿ ನಿರತವಾಗಿದೆ.

Click here Support Free Press and Independent Journalism

Pratidhvani
www.pratidhvani.com