BSF ಮುನ್ನಡೆಸುವ IPS ನಾಯಕತ್ವದಲ್ಲಿ ಎದ್ದು ಕಾಣುತ್ತಿದೆ ʼಮಿಲಿಟರಿ ತಂತ್ರಜ್ಞಾನʼದ ಕೊರತೆ
ರಾಷ್ಟ್ರೀಯ

BSF ಮುನ್ನಡೆಸುವ IPS ನಾಯಕತ್ವದಲ್ಲಿ ಎದ್ದು ಕಾಣುತ್ತಿದೆ ʼಮಿಲಿಟರಿ ತಂತ್ರಜ್ಞಾನʼದ ಕೊರತೆ

ಗಡಿ ರೇಖೆಯ ಮೊದಲ ಸಾಲಿನಲ್ಲಿ ಕಾಣಸಿಗುವ BSF ಇಂದಿಗೂ ಐಪಿಎಸ್‌ ನೇತೃತ್ವದಲ್ಲಿ ಮುನ್ನಡೆಯುತ್ತಿದ್ದು, ಆದ್ದರಿಂದ ಐಪಿಎಸ್‌ ನಾಯಕತ್ವವು ʼಮಿಲಿಟರಿ ತಂತ್ರಜ್ಞಾನʼ ಅನುಭವದ ಕೊರತೆ ಎದುರಿಸುತ್ತಿದೆ. ಹೀಗಂತ ಐಪಿಎಸ್‌ ಅಧಿಕಾರಿ, CRPF ಹಾಗೂ BSF ಎಡಿಜಿಪಿ ಆಗಿದ್ದ Dr.NC ಅಸ್ತಾನ ʼದಿ ವೈರ್‌ʼ ಗೆ ಬರೆದ ಲೇಖನದಲ್ಲಿ ಸವಿವರವಾಗಿ ವಿವರಿಸಿದ್ದಾರೆ.

ಮೊಹಮ್ಮದ್‌ ಇರ್ಷಾದ್‌

ಗಡಿ ಭದ್ರತಾ ಪಡೆ (BSF) ದೇಶದ ಗಡಿಯಲ್ಲಿ ನಡೆಯಬಹುದಾದ ಒಳನುಸುಳುವಿಕೆ, ಸ್ಮಗ್ಲಿಂಗ್‌ ಹಾಗೂ ಇನ್ನಿತರ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಿಸಲೆಂದೇ ಗಡಿಯಲ್ಲಿ ಮೊದಲ ಸಾಲಿನಲ್ಲಿ ಕಾಣಸಿಗುವ ಪಡೆಯಾಗಿದೆ. ಅಧಿಕೃತವಾಗಿಯೂ BSF ಕಾರ್ಯಚಟುವಟಿಕೆಯನ್ನ ಗಡಿ ಭದ್ರತೆ ಹಾಗೂ ಅದಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಉಲ್ಲೇಖವಿದೆ. ಅಲ್ಲದೇ BSF ಅನ್ನು ಎರಡು ವಿಭಾಗಗಳಾಗಿ ಒಂದು ʼಶಾಂತಿ ಕಾಲʼದ ಹಾಗೂ ʼಯುದ್ಧ ಸಮಯʼದ BSF ಎಂದು ವಿಭಜಿಸಲಾಗಿದೆ. ʼಶಾಂತಿ ಸಮಯʼ ದ BSF ಪ್ರಮುಖವಾಗಿ ಸ್ಮಗ್ಲಿಂಗ್‌ ಹಾಗೂ ಒಳನುಸುಳುವಿಕೆ ಮತ್ತು ಗಡಿಯಿಂದ ಹೊರಹೋಗುವಿಕೆ ಜೊತೆಗೆ ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ನಿಗಾವಿಟ್ಟಿರುತ್ತದೆ.

ಇನ್ನು ಯುದ್ಧ ಸಮಯದಲ್ಲಿ BSF ಕಡಿಮೆ ಬೆದರಿಕೆ ಇರುವ ಪ್ರದೇಶದಲ್ಲಿ ಇರುತ್ತದೆ. 1965 ಇಂಡೋ-ಪಾಕ್‌ ಕದನವಾಗುವವರೆಗೂ ಪಾಕಿಸ್ತಾನ ಗಡಿಯಲ್ಲಿ ರಾಜ್ಯ ಸಶಸ್ತ್ರ ಪೊಲೀಸ್‌ ಬೆಟಾಲಿಯನ್‌ ಅನ್ನೋ ನಿಯೋಜನೆಗೊಳಿಸಲಾಗಿತ್ತು. ಯುದ್ಧದ ಬಳಿಕ BSF ಪಡೆಯನ್ನ ಸ್ಥಾಪಿಸಿ ಆ ಸಿಬ್ಬಂದಿಗಳನ್ನ ನಿಯೋಜಿಸಲಾಯಿತು. ಈ ಮೂಲಕ ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ ಬಳಿಯ ಆಧುನಿಕ ಶಸ್ತ್ರಾಸ್ತ್ರಗಳನ್ನ ಹೊಂದಿರುವ ಪಡೆಯನ್ನ ಗಡಿ ಭದ್ರತೆಗಾಗಿ ನಿಯೋಜಿಸಲಾಯಿತು. ಆ ಸಮಯದಲ್ಲಿ ಬಂಡುಕೋರರ ಅಥವಾ ಉಗ್ರಗಾಮಿಗಳ ಸಮಸ್ಯೆ ಇರಲಿಲ್ಲ. ಆದರೆ ಕಳ್ಳ ಸಾಗಾಣಿಕೆ ಹಾಗೂ ಇನ್ನಿತರ ಕಾನೂನು ವಿರೋಧಿ ಚಟುವಟಿಕೆಗಳು ವ್ಯಾಪಕವಾಗಿ ನಡೆಯುತ್ತಿತ್ತು. ಆದರೆ 1965 ಯುದ್ಧಕ್ಕೆ ಅದು ಕಾರಣವಾಗಿರಲಿಲ್ಲ. 1965 ರ ನಂತರ ಶತ್ರು ರಾಷ್ಟ್ರಗಳ ದಾಳಿಗೆ ಎದುರಾಗಿ BSF ತನ್ನ ಕಾರ್ಯಾಚರಣೆ ಆರಂಭಿಸಿತ್ತು.

ಇನ್ನು ಇದುವರೆಗೂ BSF ಅನ್ನು ಐಪಿಎಸ್‌ ಅಧಿಕಾರಿಗಳೇ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಆದರೆ ಪೊಲೀಸ್‌ ಹಿನ್ನೆಲೆಯ ಐಪಿಎಸ್‌ ಅಧಿಕಾರಿಗಳಿಗೆ ಮಿಲಿಟರಿ ತಾಂತ್ರಿಕತೆ ಬಗ್ಗೆ ಹೆಚ್ಚಿನ ಅರಿವಿರುವುದಿಲ್ಲ. ಆದ್ದರಿಂದ ಯುದ್ಧ ಸಮಯದಲ್ಲಿ ವೃತ್ತಿಪರವಾಗಿ ಮಾರ್ಗದರ್ಶನ ನೀಡಲು ಸಾಧ್ಯವಾಗದು, ಬದಲಾಗಿ ಶಾಂತಿ ಸಮಯದಲ್ಲಿ ಯಾವ ರೀತಿ BSF ಕಾರ್ಯನಿರ್ವಹಿಸುವುದು ಅನ್ನೋದರ ಬಗ್ಗೆಯೆ ಹೆಚ್ಚು ಫೋಕಸ್‌ ಮಾಡಲಾಗುತ್ತಿದೆ. ಆದರೆ ಯಾರೊಬ್ಬರೂ ಯುದ್ಧದ ಕಾಲದ ಬಗ್ಗೆ ಮಾತಾಡುವುದಿಲ್ಲ, ಅಥವಾ ಅದಕ್ಕೆ ಬೇಕಾದ ಸಿದ್ಧತೆ ಬಗ್ಗೆಯೂ ಚರ್ಚಿಸುವುದಿಲ್ಲ ಎಂದು ಐಪಿಎಸ್‌ ಅಧಿಕಾರಿ CRPF ಹಾಗೂ BSF ಎಡಿಜಿಪಿ ಆಗಿದ್ದ Dr.NC ಅಸ್ತಾನ ತಿಳಿಸುತ್ತಾರೆ.

2017 ರ ಎಪ್ರಿಲ್‌ನಲ್ಲಿ ಗೃಹ ವ್ಯವಹಾರಗಳ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿಯು ರಾಜ್ಯ ಸಭೆಗೆ ಸಲ್ಲಿಸಿದ ವರದಿಯಲ್ಲೂ BSF ಗಡಿಯಲ್ಲಿ ನಿರ್ವಹಿಸಿದ ಯುದ್ಧ ಕಾಲದ ಪಾತ್ರದ ಬಗ್ಗೆ ತಿಳಿಸಿಲ್ಲ. ʼಗಡಿ ಭದ್ರತೆ: ಸಾಮರ್ಥ್ಯ ಅಭಿವೃದ್ಧಿ ಮತ್ತು ಸಂಸ್ಥೆಗಳುʼ ಶೀರ್ಷಿಕೆಯಡಿ ಸಲ್ಲಿಕೆಯಾದ ಈ ವರದಿಯಲ್ಲಿ BSF ಶಾಂತಿ ಸಮಯದಲ್ಲಿ ಮಾಡಬಲ್ಲ ಚಟುವಟಿಕೆಗಳ ಬಗ್ಗೆಯಷ್ಟೇ ಬೆಳಕು ಚೆಲ್ಲಿದೆ ಎಂದು Dr.NC ಅಸ್ತಾನ ತಿಳಿಸಿದ್ದಾರೆ.

ಇನ್ನು ರಕ್ಷಣೆಯ ಮೊದಲ ಸಾಲಿನಲ್ಲಿರುವ ರಕ್ಷಣಾ ಆಕಾರಗಳು ಒಂದು ನಿಮಿಷವೂ ಶೆಲ್‌ ದಾಳಿಯನ್ನ ತಡೆಗಟ್ಟುವಲ್ಲಿ ಸಾಧ್ಯವಾಗದು. ಸಾಮಾನ್ಯವಾಗಿ ಗಡಿಗಳಲ್ಲಿ ತವರ ಹಾಳೆಗಳ ಇಲ್ಲವೇ ಮರಳು ದಿಬ್ಬಗಳನ್ನ ರಚಿಸಿದ ವೀಕ್ಷಣಾ ಗೋಪುರಗಳು ಇರುತ್ತವೆ. ಒಂದು ಶೆಲ್ ದಾಳಿಯನ್ನೂ ತಡೆಗಟ್ಟಲು ಸಾಧ್ಯವಾಗದು. ಶೆಲ್‌ ದಾಳಿಯೆನ್ನುವುದು ಶತ್ರು ರಾಷ್ಟ್ರ ನಡೆಸಬಲ್ಲ ನಿಖರ ದಾಳಿಯಾಗುವ ಸಾಧ್ಯತೆ ಇರುವುದರಿಂದ ಮರಳು ದಿಬ್ಬಗಳಿಂದ ರಚಿಸಿದ ವೀಕ್ಷಣಾ ಗೋಪುರ ಹಾಗೂ ಬಂಕರ್‌ಗಳು ಕ್ಷಣ ಮಾತ್ರಕ್ಕೆ ನಾಶವಾಗುವುದು. ಆದರೆ ಐಪಿಎಸ್‌ ಹಿನ್ನೆಲೆಯಿಂದ ಬಂದ ಅಧಿಕಾರಿಗಳಿಗೆ ಇದ್ಯಾವುದೂ ಸುಲಭವಾಗಿ ಅರ್ಥವಾಗದು.

ಅಲ್ಲದೇ ಕೆಲವರು ಐಪಿಎಸ್‌ ನಾಯಕತ್ವವು ಅಗತ್ಯವಿಲ್ಲವೆಂದೇ ವಾದಿಸುತ್ತಾರೆ. ಕಾರಣ, ಅವರಲ್ಲಿ ಯುದ್ಧ ಕೌಶಲ್ಯತೆ ಬಗ್ಗೆ ಜ್ಞಾನದ ಕೊರತೆ ಹಾಗೂ ಯುದ್ಧಕಾಲದಲ್ಲಿ BSF ನಿರ್ವಹಿಸಬಲ್ಲ ಪಾತ್ರವನ್ನ ಐಪಿಎಸ್‌ ನಾಯಕತ್ವವು ನಿರ್ಲಕ್ಷಿಸುತ್ತದೆ ಎನ್ನುವುದು Dr.NC ಅಸ್ತಾನ ಅವರ ಅಭಿಪ್ರಾಯ.

ಮಿಲಿಟರಿ ತಾಂತ್ರಿಕ ಜ್ಞಾನ ಅನ್ನೋದು ನಿರಂತರ ಅಧ್ಯಯನ ಇಲ್ಲವೇ ಸಾಂಸ್ಥಿಕವಾಗಿ ಕಲಿತರೆ ಮಾತ್ರ ಅದು ತಿಳಿಯುವ ವಿಚಾರವೇ ಹೊರತು, ಅದು UPSC ಉತ್ತೀರ್ಣವಾಗಿ ಬಂದ ಮಾತ್ರಕ್ಕೆ ತಿಳಿಯದು. ನೆಪೋಲಿಯನ್‌ ಹೇಳಿರುವ ಮಾತೊಂದು ನೆನಪಿಗೆ ಬರುತ್ತದೆ ಅದೇನೆಂದರೆ, “ಓದಿರಿ ಮತ್ತು ಪುನಃ ಓದಿರಿ, ಅಲೆಕ್ಸಾಂಡರ್‌, ಹ್ಯಾನಿಬೆಲ್‌, ಸೀಸರ್‌, ಅಡೋಲ್ಫ್, ಟುರೆನ್ನೆ, ಫೆಡೆರಿಕ್‌ ಮುಂತಾದವರ ನಾಯಕತ್ವದ ಇತಿಹಾಸವನ್ನ ಓದಿರಿ ಮತ್ತು ಯುದ್ಧ ಕಲೆಯಲ್ಲಿ ಅವರು ಹೊಂದಿದ್ದ ಸೀಕ್ರೆಟ್‌ಗಳನ್ನ ತಿಳಿಯಿರಿ”. ಮಿಲಿಟರಿ ತಂತ್ರಜ್ಞಾನ ಅನ್ನೋದನ್ನ ರಾಷ್ಟ್ರೀಯ ಪೊಲೀಸ್‌ ಅಕಾಡೆಮಿಗಳು ಹೇಳಿಕೊಡಲು ಸಾಧ್ಯವಿಲ್ಲ. ಆದ್ದರಿಂದ, ವಾಸ್ತವದಲ್ಲಿ BSF ಗೆ ನಿಯೋಜಿಸುವ ಮುನ್ನವೇ ಅವರ ಸಾಮರ್ಥ್ಯ ಪರೀಕ್ಷೆ ನಡೆಸಬೇಕು ಎಂದು Dr. NC ಅಸ್ತಾನ ಅಭಿಪ್ರಾಯಪಟ್ಟಿದ್ದಾರೆ.

ಕೃಪೆ: ದಿ ವೈರ್

Click here Support Free Press and Independent Journalism

Pratidhvani
www.pratidhvani.com