ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸಿರುವುದು ಆಘಾತ ತಂದಿದೆ- ಅಝೀಂ ಪ್ರೇಮ್‌ಜಿ
ರಾಷ್ಟ್ರೀಯ

ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸಿರುವುದು ಆಘಾತ ತಂದಿದೆ- ಅಝೀಂ ಪ್ರೇಮ್‌ಜಿ

ಕಳೆದ ಎರಡು ವಾರಗಳಲ್ಲಿ ಬಿಜೆಪಿ ನೇತೃತ್ವವಿರುವ ಗುಜರಾತ್‌, ಉತ್ತರ ಪ್ರದೇಶ ಹಾಗೂ ಮಧ್ಯ ಪ್ರದೇಶ ಸರ್ಕಾರಗಳು ನಾಟಕೀಯ ಬೆಳವಣಿಗೆಯಲ್ಲಿ ಕಾರ್ಮಿಕರ ಪರವಾಗಿರುವ ಕಾನೂನುಗಳನ್ನು ರದ್ದುಗೊಳಿಸಿತ್ತು. ಇದು ತಂದಿಡಬಲ್ಲಂತಹ ಅಪಾಯದ ಕುರಿತು ಭಾರತದ ಉದ್ಯಮಿ ಅಜೀಂ ಪ್ರೇಮ್‌ ಜಿ ಲೇಖನ ಬರೆದಿದ್ದಾರೆ.

ಪ್ರತಿಧ್ವನಿ ವರದಿ

ದುರ್ಬಲ ಕಾರ್ಮಿಕ ಕಾನೂನುಗಳನ್ನು ಹೇರಲು ಹಲವಾರು ರಾಜ್ಯ ಸರ್ಕಾರಗಳು ತೆಗೆದುಕೊಂಡ ನಿರ್ಧಾರವು ನನ್ನನ್ನು ಆಘಾತಕ್ಕೊಳಗಾಗಿಸಿತು. ಕಾರ್ಮಿಕ ಕಾನೂನುಗಳನ್ನು ಸಡಿಲಗೊಳಿಸುವುದರಿಂದ ಆರ್ಥಿಕ ಚಟುವಟಿಕೆಗಳು ಹೆಚ್ಚುವುದಿಲ್ಲ ಎಂದು ಭಾರತದ ಬಿಲಿಯೇನರ್‌ ಅಝೀಂ ಪ್ರೇಮ್ ಜಿ ಎಕಾನಾಮಿಕ್‌ ಟೈಮ್ಸ್‌ ಗೆ ಬರೆದ ಲೇಖನದಲ್ಲಿ ಹೇಳಿದ್ದಾರೆ.

ಔರಂಗಾಬಾದ್‌ ಅಪಘಾತ ಉಲ್ಲೇಖಿಸಿ ಈ ದುರಂತವು ನಮ್ಮ ಸಹ ನಾಗರೀಕರು ಅನುಭವಿಸುತ್ತಿರುವ ನೋವಿನ, ಬಡತನದ ಭೀಕರ ಗುರುತು ಎಂದು ಪ್ರೇಮ್‌ ಜಿ ಅಭಿಪ್ರಾಯ ಪಟ್ಟಿದ್ದಾರೆ.

ಇದು ನಮ್ಮ ಬದುಕಿನ ಸುತ್ತಲೂ ನಡೆಯುವ ವಾಸ್ತವ. ಹಾಗೂ ಅನೇಕ ರಾಜ್ಯಗಳು ಕೈಗಾರಿಕಾ ವಿವಾದ, ಔದ್ಯೋಗಿಕ ಭದ್ರತೆ, ಕಾರ್ಮಿಕರ ಕೆಲಸದ ಪರಿಸ್ಥಿತಿ, ಕನಿಷ್ಟ ವೇತನ ಗುತ್ತಿಗೆ ಹಾಗೂ ವಲಸೆ ಕಾರ್ಮಿಕರ ಪರವಾಗಿರುವ ಹಲವಾರು ಕಾನೂನುಗಳನ್ನು ರದ್ದುಪಡಿಸುತ್ತವೆ (ಈಗಾಗಲೇ ಕೆಲವು ರದ್ದು ಪಡಿಸಿವೆ) ಎಂದು ಕೇಳುವಾಗ ಆಘಾತವಾಗುತ್ತದೆ.

ಕಳೆದ ಎರಡು ವಾರಗಳಲ್ಲಿ ಬಿಜೆಪಿ ನೇತೃತ್ವವಿರುವ ಗುಜರಾತ್‌, ಉತ್ತರ ಪ್ರದೇಶ ಹಾಗೂ ಮಧ್ಯ ಪ್ರದೇಶ ಸರ್ಕಾರಗಳು ನಾಟಕೀಯ ಬೆಳವಣಿಗೆಯಲ್ಲಿ ಕಾರ್ಮಿಕರ ಪರವಾಗಿರುವ ಕಾನೂನುಗಳನ್ನು ರದ್ದುಗೊಳಿಸಿತ್ತು.

ಭಾರತದಲ್ಲಿ ಸಾಮಾಜಿಕ ಭದ್ರತೆ ಹಾಗೂ ಕಾರ್ಮಿಕರಿಗೆ ಕನಿಷ್ಟ ಭದ್ರತೆಯೂ ಇಲ್ಲದಿರುವುದರಿಂದ ಔರಾಂಗಾಬಾದ್‌ನಲ್ಲಿ ಹದಿನಾರು ಕಾರ್ಮಿಕರು ಮರಣಹೊಂದಿದ್ದಾರೆ ಎಂದು ಪ್ರೇಮ್‌ಜಿ ಹೇಳಿದ್ದಾರೆ.

ಕಳೆದ ಐವತ್ತು ವರ್ಷಗಳಿಂದ ಕಾರ್ಮಿಕ ಸಂಘ ಹಾಗೂ ಕಾರ್ಮಿಕ ಕಾನೂನುಗಳೊಂದಿಗೆ ವ್ಯವಹರಿಸುತ್ತಿದ್ದೇನೆ. ಕಳೆದ ಹಲವು ದಶಕಗಳಲ್ಲಿ ಹಲವಾರು ಕಾರ್ಮಿಕ ಕಾನೂನುಗಳು ಬದಲಾಗಿವೆ. ಆದರೆ ಇದು ಹೆಚ್ಚಿನ ಸಾಮಾಜಿಕ ಭದ್ರತೆಯನ್ನು ನೀಡಿಲ್ಲ. ಈಗ ನಡೆಯುತ್ತಿರುವ ಬೆಳವಣಿಗೆಗಳು ಈಗ ಇರುವ ಸಡಿಲ ಕಾನೂನುಗಳನ್ನು ಇನ್ನಷ್ಟು ದುರ್ಬಲಗೊಳಿಸುವುದರಿಂದ ಆರ್ಥಿಕ ಚಟುವಟಿಕೆಗಳು ಹೆಚ್ಚುವುದಿಲ್ಲ. ಬದಲಾಗಿ ಕಡಿಮೆ ವೇತನ ಪಡೆಯುವ ಕಾರ್ಮಿಕರನ್ನು ಹಾಗೂ ಬಡತನವನ್ನು ಹೆಚ್ಚಿಸುತ್ತದೆ.

ಇಂತಹ ನಡೆ ಕಾರ್ಮಿಕರು ಹಾಗೂ ಉದ್ಯಮಗಳನ್ನು ಪರಸ್ಪರ ವಿರುಧ್ಧ ದಿಕ್ಕಿನಲ್ಲಿ ಎಳೆಯುತ್ತದೆ. ಇದು ತಪ್ಪಾದ ಆಯ್ಕೆ. ಕಳೆದ ಕೆಲವು ವಾರಗಳ ಅನುಭವಗಳನ್ನೇ ನಾವು ಗಮನಿಸಿದರೆ, ವಲಸೆ ಕಾರ್ಮಿಕರೊಂದಿಗೆ ತೋರಿದ ವರ್ತನೆಗಳು ಕಾರ್ಮಿಕ ಹಾಗು ಉದ್ಯಮಗಳಿಗಿರುವ ಸಾಮಾಜಿಕ ಅಂತರವನ್ನು ಒಪ್ಪಿಕೊಂಡಿತು. ಅಲ್ಲದೆ ಕಾರ್ಮಿಕರಿಗೆ ಹಿಮ್ಮುಖ ವಲಸೆ ಮಾಡುವಂತೆ ಪ್ರಚೋದಿಸಿತು, ಇದು ಉದ್ಯಮಗಳ ನ್ನು ದುರ್ಬಲಗೊಳಿಸಿತು. ಆದ್ದರಿಂದ ಇಂತಹ ನಡೆಯು(ಕಾನೂನುಗಳ ರದ್ದು ಪಡಿಸುವಿಕೆ) ಅನ್ಯಾಯುತವಾದದ್ದು ಹಾಗೂ ನಿಷ್ಕ್ರಿಯವಾದದ್ದು. ಕಾರ್ಮಿಕರ ಹಿತಾಸಕ್ತಿ ಹಾಗೂ ವ್ಯವಹಾರಗಳು ಆಳವಾಗಿ ಒಂದಕ್ಕೊಂದು ಬೆಸೆದುಕೊಂಡಿದೆ.

ಪ್ರತಿ ಬಡ ವಲಸೆ ಕಾರ್ಮಿಕರಿಗೆ ಮೂರು ತಿಂಗಳ ಕಾಲ 7 ಸಾವಿರ ನಗದನ್ನು ತುರ್ತು ಪರಿಹಾರವಾಗಿ ನೀಡಬೇಕು ಎಂದು ಅಝೀಂ ಪ್ರೇಮ್‌ ಜಿ ಬರೆದಿದ್ದಾರೆ.

"ಲಾಕ್‌ಡೌನ್ ಅವಧಿಗೆ ಎಲ್ಲಾ ಬಡ ನಗರವಾಸಿಗಳಿಗೆ ತಿಂಗಳಿಗೆ 25 ದಿನಗಳ ಕನಿಷ್ಠ ವೇತನವನ್ನು ಬಿಡುಗಡೆ ಮಾಡಬೇಕು ಮತ್ತು ಲಾಕ್‌ಡೌನ್ ಮುಗಿದ ನಂತರ ಕನಿಷ್ಠ ಎರಡು ತಿಂಗಳವರೆಗೆ. ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಎಲ್ಲಾ ಕ್ರಮಗಳನ್ನು ಖಾತ್ರಿಪಡಿಸಿಕೊಳ್ಳುವಾಗ, ತಮ್ಮ ಪ್ರಯಾಣದ ಯೋಜನೆಗಳನ್ನು ನಿರ್ಧರಿಸುವಲ್ಲಿ ಬಾಕಿಯಾದ ವಲಸೆ ಕಾರ್ಮಿಕರಿಗೆ ಪೂರ್ಣ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯವನ್ನು ಒದಗಿಸಬೇಕು. ಉಳಿಯಲು ಅಥವಾ ತಮ್ಮ ರಾಜ್ಯಗಳಿಗೆ ಮರಳಲು ಯಾರನ್ನೂ ಒತ್ತಾಯಿಸಬಾರದು. ಸಿಕ್ಕಿಬಿದ್ದ ವಲಸೆ ಕಾರ್ಮಿಕರಿಗೆ ಬಸ್ಸುಗಳು ಮತ್ತು ರೈಲುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಬೇಕು ”ಎಂದು ಅವರು ಲೇಖನದಲ್ಲಿ ಹೇಳಿದ್ದಾರೆ.

Click here Support Free Press and Independent Journalism

Pratidhvani
www.pratidhvani.com