ಭಾರತದಲ್ಲಿ 85,940 ತಲುಪಿದ ಕರೋನಾ ಪೀಡಿತರ ಸಂಖ್ಯೆ
ರಾಷ್ಟ್ರೀಯ

ಭಾರತದಲ್ಲಿ 85,940 ತಲುಪಿದ ಕರೋನಾ ಪೀಡಿತರ ಸಂಖ್ಯೆ

ದೇಶದಲ್ಲಿ ಅತೀ ಹೆಚ್ಚು ಪ್ರಕರಣ ಮಹಾರಾಷ್ಟ್ರದಲ್ಲಿ ದಾಖಲಾಗಿದ್ದು, ರಾಜ್ಯದಲ್ಲಿ ಈಗಾಗಲೇ 29,100 ಪ್ರಕರಣಗಳು ದಾಖಲಾಗಿದೆ. ಮರಣ ಪ್ರಮಾಣ 1,068 ತಲುಪಿರುವ ಮಹಾರಾಷ್ಟ್ರದಲ್ಲಿ 6564 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆಗೊಂಡಿದ್ದಾರೆ.

ಪ್ರತಿಧ್ವನಿ ವರದಿ

ಭಾರತದಲ್ಲಿ ಇದುವರೆಗೂ 85,940 ಕರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ದೇಶದಲ್ಲಿ ಇದುವರೆಗೂ 30,152 ಮಂದಿ ಕರೋನಾ ಸೋಂಕಿನಿಂದ ಗುಣಮುಖರಾಗಿದ್ದು, ಸದ್ಯ 53,035 ಪ್ರಕರಣಗಳು ಸಕ್ರಿಯವಾಗಿದೆ. ಕರೋನಾ ಸೋಂಕಿನಿಂದಾಗಿ ದೇಶದಾದ್ಯಂತ 2,752 ಮಂದಿ ಮೃತಪಟ್ಟಿದ್ದಾರೆ.

ದೇಶದಲ್ಲಿ ಅತೀ ಹೆಚ್ಚು ಪ್ರಕರಣ ಮಹಾರಾಷ್ಟ್ರದಲ್ಲಿ ದಾಖಲಾಗಿದ್ದು, ರಾಜ್ಯದಲ್ಲಿ ಈಗಾಗಲೇ 29,100 ಪ್ರಕರಣಗಳು ದಾಖಲಾಗಿದೆ. ಮರಣ ಪ್ರಮಾಣ 1,068 ತಲುಪಿರುವ ಮಹಾರಾಷ್ಟ್ರದಲ್ಲಿ 6564 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆಗೊಂಡಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಇದುವರೆಗೂ 1079 ಕರೋನಾ ಪಾಸಿಟಿವ್‌ ಪ್ರಕರಣಗಲು ಕಂಡುಬಂದಿದ್ದು 36 ಮಂದಿ ಕರೋನಾದಿಂದಾಗಿ ಅಸುನೀಗಿದ್ದಾರೆ. ರಾಜ್ಯದಲ್ಲಿ 494 ಮಂದಿ ಇದುವರೆಗೂ ಕರೋನಾ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ.

Click here Support Free Press and Independent Journalism

Pratidhvani
www.pratidhvani.com