ʼದಿ ವೈರ್ʼ‌ ಸಂಪಾದಕ ಸಿದ್ದಾರ್ಥ್‌ ವರದರಾಜನ್‌ಗೆ ನಿರೀಕ್ಷಣಾ ಜಾಮೀನು ನೀಡಿದ ಅಲಹಾಬಾದ್‌ ಕೋರ್ಟ್‌
ರಾಷ್ಟ್ರೀಯ

ʼದಿ ವೈರ್ʼ‌ ಸಂಪಾದಕ ಸಿದ್ದಾರ್ಥ್‌ ವರದರಾಜನ್‌ಗೆ ನಿರೀಕ್ಷಣಾ ಜಾಮೀನು ನೀಡಿದ ಅಲಹಾಬಾದ್‌ ಕೋರ್ಟ್‌

ರಾಷ್ಟ್ರಾದ್ಯಂತ ಲಾಕ್‌ಡೌನ್‌ ಘೋಷಿಸಿದ ನಂತರವೂ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ಅಯೋಧ್ಯ ರಾಮ ಮಂದಿರ ನಿರ್ಮಾಣದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದದ್ದನ್ನು ಮಾರ್ಚ್‌ 25ರಂದು ದಿ ವೈರ್‌ನಲ್ಲಿ ವರದಿ ಮಾಡಲಾಗಿತ್ತು.

ಪ್ರತಿಧ್ವನಿ ವರದಿ

ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ವಿರುದ್ದ ವರದಿ ಪ್ರಕಟಿಸಿದ್ದಕ್ಕಾಗಿ ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿದ್ದ ದ ವೈರ್‌ ಸ್ಥಾಪಕ ಸಂಪಾದಕ ಸಿದ್ದಾರ್ಥ್‌ ವರದರಾಜನ್‌ ಅವರಿಗೆ ಅಲಹಾಬಾದ್‌ ಕೋರ್ಟ್‌ ನಿರೀಕ್ಷಣಾ ಜಾಮೀನು ನೀಡಿದೆ. ರಾಷ್ಟ್ರಾದ್ಯಂತ ಲಾಕ್‌ಡೌನ್‌ ಘೋಷಿಸಿದ ನಂತರವೂ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ಅಯೋಧ್ಯ ರಾಮ ಮಂದಿರ ನಿರ್ಮಾಣದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದದ್ದನ್ನು ಮಾರ್ಚ್‌ 25ರಂದು ದಿ ವೈರ್‌ನಲ್ಲಿ ವರದಿ ಮಾಡಲಾಗಿತ್ತು.

ಸಿದ್ದಾರ್ಥ್‌ ಅವರ ವಿರುದ್ದ ಎರಡು ಎಫ್‌ಐಆರ್‌ಗಳು ದಾಖಲಾಗಿದ್ದವು. ಒಂದು ವರದಿ ಪ್ರಕಟಿಸಿದ್ದಕ್ಕಾಗಿ ಇನ್ನೊಂದು ಪ್ರಕಟಿಸಿದ ವರದಿಯನ್ನು ಟ್ವಟರ್‌ನಲ್ಲಿ ಹಂಚಿಕೊಂಡಕ್ಕಾಗಿ. ತಬ್ಲೀಗ್‌ ಜಮಾತ್‌ ಮತ್ತು ಯೋಗಿ ಆದಿತ್ಯನಾಥ್‌ ಕುರಿತ ವರದಿಯನ್ನು ಟ್ವಟರ್‌ನಲ್ಲಿ ಜೊತೆಯಾಗಿ ಹಂಚಿಕೊಂಡು ಕೋಮು ಭಾವನೆಯನ್ನು ಕೆರಳಿಸುವ ಪ್ರಯತ್ನ ಮಾಡಿಲಾಗಿದೆ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿತ್ತು.

ತಮ್ಮ ವಿರುದ್ದ ಎಫ್‌ಐಆರ್‌ ದಾಖಲಾಗಿದ್ದು ʼವಾಕ್‌ ಸ್ವಾತಂತ್ರ್ಯʼವನ್ನು ಹತ್ತಿಕ್ಕುವ ತಂತ್ರ ಎಂದು ಸಿದ್ದಾರ್ಥ್‌ ವರದರಾಜನ್‌ ಪರ ವಕೀಲ ಐ ಬಿ ಸಿಂಗ್ ವಾದಿಸಿದ್ದರು. ಅವರು ಮಾಡಿದಂತಹ ಎರಡೂ ಟ್ವೀಟ್‌ಗಳು ಆಧಾರ ಸಹಿತವಾಗಿ ನಡೆದಂತಹ ಘಟನೆಗಳು ಮತ್ತು ಆ ವರದಿಗಳು ಇತರ ಮಾಧ್ಯಮಗಳಲ್ಲಿಯೂ ಪ್ರಸಾರವಾಗಿದೆ ಮತ್ತು ಎಲ್ಲಿಯೂ, ಯೋಗಿ ಆದಿತ್ಯನಾಥ್‌ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿಲ್ಲ ಎಂದು ಯುಪಿ ಸರ್ಕಾರ ಹೇಳಿಲ್ಲ ಎಂದು ವಾದ ಮಂಡನೆ ಮಾಡಿದ್ದಾರೆ.

Click here Support Free Press and Independent Journalism

Pratidhvani
www.pratidhvani.com