ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕಾರ್ಮಿಕ ಹಿತರಕ್ಷಣಾ  ಕಾಯ್ದೆಗಳಿಗೆ ಕತ್ತರಿ: ಸುಪ್ರೀಂ ಕೋರ್ಟ್‌ಗೆ PIL
ರಾಷ್ಟ್ರೀಯ

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕಾರ್ಮಿಕ ಹಿತರಕ್ಷಣಾ ಕಾಯ್ದೆಗಳಿಗೆ ಕತ್ತರಿ: ಸುಪ್ರೀಂ ಕೋರ್ಟ್‌ಗೆ PIL

ದೀರ್ಘ ಲಾಕ್‌ಡೌನ್‌ ಹಾಗೂ ಆರ್ಥಿಕ ಕುಸಿತ ಹಿನ್ನಲೆಯಲ್ಲಿ ಯಾವ ಉದ್ಯಮರಂಗವೂ ಮೊದಲಿನಷ್ಟು ಲಾಭ ಮಾಡುತ್ತಿಲ್ಲ. ದೊಡ್ಡ ಲಾಭದ ನಿರೀಕ್ಷೆಯಲ್ಲಿ ಉದ್ಯಮಗಳಿಗೆ ಬಂಡವಾಳ ಹೂಡುವ ಬಂಡವಾಳಗಾರರಿಗೆ ಸದ್ಯ ಸಾಕಷ್ಟು ಲಾಭ ಬಾಚಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕಾರ್ಮಿಕ ಕಲ್ಯಾಣಕ್ಕಾಗಿ ಹಿಂದಿನ ಸರ್ಕಾರಗಳು ತಂದಿದ್ದ ಕಾರ್ಮಿಕ ಪರವಾದ ಹಲವು ಮುಖ್ಯ ಕಾನೂನುಗಳೊಂದಿಗೆ ರಾಜಿ ಮಾಡಿಕೊಂಡಿದೆ.

ಪ್ರತಿಧ್ವನಿ ವರದಿ

ಗುಜರಾತ್‌, ಉತ್ತರ ಪ್ರದೇಶ ಹಾಗೂ ಮಧ್ಯ ಪ್ರದೇಶದಲ್ಲಿ ಕಾರ್ಮಿಕ ಪರವಾಗಿರುವ ಕಾನೂನುಗಳನ್ನು ರದ್ದುಪಡಿಸಿರುವುದನ್ನು ಪ್ರಶ್ನಿಸಿ ಸುಪ್ರಿಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಗುಜರಾತ್‌, ಉತ್ತರ ಪ್ರದೇಶ ಹಾಗೂ ಮಧ್ಯ ಪ್ರದೇಶದಲ್ಲಿ ಕಾರ್ಮಿಕ ಪರವಾಗಿರುವ ಕಾನೂನುಗಳನ್ನು ರದ್ದುಪಡಿಸಿರುವುದನ್ನು ಪ್ರಶ್ನಿಸಿ ಸುಪ್ರಿಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ದೀರ್ಘ ಲಾಕ್‌ಡೌನ್‌ ಹಾಗೂ ಆರ್ಥಿಕ ಕುಸಿತ ಹಿನ್ನಲೆಯಲ್ಲಿ ಯಾವ ಉದ್ಯಮವೂ ಮೊದಲಿನಷ್ಟು ಲಾಭ ಮಾಡುತ್ತಿಲ್ಲ. ದೊಡ್ಡ ಲಾಭದ ನಿರೀಕ್ಷೆಯಲ್ಲಿ ಉದ್ಯಮಗಳಿಗೆ ಬಂಡವಾಳ ಹೂಡುವ ಬಂಡವಾಳಗಾರರಿಗೆ ಸದ್ಯ ಸಾಕಷ್ಟು ಲಾಭ ಬಾಚಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಇದರ ಹಿನ್ನಲೆಯಲ್ಲಿ ಉದ್ಯಮಿಗಳ ಹಿತಾಸಕ್ತಿಯನ್ನು ಬಯಸಿ ಬಿಜೆಪಿ ನೇತೃತ್ವದ ಆಡಳಿತವಿರುವ ಗುಜರಾತ್‌, ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದ ಸರ್ಕಾರಗಳು, ಕಾರ್ಮಿಕ ಕಲ್ಯಾಣಕ್ಕಾಗಿ ಹಿಂದಿನ ಸರ್ಕಾರಗಳು ತಂದಿದ್ದ ಕಾರ್ಮಿಕ ಪರವಾದ ಹಲವು ಮುಖ್ಯ ಕಾನೂನುಗಳೊಂದಿಗೆ ರಾಜಿ ಮಾಡಿಕೊಂಡಿದೆ. ಈ ಕುರಿತು ಸುಪ್ರೀಂ ಕೋರ್ಟಿನಲ್ಲಿ ವಕೀಲ ನಿರ್ಮಲ್‌ ಕುಮಾರ್‌ ಅಂಬಸ್ಥ ಮುಖಾಂತರ ಪಂಕಜ್‌ ಕುಮಾರ್‌ ಯಾದವ್‌ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ರಾಜ್ಯ ಸರ್ಕಾರಗಳು ರದ್ದು ಪಡಿಸಿದ ಕಾನೂನುಗಳಿಂದ, ಈ ಮೊದಲು 8 ಗಂಟೆಯಿದ್ದ ಕಾರ್ಮಿಕರ ದುಡಿಮೆಯ ಅವಧಿಯನ್ನು 12 ಗಂಟೆವರೆಗೂ ವಿಸ್ತರಿಸಿಕೊಳ್ಳಬಹುದು. ಉದ್ಯಮಗಳಿಗೆ ಕೊಡುವ ಈ ಕಾನೂನು ವಿನಾಯಿತಿಯಿಂದ 8 ಗಂಟೆ ಬದಲು 12 ಗಂಟೆಗಳ ಕಾಲ ಕಾರ್ಮಿಕರನ್ನು ದುಡಿಸಿಕೊಳ್ಳಬಹುದು. ಆದರೆ ಹೆಚ್ಚಿಗೆ ದುಡಿಯುವ ಕಾರ್ಮಿಕರಿಗೆ ಅಧಿಕ ಅವಧಿಯ ದುಡಿಮೆಯ ವೇತನವನ್ನು ಪಾವತಿಸುವ ಯಾವ ಹೊಣೆಗಾರಿಕೆಯೂ ಉದ್ಯಮದ ಮಾಲೀಕರ ಮೇಲಿರುವುದಿಲ್ಲ.

ಮೇ 6 ರಂದು ಯೋಗಿ ನೇತೃತ್ವದಲ್ಲಿ ಉತ್ತರ ಪ್ರದೇಶ ಸರ್ಕಾರ ನಡೆಸಿದ ಸಭೆಯಲ್ಲಿ ಕಾರ್ಮಿಕ ಪರವಾಗಿರುವ 38 ಕಾನೂನುಗಳಲ್ಲಿ ಮುಖ್ಯವಾದ 35 ಕಾನೂನುಗಳನ್ನು ರದ್ದು ಪಡಿಸಿ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ಹೀಗೆ ರದ್ದು ಪಡಿಸಲಾದ ಕಾನೂನುಗಳಿಂದಾಗಿ ಕಾರ್ಮಿಕರು ಉದ್ಯೋಗ ಭದ್ರತೆ, ಕನಿಷ್ಠ ವೇತನ ಪಡೆಯುವ ಹಕ್ಕು, ಬೋನಸ್‌, ಇನ್ಸುರೆನ್ಸ್‌ ಮೊದಲಾದವುಗಳಿಗೆ ಯಾವ ಭದ್ರ ಅಡಿಪಾಯವೂ ಇಲ್ಲದಂತಾಗಿದೆ.

Click here Support Free Press and Independent Journalism

Pratidhvani
www.pratidhvani.com