‘PLANDEMIC : THE HIDDEN AGENDA BEHIND COVID-19’ ಸಾಕ್ಷ್ಯ ಚಿತ್ರ ಬಿಚ್ಚಿಟ್ಟ ಸತ್ಯಗಳೇನು..?
ERNESTO BENAVIDES
ರಾಷ್ಟ್ರೀಯ

‘PLANDEMIC : THE HIDDEN AGENDA BEHIND COVID-19’ ಸಾಕ್ಷ್ಯ ಚಿತ್ರ ಬಿಚ್ಚಿಟ್ಟ ಸತ್ಯಗಳೇನು..?

ಜುಡಿ ಮಿಕೋವಿಟ್ಸ್ ಪ್ಲೇಗ್ ತೆರೆಯಲ್ಲಿ ನಡೆದ ಹುನ್ನಾವರನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ಇದೇ ಕಾರಣಕ್ಕೆಮಿಕ್ಕಿ ವಿಲ್ಲೀಸ್ ನಿರ್ಮಿಸಿದ ಈ ʼಕೋವಿಡ್ 19 ಹಿಂದಿನ ಹಿಡೆನ್ ಅಜೆಂಡಾʼ ಸಾಕ್ಷ್ಯ ಚಿತ್ರದಲ್ಲಿ ಜುಡಿ ಅವರನ್ನ ಸಂದರ್ಶಿಸಲಾಗಿದೆ. ಈ ಸಾಕ್ಷ್ಯ ಚಿತ್ರ ಈಗ ದೊಡ್ಡ ಮಟ್ಟದ ಚರ್ಚೆಯೊಂದಕ್ಕೆ ನಾಂದಿಹಾಡಿದೆ. ಈ ಸಾಕ್ಷ್ಯ ಚಿತ್ರದಲ್ಲಿ ಈ ಕೋವಿಡ್ 19 ಎಂಬುವುದು ಒಂದು ಹುನ್ನಾರವೆಂದು ಹೇಳಲಾಗಿದೆ.

ಆಶಿಕ್‌ ಮುಲ್ಕಿ

ಅಮೆರಿಕಾ ಮೂಲದ ನಿರ್ದೇಶಕ ಮಿಕ್ಕಿ ವಿಲ್ಲೀಸ್ ಎಂಬವರು PLANDEMIC: The Hidden Agenda Behind Covid-19 ಎಂಬ ಶಿರ್ಷಿಕೆಯಡಿ ಒಂದು ಸಾಕ್ಷ್ಯ ಚಿತ್ರ ತಯಾರಿಸಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ಸದ್ಯ ಇಡೀ ಜಗತ್ತಿನ ಚರ್ಚೆಯ ಕೇಂದ್ರ ಬಿಂದುವಾಗಿರುವ ಕರೋನಾ ವೈರಸ್ ಕುರಿತಾದ ವೀಡಿಯೋವಾಗಿದೆ. ವೀಡಿಯೋದಲ್ಲೂ ಹಲವು ವೈದ್ಯರ ತುಣುಕು ಮಾತುಗಳು, ಹಿರಿಯ ವೈದ್ಯರ ಹಳೆಯ ಭಾಷಣಗಳ ತುಣುಕುಗಳ ಜೊತೆಗೆ ಅಮೆರಿಕಾದ ಖ್ಯಾತ ಸಂಶೋಧಕಿ ಡಾ. ಜುಡಿ ಮಿಕೋವಿಟ್ಸ್ ಎಂಬವರ ಸಂದರ್ಶನವನ್ನು ಒಳಗೊಂಡಿದೆ.

ಈ ಹಿಂದೆ ಜುಡಿ ಮಿಕೋವಿಟ್ಸ್ ಬರೆದಿದ್ದ PLAGUE OF CORRUPTION ಎಂಬ ಕೃತಿ ದೊಡ್ಡ ಮಟ್ಟದಲ್ಲಿ ಸದ್ದಾಗಿತ್ತು. ಪ್ಲೇಗ್ ಎಂಬ ವೈರಾಣುವನ್ನು ಮುಂದಿಟ್ಟುಕೊಂಡು ನಡೆದ ಭ್ರಷ್ಟಾಚಾರದ ಜೊತೆಗೆ ವಿಜ್ಞಾನ ನಡೆದುಕೊಳ್ಳಬೇಕಾದ ರೀತಿ ಮತ್ತು ಪ್ಲೇಗ್ ಸೋಂಕಿನ ಬಗ್ಗೆ ವಿವರಿಸಿಲಾಗಿತ್ತು. ಈ ಕಾರಣಕ್ಕೆ ಆಗಿನ ಅಮೆರಿಕಾ ಸರ್ಕಾರ ಜುಡಿ ಮಿಕೋವಿಟ್ಸ್ ರನ್ನು ಜೈಲಿಗೆ ಅಟ್ಟಿತು. ಐದು ವರ್ಷದ ಸೆರೆವಾಸದ ಬಳಿಕ ಜುಡಿ ಬಿಡುಗಡೆಗೊಂಡು ಹೊರಬಂದಿದ್ದರು. ಆದರೆ ಈಗ ಮತ್ತೆ ಈ ವಿಚಾರವನ್ನುಮುನ್ನಲೆಗೆ ತಂದಿದ್ದು ಅಮೆರಿಕಾದ ನಿರ್ದೇಶಕ ಮಿಕ್ಕಿ ವಿಲ್ಲೀಸ್.

ಜುಡಿ ಮಿಕೋವಿಟ್ಸ್ ಪ್ಲೇಗ್ ತೆರೆಯಲ್ಲಿ ನಡೆದ ಹುನ್ನಾವರನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ಇದೇ ಕಾರಣಕ್ಕೆ ಮಿಕ್ಕಿ ವಿಲ್ಲೀಸ್ ನಿರ್ಮಿಸಿದ ಈ ʼಕೋವಿಡ್ 19 ಹಿಂದಿನ ಹಿಡೆನ್ ಅಜೆಂಡಾʼ ಸಾಕ್ಷ್ಯ ಚಿತ್ರದಲ್ಲಿ ಜುಡಿ ಅವರನ್ನ ಸಂದರ್ಶಿಸಲಾಗಿದೆ. ಈ ಸಾಕ್ಷ್ಯ ಚಿತ್ರ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ವೈರಲ್ ಆಗಿದ್ದು, ದೊಡ್ಡ ಮಟ್ಟದ ಚರ್ಚೆಯೊಂದಕ್ಕೆ ನಾಂದಿಹಾಡಿದೆ. ಈ ಸಾಕ್ಷ್ಯ ಚಿತ್ರದಲ್ಲಿ ಈ ಕೋವಿಡ್ 19 ಎಂಬುವುದು ಒಂದು ಹುನ್ನಾರವೆಂದು ಹೇಳಲಾಗಿದೆ. ಅಮೆರಿಕಾದ ರಾಷ್ಟ್ರೀಯ ಸಾಂಕ್ರಾಮಿಕ ರೋಗದ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ.ಅಂಟೋನಿ ಫೌಚಿ ಇದರ ಹಿಂದಿರುವ ಕಾಣದ ಕೈ ಎಂದು ನೇರವಾಗಿ ಆರೋಪಿಸಲಾಗಿದೆ. ಅಲ್ಲದೇ ಈ ಸಾಕ್ಷ್ಯ ಚಿತ್ರದಲ್ಲಿ ಕೆಲವು ವೈದ್ಯರ ಬೈಟ್ ಗಳನ್ನು ನೀಡಲಾಗಿದ್ದು, ಒಬ್ಬಾತ ವೈದ್ಯ, ರೋಗಿಯ ಮೃತ ಕಾರಣದ ಪಟ್ಟಿಯಲ್ಲಿ ಕೋವಿಡ್ 19 ಎಂದು ಸೇರಿಸಲು ಸರ್ಕಾರ ಒತ್ತಾಯಿಸಿತು ಎಂಬುವುದಾಗಿ ಹೇಳಿದ್ದಾರೆ.

ಸುಮಾರು 26 ನಿಮಿಷಗಳ ಈ ವಿಡಿಯೋದಲ್ಲಿ ಕೋವಿಡ್ 19 ಎಂಬ ವೈರಸ್ ಹರಡಿದ್ದಲ್ಲ ಬದಲಿಗೆ ಉದ್ದೇಶಪೂರ್ವಕವಾಗಿ ಹರಡಿಸಿದ್ದು ಎಂಬ ಮಹತ್ವದ ಅಂಶವನ್ನು ಸಂಶೋಧಕಿ ಜುಡಿ ಮಿಕೋವಿಟ್ಸ್ ಬಯಲು ಮಾಡಿದ್ದಾರೆ. ಇಡೀ ಜಗತ್ತೇ ನಂಬಿರುವ ಹಾಗೆ, ಕರೋನಾ ವೈರಸ್ ಮೊಟ್ಟಮೊದಲು ಕಾಣಿಸಿಕೊಂಡಿದ್ದು ಚೀನಾದ ವುಹಾನ್ ಎಂಬಲ್ಲಿ ಎಂಬುವುದರ ಬಗ್ಗೆ ಮಾತನಾಡಿದ ಜುಡಿ, ವುಹಾನ್ ನಲ್ಲಿರುವ ಲ್ಯಾಬೋರೇಟರಿಯೊಂದರಲ್ಲಿ ಮೊಟ್ಟಮೊದಲು ಈ ಕರೋನಾ ವೈರಸ್ ಮೊದಲು ಪತ್ತೆಯಾಗಿದೆ. ಆದರೆ ಈ ಲ್ಯಾಬ್ ಜತೆಗೆ ಅಮೆರಿಕಾದ ಸಾಂಕ್ರಾಮಿಕ ಇಲಾಖೆಯ ನಿರ್ದೇಶಕ ಫೌಚಿ ಅವರು ನಿಖಟ ಸಂಪರ್ಕ ಹೊಂದಿದ್ದಾರೆ ಎಂದು ಮತ್ತೊಂದು ಅನುಮಾನದ ಕಟ್ಟೆ ಹೊಡೆಸಿದ್ದಾರೆ.

ಅಂದಹಾಗೆ, ಸಂಶೋಧಕಿ ಜುಡಿ ಮಿಕೋವಿಟ್ಸ್ ಸದ್ಯಕ್ಕೆ ನಿವೃತ್ತಿ ಹೊಂದಿದ್ದಾರೆ. ಆದರೆ ಈ ಹಿಂದೆ ವೃತ್ತಿಯಲ್ಲಿರುವ ಸಂಧರ್ಭದಲ್ಲಿ ಇದೇ ಅಂಟೋನಿ ಫೌಚಿ ಅವರ ತಂಡದ ಭಾಗವಾಗಿದ್ದವರು ಇವರು. ಯಾವುದೇ ಸರ್ಕಾರ ಬಂದರೂ ಫೌಚಿ ಇಲಾಖೆಯ ನಿರ್ದೇಶಕರಾಗಿಯೇ ಉಳಿದುಬಿಡುತ್ತಾರೆ ಎಂಬುವುದನ್ನು ಜುಡಿಯವರು ವ್ಯಂಗ್ಯವಾಗಿ ನುಡಿದಿದ್ದಾರೆ.

ಈ ಸಂದರ್ಶನದಲ್ಲಿ ʻಭಯಾನಕʼ ಎಂಬ ಪದ ಉಪಯೋಗಿಸಿಕೊಂಡೇ ವಿಚಾರಗಳನ್ನು ಮುಂದಿಟ್ಟಿರುವ ಜುಡಿ, ಮಾನವೀಯತೆಯನ್ನು ಸೆರೆವಾಸದಲ್ಲಿ ಇಡಲಾಗಿದೆ ಎಂದು ಸಂಕಟ ಪಟ್ಟರು. ಮನುಷ್ಯನೊಳಗಿರುವ ಭಯವನ್ನು ಬಯಲಿಗೆಳೆದು ಅದನ್ನೇ ಬಂಡವಾಳ ಮಾಡಿಕೊಳ್ಳುವ ಪಿತೂರಿ ಸಿದ್ಧಾಂಥವನ್ನು ಪೋಷಿಸಲಾಗುತ್ತಿದೆ. ಇದೊಂದು ಷಡ್ಯಂತ್ರ ಎಂದು ಬೊಟ್ಟು ಮಾಡಿದರು. ಟ್ರಂಪ್ ಸರ್ಕಾರ ತನ್ನ ವೈದ್ಯರ ಮೇಲೆ ವಿನಾಃಕಾರಣ ಒತ್ತಡ ಹೇರುತ್ತಿದೆ ಮತ್ತು ಷಡ್ಯಂತ್ರ ರೂಪದಲ್ಲಿ ಕೋವಿಡ್ 19 ಬಗ್ಗೆ ಜನರಲ್ಲಿ ಭಯ ಹುಟ್ಟಿಸುವ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಸದ್ಯಕ್ಕೆ ಈ ಸಾಕ್ಷ್ಯ ಚಿತ್ರದ ಕುರಿತು ಅಂತರ್ಜಾಲ ವೇದಿಕೆಯಲ್ಲಿ ಭರದ ಚರ್ಚೆ ಸಾಗಿದ್ದು ಹತ್ತು ಹಲವು ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಅಲ್ಲದೇ ಕೆಲವು ತಾಣಗಳಲ್ಲಿ ಈ ವೀಡಿಯೋವನ್ನು ಅಪ್ಲೋಡ್ ಮಾಡಿದ ಕೆಲವೇ ಕೆಲವು ಸಮಯಗಳಲ್ಲಿ ವೀಡಿಯೋವನ್ನು ತಡೆಹಿಡಿಯಲಾಗಿದೆ. ಸದ್ಯಕ್ಕೆ ʼಬಿಟ್ ಚುಟ್ʼ ಎಂಬ ಅಂತರ್ಜಾಲ ತಾಣದಲ್ಲಿ ಟ್ರೆಂಡ್ ನಲ್ಲಿದೆ.

Click here Support Free Press and Independent Journalism

Pratidhvani
www.pratidhvani.com