ಕರೋನಾ ಲಾಕ್ ಡೌನ್ ಮಧ್ಯೆ ಕಡಲೆ ಮಿಠಾಯಿಗೆ ಸಿಕ್ತು GI ಮಾನ್ಯತೆ!
ರಾಷ್ಟ್ರೀಯ

ಕರೋನಾ ಲಾಕ್ ಡೌನ್ ಮಧ್ಯೆ ಕಡಲೆ ಮಿಠಾಯಿಗೆ ಸಿಕ್ತು GI ಮಾನ್ಯತೆ!

ಕಡಲೆ ಮಿಠಾಯಿ. ಆಡುಭಾಷೆಯ ಚಿಕ್ಕಿಗೆ ಈಗ Geographical Indication (GI) ಮಾನ್ಯತೆ ಸಿಕ್ಕಿದೆ. ಒಂದು ಕಡೆ ದೇಶದಲ್ಲಿ ಕರೋನಾದಿಂದಾಗಿ ಸಾಕಷ್ಟು ತೊಂದರೆಗಳಾಗಿವೆ. ಮತ್ತೊಂದು ಕಡೆ ಲಾಕ್ ಡೌನ್ ದೇಶದ ಆರ್ಥಿಕತೆಯ ದಿಕ್ಕನ್ನೇ ಬದಲಾಯಿಸಿ ಬಿಟ್ಟಿದೆ. ಬಹುಪಾಲು ಜನರು ಒಂದೊತ್ತಿನ ಹಿಟ್ಟಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈತನ್ಮಧ್ಯೆ ಕಡಲೆ ಮಿಠಾಯಿಗೆ ಜಿಯೋಗ್ರಾಫಿಕಲ್ ಇಂಡಿಕೇಷನ್ (GI) ಟ್ಯಾಗ್ ಸಿಕ್ಕಿದೆ.

ಪ್ರತಿಧ್ವನಿ ವರದಿ

ಈ ಜಿಯೋಗ್ರಾಫಿಕಲ್ ಇಂಡಿಕೇಷನ್ ಎಂದರೆ ಕಂಟ್ರೋಲರ್ ಆಫ್ ಜನರಲ್ ಪೇಟೆಂಟ್ ಇಲಾಖೆಯಿಂದ ನೀಡಲ್ಪಡುವ ಒಂದು ಹಿರಿಮೆಯಾಗಿದೆ. ಒಂದು ಪ್ರದೇಶದಲ್ಲಿರುವ ವಿಭಿನ್ನವಾದ ಆಹಾರ ಪದಾರ್ಥ, ಅಥವಾ ವಿಭಿನ್ನವಾದ ಸಂಸ್ಕೃತಿ ಯಾವುದೋ ಒಂದು ಊರನ್ನ ಅಥವಾ ಪಟ್ಟಣವನ್ನು ಸೂಚಿಸುತ್ತವೆ, ಇಲ್ಲವೇ ಆ ವಸ್ತು ಅಥವಾ ಆ ಸಂಸ್ಕೃತಿ ಅಲ್ಲೇ ಹುಟ್ಟಿಕೊಂಡಿರುತ್ತವೆ. ಇಂಥಾ ವಸ್ತುಗಳನ್ನ ಅಥವಾ ಸಂಸ್ಕೃತಿಗೆ ದೇಶೀಯ ಮಾನ್ಯತೆ ದೊರಕಿಸಿಕೊಡುವುದಾಗಿದೆ ಈ GI ಟ್ಯಾಗ್.

ಮೂಲತಃ ಈ ಕಡಲೆ ಮಿಠಾಯಿಯ ಹೆಸರು ‘ಕೋವಿಲ್ ಪಟ್ಟಿ ಕಡಲೈ ಮಿಠಾಯ್’ ಎಂದಾಗಿದೆ. ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕೋವಿಲ್‌ಪಟ್ಟಿ ಎಂಬಲ್ಲಿ ಇದನ್ನ ದೊಡ್ಡಮಟ್ಟದಲ್ಲಿ ಉತ್ಪಾದಿಸಲಾಗುತ್ತದೆ. ದೇಶದ ವಿವಿಧ ಭಾಗಗಳಲ್ಲಿ ಈ ಕಡಲೆ ಮಿಠಾಯಿಯನ್ನು ಉತ್ಪಾದಿಸಲಾಗುತ್ತಿದೆ ಆದರೂ, ಇಲ್ಲಯೇ ಇದರ ಮೂಲ ಇರುವುದು ಎಂಬ ನಂಬಿಕೆ ಇದೆ. ಇದೇ ಕಾರಣಕ್ಕೆ ಈಗಲೂ ಕೋವಿಲ್ ಪಟ್ಟಿಯಲ್ಲಿ ದೊಡ್ಡ ಉದ್ಯಮದ ರೀತಿಯಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಇದೇ ಕಾರಣಕ್ಕೆ ಈಗ ಕಡಲೆ ಮಿಠಾಯಿಗೆ GI ಟ್ಯಾಗ್ನ ಹಿರಿಮೆ ಲಭಿಸಿದೆ.

ತಮಿಳುನಾಡಿನ ಪಟ್ಟಣವೊಂದಕ್ಕೆ ಈ ರೀತಿ ಜಿಐ ಟ್ಯಾಗ್ ಸಿಗುತ್ತಿರುವುದು ಇದೇ ಮೊದಲೇನಲ್ಲ. ತಿರುನಲ್ವೆಲ್ಲಿಯಲ್ಲಿ ತಯಾರಾಗುವ ಹಲ್ವಾವನ್ನೂ ತಿರುನಲ್ವೆಲ್ಲಿ ಹಲ್ವಾ ಎಂದು ನಾಮಕರಣ ಮಾಡಿ GI ಟ್ಯಾಗ್ ನೀಡಲಾಗಿದೆ. ಸ್ರಿವಿಲ್ಲಪುತ್ತೂರ್ ಪಾಲ್ಕೋವಾ, ಪಳನಿ ಪಂಚಾಮೃದಂ, ಮಣ್ಣಪ್ಪಾರೈ ಮುರುಕ್ಕು, ಅಂಬೂರ್ ಬಿರಿಯಾನಿ ಮುಂತಾದವುಗಳಿಗೂ GI ಟ್ಯಾಗ್ ನೀಡಲಾಗಿದೆ. ಇದೀಗ ಈ ಸಾಲಿಗೆ ಕಡಲೆ ಮಿಠಾಯಿ ಕೂಡ ಸೇರ್ಪಡೆಯಾಗಿದೆ.

Click here Support Free Press and Independent Journalism

Pratidhvani
www.pratidhvani.com