Fact Check: ಸಸ್ಯಾಹಾರಿಗಳಿಗೆ ಕರೋನಾ ಸೋಂಕು ತಗಲುವುದಿಲ್ಲವೇ?
ರಾಷ್ಟ್ರೀಯ

Fact Check: ಸಸ್ಯಾಹಾರಿಗಳಿಗೆ ಕರೋನಾ ಸೋಂಕು ತಗಲುವುದಿಲ್ಲವೇ?

ಸನಾತನ ಸಂಸ್ಕೃತಿಯನ್ನು ಹಾಗೂ ಸಸ್ಯಹಾರ ಪದ್ಧತಿಯನ್ನು ಪ್ರತಿಪಾದಿಸಲು ವೈರಲ್ ಆದ ಈ ಸುದ್ದಿಗಳ ಒಳಗೆ ಬಲವಾದ ಯಾವ ಹುರುಳೂ ಇರಲಿಲ್ಲ. ಶಾಖಾಹಾರಿಗಳ ಶ್ರೇಷ್ಟತೆಯ ವ್ಯಸನ ಮತ್ತು ಮಾಂಸಹಾರಿಗಳ ಮೇಲಿನ ಅಸಹನೆ ಹರಡುವ ಉದ್ದೇಶದಿಂದ ಸುಳ್ಳು ಸುದ್ದಿಗಳನ್ನು ಹರಡಲಾಗಿತ್ತು.

ಪ್ರತಿಧ್ವನಿ ವರದಿ

ಸಸ್ಯಹಾರಿಗಳಿಗೆ ಕರೋನಾ ಸೋಂಕು ತಗುಲುವುದಿಲ್ಲವೆಂದು WHO ವರದಿ ಮಾಡಿದೆ. ಇದುವರೆಗೂ ಕರೋನಾದಿಂದಾಗಿ ಅಸು ನೀಗಿದವರ ಪೈಕಿ ಒಬ್ಬನೇ ಒಬ್ಬ ಸಸ್ಯಹಾರಿಗಳಿಲ್ಲ. ಅಧ್ಬುತ ಸನಾತನ ಹಿಂದೂ ಸಂಸ್ಕೃತಿ. ಜೈ ಹಿಂದುತ್ವ ಎಂದು ಬರೆದಿರುವ ಪೋಸ್ಟರ್‌ ಒಂದು ಎಲ್ಲೆಡೆ ವೈರಲ್‌ ಆಗಿತ್ತು.

ಈ ಬಗ್ಗೆ ಸತ್ಯಾಂಶ ತಿಳಿಯಲು ವಿಶ್ವಾಸ್‌ ನ್ಯೂಸ್‌ WHO ನ ಭಾರತದ ಪ್ರತಿನಿಧಿಯನ್ನು ಸಂಪರ್ಕಿಸಿತ್ತು. ಅವರು WHO ಇಂತಹ ಯಾವುದೇ ವರದಿ ತಯಾರಿಸಿಲ್ಲ, ಇದೊಂದು ಸುಳ್ಳು ಸುದ್ದಿ ಎಂದು ಗೊಂದಲಗಳಿಗೆ ತೆರೆ ಎಳೆದಿದ್ದಾರೆಂದು ಪತ್ರಿಕೆ ವರದಿಮಾಡಿದೆ.

Admin

ಅಸಲಿಗೆ ಚೈನಾದಲ್ಲಿ ಕರೋನಾ ಸೋಂಕು ಪತ್ತೆಯಾಗಿ ಭಾರತಕ್ಕೆ ತಲುಪುವಾಗ ಸೋಂಕು ಧಾರ್ಮಿಕ ಮತ್ತು ಸಾಂಸ್ಕೃತಿಕ ಆಯಾಮ ಪಡೆದಿತ್ತು. ಮಾಂಸಹಾರಿಗಳನ್ನು ಗುರಿಯಾಗಿಸಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್‌ ಶುರುವಾದವು. ಟ್ವಿಟರಿನಲ್ಲಿ #NoMeatNoCoronavirus ಎಂಬ ಹ್ಯಾಷ್‌ಟ್ಯಾಗ್‌ ಪರೋಕ್ಷವಾಗಿ ಮಾಂಸಹಾರಿಗಳು ರೋಗವನ್ನು ಹರಡುತ್ತಿದ್ದಾರೆಂಬ ಅಭಿಪ್ರಾಯವನ್ನು ಬಿತ್ತತೊಡಗಿದ್ದವು.

ಆದರೆ ಸನಾತನ ಸಂಸ್ಕೃತಿಯನ್ನು ಹಾಗೂ ಶಾಖಾಹಾರ ಪದ್ಧತಿಯನ್ನು ಪ್ರತಿಪಾದಿಸಲು ವೈರಲ್‌ ಆದ ಈ ಸುದ್ದಿಗಳ ಒಳಗೆ ಬಲವಾದ ಯಾವ ಹುರುಳೂ ಇರಲಿಲ್ಲ. ಶಾಖಾಹಾರಿಗಳ ಶ್ರೇಷ್ಟತೆಯ ವ್ಯಸನ ಮತ್ತು ಮಾಂಸಹಾರಿಗಳ ಮೇಲಿನ ಅಸಹನೆ ಹರಡುವ ಉದ್ದೇಶದಿಂದ ಅಷ್ಟೇ ಸುಳ್ಳು ಸುದ್ದಿಗಳನ್ನು ಹರಡಲಾಗಿತ್ತು.

ಶಾಖಾಹಾರಿಗಳು ಕರೋನಾ ಸೋಂಕಿಗೆ ತುತ್ತಾಗುವುದಿಲ್ಲವೆನ್ನುವುದು ಸುಳ್ಳು. ಶಾಖಾಹಾರಿಗಳೂ ಸೋಂಕಿಗೆ ತುತ್ತಾದ ಪ್ರಕರಣಗಳಿವೆ. ಮಾಂಸಹಾರ ಸೇವಿಸಬಾರದೆಂದು ಇದುವರೆಗೂ ಯಾವ ಮಾರ್ಗಸೂಚಿಯೂ ಬಂದಿಲ್ಲವೆಂದು ದೆಹಲಿಯ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ. ನಿಖಿಲ್‌ ಮೋದಿ ಹೇಳಿರುವುದಾಗಿ ವಿಶ್ವಾಸ್‌ ನ್ಯೂಸ್‌ ವರದಿ ಮಾಡಿದೆ.

Click here Support Free Press and Independent Journalism

Pratidhvani
www.pratidhvani.com