ನಿರ್ಮಲಾ ಸೀತರಾಮನ್‌ ಪತ್ರಿಕಾಗೋಷ್ಠಿ ಮುಖ್ಯಾಂಶಗಳು
ರಾಷ್ಟ್ರೀಯ

ನಿರ್ಮಲಾ ಸೀತರಾಮನ್‌ ಪತ್ರಿಕಾಗೋಷ್ಠಿ ಮುಖ್ಯಾಂಶಗಳು

25 ರಿಂದ 100 ಕೋಟಿ ರೂಪಾಯಿ ವಹಿವಾಟು ನಡೆಸುವ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂಪಾಯಿವರೆಗೆ ಸಾಲ ನೀಡಲಾಗುವುದು ಎಂದು ಕೇಂದ್ರ ವಿತ್ತ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.

ಪ್ರತಿಧ್ವನಿ ವರದಿ

ಮಾರ್ಚ್ 12 ರಂದು ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಲಾಕ್‌ಡೌನ್ ವಿಶೇಷ ಪ್ಯಾಕೇಜ್ ಘೋಷಿಸಿದ್ದರು. ವಿಶೇಷ ಪ್ಯಾಕೇಜ್ ಕುರಿತು ವಿವರಣೆ ನೀಡಲು ಪತ್ರಿಕಾಗೋಷ್ಠಿ ನಡೆಸಿದ ವಿತ್ತ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡಿರುವ ಪ್ಯಾಕೇಜ್ ಯೋಜನೆಗಳ ಸಮಗ್ರ ವಿವರಣೆ ನೀಡಿದ್ದಾರೆ. ಹಣಕಾಸು ಸಚಿವರ ಪತ್ರಿಕಾಗೋಷ್ಟಿಯ ಮುಖ್ಯಾಂಶಗಳು.

1. ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆ ವಲಯಕ್ಕೆ 3 ಲಕ್ಷ ಕೋಟಿ ಪ್ಯಾಕೇಜ್

2. 45 ಲಕ್ಷ ಕೈಗಾರಿಕೋದ್ಯಮಿಗಳಿಗೆ ಇದರಿಂದ ಅನುಕೂಲ.

3. ಎಂಎಸ್ಎಂಇಗಳಿಗೆ ಯಾವುದೇ ಅಡಮಾನವಿಲ್ಲದೇ ಸಾಲ.

4. 100 ಕೋಟಿ ಕೈಗಾರಿಕೋದ್ಯಮಿಗಳಿಗೆ ಇದರಿಂದ ಪ್ರಯೋಜನ.

5. 25 ರಿಂದ 100 ಕೋಟಿ ಒಳಗೆ ವಾಹಿವಾಟು ನಡೆಸುವವರಿಗೆ ಇದರ ಪ್ರಯೋಜನ

6. ಸಾಲ ಮರು ಪಾವತಿಗೆ ನಾಲ್ಕು ವರ್ಷ ಕಾಲಾವಕಾಶ.

7. ಮೂರು ತಿಂಗಳ ವರೆಗೂ ಎಟಿಎಂ ವಿಥ್ ಡ್ರಾಗೆ ಶುಲ್ಕವಿಲ್ಲ.

8. ಬ್ಯಾಂಕ್ಗಳು ನೀಡುವ ಸಾಲಕ್ಕೆ ಕೇಂದ್ರ ಸರ್ಕಾರವೇ ಗ್ಯಾರೆಂಟಿ.

9. ಸಂಕಷ್ಟದಲ್ಲಿರುವ ಸಣ್ಣ ಉದ್ಯಮಿಗಳಿಗೆ 20 ಸಾವಿರ ಕೋಟಿ ಸಹಾಯಧನ

10. ಸಾಲ ಪಡೆದು ಒಂದು ವರ್ಷದ ವರೆಗೆ ಸಾಲ ಮರುಪಾವತಿ ಇಲ್ಲ,

11. ಉತ್ಪಾದನೆ ಹೆಚ್ಚಿಸಿಕೊಳ್ಳಲು 10 ಸಾವಿರ ಕೋಟಿ ಸಾಲ.

12. ಅಕ್ಟೋಬರ್ 31 ವರೆಗೆ ಸಾಲ ಪಡೆಯಬಹುದು.

13. 200 ಕೋಟಿವರೆಗೂ ಗ್ಲೋಬಲ್ ಟೆಂಡರ್ ಇರುವುದಿಲ್ಲ,

14. ದೇಶಿ ಉದ್ಯಮಿಗಳಿಗೆ ಮಾತ್ರ ಟೆಂಡರ್ ಪ್ರಕ್ರಿಯೆಯಲ್ಲಿ ಅವಕಾಶ.

15. ಭಾರತೀಯ ಕಂಪನಿಗಳೊಡನೆ ವಿದೇಶಿ ಕಂಪನಿಗಳ ಸ್ಪರ್ಧೆ ಇರುವುದಿಲ್ಲ.

16. ಜೂನ್ ಜುಲೈ, ಆಗಸ್ಟ್‌ವರೆಗೆ ಪಿಎಫ್ ಕಟ್ಟುವ ಹಾಗಿಲ್ಲ, ಸರ್ಕಾರವೇ ಇದರ ಹೊಣೆ ಹೊರಲಿದೆ.

17. ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ 30 ಸಾವಿರ ಕೋಟಿ ರೂ.ನೆರವು.

18. 90 ಸಾವಿರ ಕೋಟಿ ವಿದ್ಯುತ್ ಕಂಪನಿಗಳಿಗೆ ಮೀಸಲು.

19. ವಿದ್ಯುತ್ನಲ್ಲಿ ಗ್ರಾಹಕರಿಗೆ ವಿನಾಯ್ತಿ ಕೊಟ್ಟರೆ ಮಾತ್ರ ಸಹಾಯಧನ.

19. ಸರ್ಕಾರಿ ಗುತ್ತಿಗೆದಾರರಿಗೆ ಬಿಗ್ ರೀಲಿಫ್, ಮುಂದಿನ 6 ತಿಂಗಳವರೆಗೂ ವಿಸ್ತರಣೆ.

20. ಗುತ್ತಿಗೆದಾರರ ಸಾಲಕ್ಕೆ ಕೇಂದ್ರ ಸರ್ಕಾರವೇ ಜವಾಬ್ದಾರಿ.

21. ನಾಳೆಯಿಂದ ಮಾರ್ಚ್ 31, 2021ರವೆಗೆ ಟಿಡಿಎಸ್/ಟಿಸಿಎಸ್‌ನಲ್ಲಿ ಶೇ.25ರಷ್ಟು ಕಡಿತ.

21 ಆದಾಯ ಮಾಹಿತಿ ತೆರಿಗೆ ಮಾಹಿತಿಗೆ ಅಕ್ಟೋಬರ್ 31ರ ವರೆಗೆ ಗಡುವು.

21 ಆದಾಯ ತೆರಿಗೆ ಮರುಪಾವತಿ ಅರ್ಜಿ ಸಲ್ಲಿಸಲು ನವೆಂಬರ್ ವರೆಗೂ ಕಾಲವಕಾಶ.

Click here Support Free Press and Independent Journalism

Pratidhvani
www.pratidhvani.com