ಆತ್ಮನಿರ್ಭರ್‌ ಪ್ಯಾಕೇಜ್:‌ ಇಂದು ಸಂಜೆ ನಿರ್ಮಲಾ ಸೀತರಾಮನ್‌ ಪತ್ರಿಕಾಗೋಷ್ಟಿ
ರಾಷ್ಟ್ರೀಯ

ಆತ್ಮನಿರ್ಭರ್‌ ಪ್ಯಾಕೇಜ್:‌ ಇಂದು ಸಂಜೆ ನಿರ್ಮಲಾ ಸೀತರಾಮನ್‌ ಪತ್ರಿಕಾಗೋಷ್ಟಿ

ಮೇ 12 ರಂದು ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕರೋನಾ ಸಂಕಷ್ಟ ಎದುರಿಸಲು ಬೃಹತ್ ಪ್ಯಾಕೇಜನ್ನು ಘೋಷಿಸಿದ್ದರು. ಭಾರತದ ಒಟ್ಟು ಜಿಡಿಪಿಯ ಹತ್ತು ಶೇಕಡಾ ಇರುವ ಈ ಪ್ಯಾಕೇಜಿನ ಕುರಿತು ಇನ್ನಷ್ಟು ವಿವರಗಳನ್ನು ಭಾರತದ ಹಣಕಾಸು ಸಚಿವರು ನೀಡುತ್ತಾರೆಂದು ಪ್ರಧಾನಿ ಭಾಷಣದಲ್ಲಿ ಹೇಳಿದ್ದರು.

ಪ್ರತಿಧ್ವನಿ ವರದಿ

ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾಡಿದ ಭಾಷಣದಲ್ಲಿ ಲಾಕ್‌ಡೌನ್‌ ಹಿನ್ನಲೆಯಲ್ಲಿ ನಷ್ಟಕ್ಕೀಡಾದ ಉದ್ಯಮಗಳಿಗೆ ನೆರವಾಗಲು ಹಾಗು ಆರ್ಥಿಕ ಪುನಶ್ಚೇತನಕ್ಕಾಗಿ 20 ಲಕ್ಷ ಕೋಟಿಯ ಪ್ಯಾಕೇಜ್‌ ಘೋಷಿಸಿದ್ದು ಈ ಕುರಿತ ಇನ್ನಷ್ಟು ವಿವರಗಳನ್ನು ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು ಪತ್ರಿಕಾಗೋಷ್ಟಿಯಲ್ಲಿ ನೀಡಲಿದ್ದಾರೆ.

ಮೇ 12 ರಂದು ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕರೋನಾ ಸಂಕಷ್ಟ ಎದುರಿಸಲು ಬೃಹತ್‌ ಪ್ಯಾಕೇಜನ್ನು ಘೋಷಿಸಿದ್ದರು. ಭಾರತದ ಒಟ್ಟು ಜಿಡಿಪಿಯ ಹತ್ತು ಶೇಕಡಾ ಇರುವ ಈ ಪ್ಯಾಕೇಜಿನ ಕುರಿತು ಇನ್ನಷ್ಟು ವಿವರಗಳನ್ನು ಭಾರತದ ಹಣಕಾಸು ಸಚಿವರು ನೀಡುತ್ತಾರೆಂದು ಪ್ರಧಾನಿ ಭಾಷಣದಲ್ಲಿ ಹೇಳಿದ್ದರು.

ಹಣಕಾಸು ಸಚಿವರು ನಡೆಸುವ ಪತ್ರಿಕಾಗೋಷ್ಟಿ ಇಂದು ಅಪರಾಹ್ನ 4 ಗಂಟೆಗೆ ನಡೆಯಲಿದ್ದು, ಮುಂದಿನ ದಿನಗಳಲ್ಲಿ ಹಣಕಾಸು ಇಲಾಖೆ ನಡೆಸುವ ಸರಣಿ ಪತ್ರಿಕಾಗೋಷ್ಟಿಯಲ್ಲಿ ಇದು ಮೊದಲನೆಯದ್ದು.

Click here Support Free Press and Independent Journalism

Pratidhvani
www.pratidhvani.com