ರೈಲು ಪ್ರಯಾಣಿಕರಿಗೆ ʼಆರೋಗ್ಯ ಸೇತುʼ App ಕಡ್ಡಾಯ!
ರಾಷ್ಟ್ರೀಯ

ರೈಲು ಪ್ರಯಾಣಿಕರಿಗೆ ʼಆರೋಗ್ಯ ಸೇತುʼ App ಕಡ್ಡಾಯ!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ‘ಆರೋಗ್ಯ ಸೇತು’ ಅಪ್ಲಿಕೇಶನ್ ಸರ್ಕಾರದ ಸ್ವಾಮ್ಯದಲ್ಲಿ ಇಲ್ಲ. ಬದಲಾಗಿ ಖಾಸಗಿ ಸಂಸ್ಥೆಯ ಅಧೀನಲ್ಲಿದೆ. ಹೀಗಾಗಿ ಮಾಹಿತಿ ಸೋರಿಕೆಯಾಗುವ ಆತಂಕ ಇದೆಯೆಂದು ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಮಾತಿಗೆ ಪುಷ್ಠಿ ಎಂಬಂತೆ, ಎಲಿಯಟ್ ಅಲ್ಡರ್ಸನ್ ಎಂಬ ಹ್ಯಾಕರ್ ʼಆರೋಗ್ಯ ಸೇತುʼ ಆಪ್ ಅನ್ನು ಹ್ಯಾಕ್ ಮಾಡಿ, ಇದು ಕಾರ್ಯ ಸಾಧ್ಯ ಎಂದು ಸಾಬೀತು ಮಾಡಿದರು.

ಪ್ರತಿಧ್ವನಿ ವರದಿ

ಲಾಕ್ ಡೌನ್ ಸಡಿಲಿಕೆ ಹಿನ್ನೆಲೆ ರೈಲ್ವೇ ಇಲಾಖೆ ವಿಶೇಷ ರೈಲು ಸಂಚಾರವನ್ನು ಆರಂಭಿಸಿದೆ. ಮೇ 12ರಿಂದ ದೆಹಲಿಯಿಂದ ದೇಶದ 15 ಪ್ರಮುಖ ನಗರಿಗಳಿಗೆ ವಿಶೇಷ ರೈಲು ಸಂಚಾರ ಆರಂಭಗೊಂಡಿದೆ. ಇದರ ಜೊತೆಗೆ ಇಲಾಖೆ ಕೆಲವು ಮಹತ್ವದ ನಿಯಮಾವಳಿಗಳನ್ನು ನೀಡೋದರ ಜೊತೆಗೆ ಶಿಸ್ತು ಬದ್ಧವಾಗಿ ನಡೆದುಕೊಳ್ಳಲು ತಾಕೀತು ಮಾಡಿದೆ. ಇದೀಗ ಈ ವಿಶೇಷ ರೈಲಿನಲ್ಲಿ ಸಂಚರಿಸುವ ಎಲ್ಲಾ ಪ್ರಯಾಣಿಕರು ಕೂಡ ಕಡ್ಡಾಯವಾಗಿ ʼಆರೋಗ್ಯ ಸೇತುʼ App ತಮ್ಮ ಮೊಬೈಲ್ ನಲ್ಲಿ ಹೊಂದಿಕೊಂಡಿರಬೇಕು ಎಂದು ಹೇಳಿದೆ.

ಆದರೆ ಮೇ 11ರ ಮಧ್ಯರಾತ್ರಿ ಟ್ವೀಟ್ ಮಾಡಿರುವ ರೈಲ್ವೇ ಇಲಾಖೆ “ನಾಳೆಯಿಂದ (ಮೇ 12) ವಿಶೇಷ ರೈಲು ಸಂಚಾರ ಆರಂಭಗೊಳ್ಳುತ್ತಿದೆ. ಈ ಹಿನ್ನೆಲೆ ಎಲ್ಲಾ ಪ್ರಯಾಣಿಕರು ‘ಆರೋಗ್ಯ ಸೇತು’ App ಡೌನ್ ಲೋಡ್ ಮಾಡಿಕೊಳ್ಳಲೇ ಬೇಕು” ಎಂದು ಕೋರಿಕೊಂಡಿದೆ.

ಮೇ 1ರಂದು ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ಈ ‘ಆರೋಗ್ಯ ಸೇತು’ App ಇನ್ಬಿಲ್ಟ್ ಮಾಡಬೇಕು ಎಂಬ ಬೇಡಿಕೆಯನ್ನು ಸರ್ಕಾರ ಮುಂದಿಟ್ಟಿತು. ಆದರೆ ಸದ್ಯಕ್ಕೆ ಉತ್ಪಾದನೆ ಸ್ಥಗಿತಗೊಂಡಿರುವ ಹಿನ್ನೆಲೆ ಅದನ್ನು ಕಾರ್ಯಗತ ಮಾಡುವುದು ಸಾಧ್ಯವಾಗದೆ ಹೋಯ್ತು. ಆದರೂ ಪ್ರಧಾನಿ ಮೋದಿ ಸಿಂಗಾಪುರ ಮತ್ತು ದಕ್ಷಿಣ ಕೊರಿಯಾದಲ್ಲಿ ಅಲ್ಲಿನ ಅಪ್ಲಿಕೇಶನ್ ಸೋಂಕನ್ನು ಟ್ರ್ಯಾಕ್ ಮಾಡಲು ಸಹಕಾರಿಯಾಗಿರೋದನ್ನು ಉದಾಹರಿಸುತ್ತಾ ಹೆಚ್ಚಿನ ಸಂಖ್ಯೆಯಲ್ಲಿ ಈಆರೋಗ್ಯ ಸೇತು’ ಡೌನ್ ಲೋಡ್ ಮಾಡಿಕೊಳ್ಳಿ ಎಂದು ಕೇಳಿಕೊಂಡಿದ್ದರು.

ಇದಾದ ಮರುದಿನವೇ ಅಂದರೆ ಮೇ 2ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ‘ಆರೋಗ್ಯ ಸೇತು’ ಅಪ್ಲಿಕೇಶನ್ ಸರ್ಕಾರದ ಸ್ವಾಮ್ಯದಲ್ಲಿ ಇಲ್ಲ. ಬದಲಾಗಿ ಖಾಸಗಿ ಸಂಸ್ಥೆಯ ಅಧೀನಲ್ಲಿದೆ. ಹೀಗಾಗಿ ಮಾಹಿತಿ ಸೋರಿಕೆಯಾಗುವ ಆತಂಕ ಇದೆಯೆಂದು ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಮಾತಿಗೆ ಪುಷ್ಠಿ ಎಂಬಂತೆ, ಎಲಿಯಟ್ ಅಲ್ಡರ್ಸನ್ ಎಂಬ ಹ್ಯಾಕರ್ ʼಆರೋಗ್ಯ ಸೇತುʼ ಆಪ್ ಅನ್ನು ಹ್ಯಾಕ್ ಮಾಡಿ, ಇದು ಕಾರ್ಯ ಸಾಧ್ಯ ಎಂದು ಸಾಬೀತು ಮಾಡಿದರು. ಇದು ಈಗಾಗಲೇ ಅಪ್ಲಿಕೇಶನ್ ಹೊಂದಿರುವ 9 ಕೋಟಿ ಭಾರತೀಯರ ಗೌಪ್ಯ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇದೆ ಎಂಬ ರಾಹುಲ್ ಗಾಂಧಿ ಮಾತಿಗೆ ಬಲ ತುಂಬಿತು.

ಮಾಹಿತಿ ಕಾಪಿಟ್ಟುಕೊಳ್ಳುವುದರಲ್ಲಿ ಇಷ್ಟೆಲ್ಲಾ ಅನುಮಾನವಿದ್ದರೂ ಕೂಡ ರೈಲ್ವೇ ಇಲಾಖೆ ಮತ್ತೆ ಪ್ರಯಾಣಿಕರಿಗೆ ʼಆರೋಗ್ಯ ಸೇತುʼ App ಡೌನ್ ಲೋಡ್ ಮಾಡಿಕೊಳ್ಳಿ ಎಂದು ಸೂಚಿಸಿದೆ.

Click here Support Free Press and Independent Journalism

Pratidhvani
www.pratidhvani.com