ರೈಲು ಪ್ರಯಾಣಿಕರು ಪಾಲಿಸಬೇಕಾದ ಸೂತ್ರಗಳು.!
ರಾಷ್ಟ್ರೀಯ

ರೈಲು ಪ್ರಯಾಣಿಕರು ಪಾಲಿಸಬೇಕಾದ ಸೂತ್ರಗಳು.!

ಲಾಕ್‌ ಡೌನ್‌ ಸಡಿಲಿಕೆ ಹಿನ್ನೆಲೆಯಲ್ಲಿ ರೈಲು ಸೇವೆ ನಾಳೆಯಿಂದ ಆರಂಭಗೊಳ್ಳಲಿದೆ. ಆದರೆ ಇಲಾಖೆ ಆರೋಗ್ಯದ ದೃಷ್ಟಿಯಿಂದ ಹಲವು ಷರತ್ತುಗಳನ್ನು ಪ್ರಯಾಣಿಕರಿಗೆ ವಿಧಿಸಿದೆ.

ಪ್ರತಿಧ್ವನಿ ವರದಿ

ನಾಳೆಯಿಂದ ದೇಶದಾದ್ಯಂತ ರೈಲು ಸೇವೆ ಆರಂಭಗೊಳ್ಳಲಿದೆ. ಕಳೆದ 54 ದಿನಗಳ ಕಾಲ ಸಂಪೂರ್ಣವಾಗಿ ರೈಲ್ವೇ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಲಾಕ್‌ ಡೌನ್‌ ಮೂರನೇ ಹಂತ ಜಾರಿಯಲ್ಲಿದ್ದರೂ ಕೂಡ ಅಲ್ಪ ಮಟ್ಟಿಗೆ ಸಡಿಲಿಕೆ ನೀಡಲಾಗಿದೆ. ಈ ಹಿನ್ನೆಲೆ ರೈಲು ಸೇವೆಯನ್ನು ಸರ್ಕಾರ ಪುನರಾರಂಭಿಸಿದೆ. ಆದರೆ ಇದೇ ವೇಳೆ ಕೇಂದ್ರ ರೈಲ್ವೇ ಇಲಾಖೆ ಕೆಲವು ಷರತ್ತುಗಳನ್ನು ಪ್ರಯಾಣಿಕರಿಗೆ ವಿಧಿಸಿದೆ. ಅವು ಕೆಳಗಿನಂತಿವೆ.

ರೈಲ್ವೇ ಇಲಾಖೆ ಬಿಡುಗಡೆಗೊಳಿಸಿದ ನಿಯಮಗಳು :

- ಎಲ್ಲಾ ರೈಲುಗಳು ನವ ದೆಹಲಿಯಿಂದ ಹೊರಟು ದೇಶದ ಪ್ರಮುಖ 15 ನಗರಗಳಿಗೆ ತಲುಪಲಿದೆ. (ದಿಬ್ರುಘಾ, ಅಗರ್ತಲ, ಹೌರ, ಪಾಟ್ನ, ಬಿಸ್ಲಾಪುರ್‌, ರಾಂಚಿ, ಭುಬನೇಶ್ವರ್‌, ಸಿಖಂದರಾಬಾದ್, ಬೆಂಗಳೂರು, ಚೆನ್ನೈ, ತಿರುವನಂತಪುರಂ, ಮಡ್ಗಾವ್ನ್‌, ಮುಂಬೈ ಸೆಂಟ್ರಲ್‌, ಅಹಮದಾಬಾದ್‌ ಮತ್ತು ಜಮ್ಮು ತಾವಿ)

- ನಿಲ್ದಾಣದಲ್ಲಿರುವ ಟಿಕೆಟ್‌ ಕೌಂಟರ್‌ ಗಳನ್ನು ತೆರೆಯಲಾಗಿರುವುದಿಲ್ಲ.

- ರೈಲುಗಳಿಗೆ ಸಾಮಾನ್ಯ ಬೋಗಿಗಳಿರುವುದಿಲ್ಲ.

- ಎಲ್ಲಾ ರೈಲು ಬೋಗಿಗಳು ಕೂಡ ಹವಾನಿಯಂತ್ರಿತವಾಗಿರುತ್ತದೆ ಮತ್ತು ನಿಯಮಿತ ನಿಲ್ದಾಣದಲ್ಲಷ್ಟೇ ನಿಲುಗಡೆ ಇದೆ.

- ಪ್ರಯಾಣಿಕರಿಗಷ್ಟೇ ನಿಲ್ದಾಣದೊಳಕ್ಕೆ ಪ್ರವೇಶ.

- ಪ್ರಯಾಣಿಕರು ಖಡ್ಡಾಯವಾಗಿ ಮುಖಕವಚ (ಮಾಸ್ಕ್)‌ ಧರಿಸಬೇಕು. ಹತ್ತುವ ಮತ್ತು ಇಳಿಯುವ ನಿಲ್ದಾಣದಲ್ಲಿ ಹಾಗೂ ಕೋಚ್‌ಗಳಲ್ಲಿ ಸ್ಯಾನಿಟೈಸರ್‌ ನೀಡಲಾಗುತ್ತದೆ. ಕಡ್ಡಾಯವಾಗಿ ಬಳಸಬೇಕು.

- ರೈಲು ಏರುವ ನಿಲ್ದಾಣದಲ್ಲಿ ಥರ್ಮಲ್‌ ಸ್ಕ್ರೀನಿಂಗ್‌ ಮಾಡಲಾಗುತ್ತದೆ.

- ಕರೋನಾ ಲಕ್ಷಣರಹಿತ ಜನರಿಗಷ್ಟೇ ಪ್ರಯಾಣಕ್ಕೆ ಅವಕಾಶ.

- ತತ್ಕಾಲ್‌ ಟಿಕೆಟ್‌ ಪಡೆದ ಪ್ರಯಾಣಿಕರಿಗೆ ಅವಕಾಶವಿಲ್ಲ.

- ಯಾವುದೇ ಆರ್‌ಎಸಿ ಅಥವಾ ವೈಟಿಂಗ್‌ ಲಿಸ್ಟ್‌ ಟಿಕೆಟ್‌ ನೀಡಲಾಗುವುದಿಲ್ಲ.

- ಪ್ರಯಾಣದ ವೇಳೆ ಎಲ್ಲಾ ಪ್ರಯಾಣಿಕರು ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

- ಟಿಕೆಟ್‌ ಕ್ಯಾನ್ಸಲ್‌ ಮಾಡಿದ್ದಲ್ಲಿ ಶೇ.50ರಷ್ಟು ಮಾತ್ರ ಮರುಪಾವತಿ ಮಾಡಲಾಗುವುದು.

- 24 ಗಂಟೆಗೂ ಮುಂಚಿತವಾಗಿಯೇ ಟಿಕೆಟ್‌ ಕ್ಯಾನ್ಸಲ್‌ ಮಾಡಿಕೊಳ್ಳಲು ಅವಕಾಶ.

- ರೈಲಿನಲ್ಲಿ ಆಹಾರ ವ್ಯವಸ್ಥೆ ಮಾಡಲಾಗಿರುತ್ತದೆ. ಆದರೆ ಅದಕ್ಕೆ ಹೆಚ್ಚುವರಿ ಹಣ ನೀಡಬೇಕಿದೆ.

ರೈಲುಗಳ ವೇಳಾಪಟ್ಟಿ
ರೈಲುಗಳ ವೇಳಾಪಟ್ಟಿ

Click here Support Free Press and Independent Journalism

Pratidhvani
www.pratidhvani.com